ಬೆಂಗಳೂರು
ರಾಜ್ಯ ತನ್ನ 69ನೇ ಕರ್ನಾಟಕ. ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸ್ವಾಗಾತಾರ್ಹ ಮತ್ತು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಹೆಮ್ಮೆ .
ಆದರೆ ಮತ್ತೊಂದೆಡೆ , ಕರ್ನಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಸ್ಥಾಪನೆಯಾದ ಕರ್ನಾಟಕದ ಕನ್ನಡ ವಿಶ್ವವಿದ್ಯಾಲಯ ಹಣದ ಕೊರತೆಯಿಂದ ಮುಚ್ಚುವ ಪರಿಸ್ಥಿತಿಗೆ ಬಂದಿದೆ.
ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದ ಅನುದಾನಗಳು ಕುಸಿಯುತಿದ್ದು ಸಿಬ್ಬಂದಿ ಸಂಬಳ ಹಾಗೂ ನಿತ್ಯ ಖರ್ಚುಗಳಿಗೂ ಹಣವಿಲ್ಲದಂತಾಗಿದೆ .ಸುಮಾರು 1,200 ವಿದ್ಯಾರ್ಥಿಗಳನ್ನು ಓದುತ್ತಿರುವ ಈ ವಿಶ್ವವಿದ್ಯಾಲಯವು ತನ್ನ ಕನಿಷ್ಠ ವೆಚ್ಚವನ್ನು ಭರಿಸಲು ಅನುದಾನವಿಲ್ಲದೆ ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಿದೆ .
ಹಲವು ಖಾಯಂ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ ಮತ್ತು ಹಂಗಾಮಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಂಬಳ ಪಾವತಿಸಲು ಹಣವಿಲ್ಲದಾಗಿದೆ. ಈ ಹಂಗಾಮಿ ಮತ್ತು ಹೊರಗುತ್ತಿಗೆ ನೌಕರರಿಗೆ ಸುಮಾರು ಒಂದು ವರ್ಷದಿಂದ ಸಂಬಳ ಪಾವತಿಯಾಗಿಲ್ಲ.
1991 ರಲ್ಲಿ 700 ಎಕರೆ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯ, ಹಾಸ್ಟೆಲ್‌ಗಳು, 22 ಸಂಶೋಧನಾ ವಿಭಾಗಗಳು ಮತ್ತು 32 ಕಟ್ಟಡಗಳೊಂದಿಗೆ ಈ ವಿಶ್ವವಿದ್ಯಾಲಯವನ್ನು, ಕನ್ನಡವನ್ನು ಉತ್ತೇಜಿಸಲು ಮತ್ತು ಪೋಷಿಸಲು, ಭಾಷೆಯ ಬೆಳವಣಿಗೆಗೆ ಸಹಾಯ ಮಾಡಲು, ಸಂಶೋಧನೆ ಮತ್ತು ಇತರ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಸಹಾಯ ಮಾಡಲು ಉದ್ದೇಶಿಸಿ ಸ್ಥಾಪಿಸಲಾಯಿತು .
ಆದರೆ, ಅದೇ ವಿಶ್ವವಿದ್ಯಾಲಯ ಹಣಕಾಸಿನ ತೀವ್ರ ಬಿಕ್ಕಟ್ಟಿಗೆ ಒಳಗಾಗಿ ನಿರಂತರ ಕುಸಿತ ಕಂಡಿದ್ದು ಈಗ ಮುಚ್ಚುವ ಹಂತ ತಲುಪಿದೆ.
ಕನ್ನಡದ ಈ ಏಕೈಕ ವಿಶ್ವವಿದ್ಯಾಲಯವನ್ನು ಉಳಿಸಿ ಬೆಳಸಿ ಸುಸ್ಥಿರಗೊಳಿಸಲು ಅಗತ್ಯ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನಾವು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮತ್ತು ಈ ವಿಶ್ವವಿದ್ಯಾಲಯ ಸಬಲೀಕರಣಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ತಗೆದುಕೊಳ್ಳಲು ಒತ್ತಾಯಿಸುತ್ತೇವೆ.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ
