ಯುವ ಸ್ವಾಮೀಜಿಯಿಂದ ವಿಶಿಷ್ಟ ನಿಜಾಚರಣೆ ಸ್ಮರಣೋತ್ಸವ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ತಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಮನೆಯವರಿಗೆ ಒಂದು ಗಿಡವನ್ನು ಅದನ್ನು ಜೋಪಾನವಾಗಿ ಬೆಳೆಸಲು ಹೇಳುತ್ತಾರೆ.

ನಂಜನಗೂಡು

ಮೂಡಗೂರು ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಲಿಂಗೈಕಾರಾಗಿರುವ ಲೇ. ಕಾಟಿ ಬಸವರಾಜುರವರ ಧರ್ಮಪತ್ನಿ ಶ್ರೀಮತಿ ಸರೋಜರವರ ಮಗ ರಾಜಶೇಖರರ ಸ್ಮರಣೋತ್ಸವವನ್ನು ಇಷ್ಟಲಿಂಗ ಪೂಜೆಯನ್ನು ಮಾಡಿಸುವ ಮೂಲಕ ನೆರವೇರಿಸಿದರು.

ಜೊತೆಗೆ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣರವರ ಭಾವಚಿತ್ರಕ್ಕೆ ಗುರುಗಳು ಮತ್ತು ಮನೆಯವರು ಪುಷ್ಪಾರ್ಚನೆಯನ್ನು ಮಾಡಿದರು.

ದುಃಖದಲ್ಲಿದ್ದ ಮನಯೆವರಿಗೆ ಶ್ರೀಗಳು ಲಿಂಗಾಯಿತರಲ್ಲಿ ಮರಣವೆ ಮಹಾನವಮಿ ತತ್ವವಿರುವುದರಿಂದ ಯಾರೂ ಸಂತಾಪಿಸಬಾರದು. ಲಿಂಗೈಕ್ಯರಾದವರನ್ನು ಲಿಂಗದಲ್ಲಿ ನೆನೆಯುತ್ತಾ ಬದುಕನ್ನು ನಡೆಸಬೇಕು. ಬದುಕಿನಲ್ಲಿ ಬರಬಹುದಾದ ಕಷ್ಟ ಸುಖಗಳೆಲ್ಲವನ್ನು ಸಮಾನವಾಗಿ ಸ್ವೀಕರಿಸಿ ಸಂತೋಷವಾಗಿ ಬದುಕುವುದೇ ಲಿಂಗಾಯತ ತತ್ವ ಎಂದು ಹೇಳಿದರು. ಶ್ರೀಗಳು ಇಷ್ಟಲಿಂಗದ ಮಹತ್ವದ ಬಗ್ಗೆಯೂ ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀಗಳು ‘ಮರವನ್ನು ಬೆಳೆಸಿ ಧರೆಯನ್ನು ಉಳಿಸಿ’ ಎಂದು ಹೇಳಿ ಒಂದು ಗಿಡವನ್ನು ಮನೆಯವರಿಗೆ ಕೊಟ್ಟರು. ತಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಮನೆಯವರಿಗೆ ಶ್ರೀಗಳು ಒಂದು ಗಿಡವನ್ನು ಅದನ್ನು ಜೋಪಾನವಾಗಿ ಬೆಳೆಸಲು ಹೇಳುತ್ತಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಮೂಡಗೂರು ಗ್ರಾಮದ ಉದ್ದಾನೇಶ್ವರ ವಿರಕ್ತ ಮಠದ 27 ವರ್ಷದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಚಿಕ್ಕ ವಯಸ್ಸಿನಲ್ಲಿಯೇ ಬಸವ ತತ್ವಕ್ಕೆ ದುಡಿಯುತ್ತಿದ್ದಾರೆ. 50 ಮಕ್ಕಳು ಕಲಿಯುತ್ತಿರುವ ಒಂದು ವಚನ ಶಾಲೆಯನ್ನು ತೆರೆದಿದ್ದಾರೆ. ಎಲ್ಲಾ ಬಸವಾದಿ ಶರಣರ ಜಯಂತಿಗಳನ್ನು ಮಠದಲ್ಲಿ ನಡೆಸಲು ಶುರು ಮಾಡಿದ್ದಾರೆ.

ಒಂದು ವಚನ ಗ್ರಂಥಾಲಯ ಮತ್ತು ವಿಭೂತಿ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನೂ ಹೊಂದಿದ್ದಾರೆ.

ಸ್ವಾಮೀಜಿ ಎಂ.ಸಿ.ಎ (Master of Computer Applications) ಪದವೀಧರರು.

Share This Article
4 Comments
  • ಗುಂಡ್ಲುಪೇಟೆ ತಾಲೋಕಿನ ಮೂಡಗೂರು ಶ್ರೀಗಳು ಉತ್ತಮ ಯೋಗಿಗಳು msc ಪದವೀಧರರಾದ ಇವರು ಕಿರಿಯ ವಯಸ್ಸಿನಲ್ಧಿ ಶರಣರ ವಿಚಾರಗಳನ್ನ ಅರಿತಿದ್ದು. ಸಾವಯವ ಕೃಷಿಯಲ್ಲಿಯೂ ನಿಪುಣರು ಹಾಗು ಬಸವ ತತ್ವಸಿದ್ದಾಂತಗಳನ್ನ ಅರಿತು ಎಲ್ಲಾ ಕಡೆ ಪ್ರಚಾರ ಮಾಡುವುದಲ್ಲದೆ. ತಮ್ಮ ಮಠದಲ್ಲಿ ಪ್ರತಿ ತಿಂಗಳು ಬಸವ ಪುರಾಣ ಓದಿಸುತಿದ್ದಾರೆ. ಹಾಗು ಬಸವಾದಿಶರಣರ ವಿಚಾರ ತಿಳಿಯಲು ಉತ್ತರ ಕರ್ನಾಟಕದ ಹಲವು ಮಠಗಳ ಬೇಟಿ ಜೊತೆಗೆ ಬಸವ ಕಲ್ಯಾಣದವರೆಗೂ ಶರಣರ ಕ್ಷೇತ್ರಗಳನ್ನ ನೋಡಿ ಆನಂದ ಪಟ್ಟಿದ್ದಾರೆ. ಈ ಶ್ರೀಗಳಿಗೆ ಅನಂತ ಶರಣು

    • ಅಲ್ಲಯ್ಯಾ ಓಂಕಾರ ಶರಣರೆ, ನೀವೇನು ಮಾಡುತ್ತಿರುವಿರಿ. ತಾವು ಮಾಡುವುದಿಲ್ಲ , ಮಾಡುವವರಿಗೂ ಪ್ರೋತ್ಸಾಹಿಸುದಿಲ್ಲ. ಅವರ ಜತೆ ಸಮಾಲೋಚನೆ ಮಾಡಿ ಕೈಜೋಡಿಸಿದರೆ ಒಳ್ಳೆಯದಲ್ಲವೇ? ಏನ,,, ನಮ್ಮ ಜನಾನೋ? ಶರಣು ಶರಣಾರ್ಥಿಗಳು 🙏🙏

  • ಹೌದಾ ಮೊದಲು ಅವರಿಗೆ ಅಡ್ಡ ಪಲ್ಲಕ್ಕಿ ಉತ್ಸವ ಆಚರಣೆ ಬಿಡೋಕೆ ಹೇಳಿ ಲಿಂಗಾಯತ ಧರ್ಮದ ಕುರಿತು ಲಿಂಗವತ ಜನರನ್ನು ಬಿಟ್ಟು ಲಿಂಗವನ್ನ ಗೊತ್ತೇ ಇಲ್ಲದ ಜನರ ಬೀದಿಗಳಿಗೆ ಹೋಗಿ ಅವರ ನಡುವೆ ಇರುವ ಅಸಮಾನತೆ ಬಗ್ಗೆ ಮಾಹಿತಿ ಕೊಟ್ಟು ಸಮಾನತೆ ಧರ್ಮ ಬಸವ ಧರ್ಮ ದ ಅರಿವು ಮೂಡಿಸಿ ಅವರನ್ನು ಲಿಂಗವಂತ ಜನರಾಗಿ ಮಾಡಿ ಅವರ ಮನೆ ಮನೆ ಭೇಟಿ ನೀಡಿ ಅವರ ಊರಿನಲ್ಲಿ ಇರುವ ಎಲ್ಲ ಸಮುದಾಯದ ಜನರಿಗೆ ಶರಣ ಧರ್ಮ ಬಗ್ಗೆ ಮಾಹಿತಿ ಕೊಡಿ ಅವಾಗ ಅದು ದೊಡ್ಡ ಮಟ್ಟದಲ್ಲಿ ಸಾಧನೆ ಆಗುತ್ತೆ ಗಿಡ ಕಟ್ಟೋ ಬದಲು ಅವರ ಎಲ್ಲ ಮನೆಯ ಜನರಿಗೆ ಇಷ್ಟ ಲಿಂಗ ಕಟ್ಟಿ ತೆಗೆಯಬಾರದು ಅನ್ನೋ ಮಾಹಿತಿ ಕೊಡಿ

  • ಎದರಿಗೆ ಇರುವ ವ್ಯಕ್ತಿ ಗೆ ಮೊದಲ ಲಿಂಗ ಸರಿಯಾಗಿ ಅಕೊಂಡ್ಡನು ಹೇಳಿ ಆಮೇಲೆ ಗಿಡ ನೆಡುವ ಕಾರ್ಯಕ್ರಮ ಅಯ್ಯೋ ಇಂಥವೆಲ್ಲ ಕಾಣೋಲ

Leave a Reply

Your email address will not be published. Required fields are marked *