ನಿರಂಜನಾರಾಧ್ಯ ವಿ ಪಿ , ಬೆಂಗಳೂರು
ಬಸವರಾಜ ಸೂಳಿಭಾವಿ ಗದಗ
ಕೆ ಪಿ ಸುರೇಶ ಬೆಂಗಳೂರ
ಸನತಕುಮಾರ ಬೆಳಗಲಿ ಬೆಂಗಳೂರ
ಬಿ. ಎಲ್. ಪಾಟೀಲ ಅಥಣಿ
ಡಾ. ಎಚ್ ಎಸ್ ಅನುಪಮಾ ಕವಲಕ್ಕಿ
ಅನಿಲ ಹೊಸಮನಿ ವಿಜಯಪುರ
ಪ್ರೊ. ಅಶೋಕ ಶೆಟ್ಟರ ಧಾರವಾಡ
ಚಂದ್ರಶೇಖರ ತಾಳ್ಯ ಚಿತ್ರದುರ್ಗ
ಡಾ. ಹೇಮಾ ಪಟ್ಟಣಶೆಟ್ಟಿ ಧಾರವಾಡ
ಶ್ರೀನಿವಾಸ ಕಕ್ಕಿಲಾಯ ಮಂಗಳೂರ
ಡಾ. ಬಿ. ಆರ್ ಸತ್ಯನಾರಾಯಣ ಬೆಂಗಳೂರ
ನಾ ದಿವಾಕರ ಮೈಸೂರ
ಪ್ರಾ. ಎ. ಬಿ. ಹಿರೇಮಠ ಮುಂಡರಗಿ
ಕ.ಮ. ರವಿಶಂಕರ, ಚಿತ್ರದುರ್ಗ
ಮುತ್ತು ಬಿಳೆಯಲಿ ಗದಗ
ಕೆ. ನಾರಾಯಣ ಸ್ವಾಮಿ, ಕೋಲಾರ
ಬಿ ಸಿದ್ದಪ್ಪ ಹಿರಿಯೂರ
ಡಾ ವೆಂಕಟಯ್ಯ ಅಪ್ಪಗೆರೆ ಬಳ್ಳಾರಿ
ಟಿ ಕೆ ಗಂಗಾಧರ ಪತ್ತಾರ ಬಳ್ಳಾರಿ
ಡಾ. ದಾದಾಪೀರ್ ನವಿಲೇಹಾಳ ದಾವಣಗೆರೆ
ಮಲ್ಲಪ್ಪನಹಳ್ಳಿ ಮಹಲಿಂಗಯ್ಯ ಹಿರಿಯೂರು
ಎಚ್.ಎಸ್.ಬಸವಪ್ರಭು, ಕಲಬುರಗಿ.
ಡಾ. ಯಲ್ಲಪ್ಪ ಹಿಮ್ಮಡಿ ಬೆಳಗಾವಿ
ಡಾ. ಸೂರ್ಯಕಾಂತ ಸುಜ್ಯಾತ್ ಕಲಬುರ್ಗಿ
ಟಿ ಎನ್ ಷಣ್ಮುಖ ದಾವಣಗೆರೆ
ಶಶಿ ಅಪೂರ್ವ, ಮಂಡ್ಯ
ಶರಣಪ್ಪ ಬಾಚಲಾಪುರ ಕೊಪ್ಪಳ
ಪ್ರದೀಪ ಮಾಲ್ಗುಡಿ ಘಟಪ್ರಭ
ಶಂಕರ ಪಾಟೀಲ ಕಲಬುರ್ಗಿ
ಮಲ್ಲಮ್ಮ ಯಾಳವಾರ ವಿಜಯಪುರ
ಸಿ ಮಂಜುನಾಥ ಬಳ್ಳಾರಿ
ಶಿವಕುಮಾರ ಉಪ್ಪಿನ ವಿಜಯಪುರ
ಡಾ. ಉದಯಕುಮಾರ ಇರ್ವತ್ತೂರ ಮಂಗಳೂರ
ಬಿ. ಶ್ರೀನಿವಾಸ ದಾವಣಗೆರೆ
ನೂರ್ ಜಹಾನ್, ಹೊಸಪೇಟೆ
ಡಿ. ಎಂ. ಬಡಿಗೇರ ಕೊಪ್ಪಳ
ಡಾ.ವಾಗೀಶ ಎಂ ಆರ್, ಹೊಸಪೇಟೆ
ವಿಜಯಕಾಂತ ಪಾಟೀಲ ಹಾನಗಲ್ಲ
ಬಿ ಪಿ ಜನಾರ್ದನ ರಾಜ ಅರಸ ಶಿಕಾರಿಪುರ
ಪ್ರಿಯಾಂಕ ಮಾವಿನಕರ ಕಲಬುರ್ಗಿ
ಪ್ರಾ. ಮಹಾಂತೇಶ ಮಲ್ಲನಗೌಡರ, ಕೊಪ್ಪಳ
ಮಧುರ ಎನ್ ಕೆ ದಾವಣಗೆರೆ
ಚೆನ್ನು ಕಟ್ಟೀಮನಿ ವಿಜಯಪುರ
ನಾಗರಾಜು ಸಬ್ಬನಹಳ್ಳಿ ಮಂಡ್ಯ
ಎಂ. ಎಲ್. ಸೋಮವರದ ಮಂಡ್ಯ
ಭೀಮನಗೌಡ ಪರಗೊಂಡ ಅಥಣಿ
ರುದ್ರಪ್ಪ ಭಂಡಾರಿ ಕುಕನೂರ
ಚೇತನ ಕಣಿವೇಹಳ್ಳಿ
ಈರಪ್ಪ ಸುತಾರ ಜಮಖಂಡಿ
ಎಸ್ ಎ ಗಫಾರ ಕೊಪ್ಪಳ
ಮಹಾಂತೇಶ ಕೊತಬಾಳ ಕೊಪ್ಪಳ
ಎನ್ ಬಷೀರುದ್ದೀನ ಸೇಡಂ
ಅನ್ವರ ಹುಬ್ಬಳ್ಳಿ , ಅಣ್ಣಿಗೇರಿ