ಜತ್ತದಲ್ಲಿ ಲಿಂಗಾಯತ ನಿಜಾಚರಣೆಯಂತೆ ಬಿಗ್ ಬಜಾರ್ ಉದ್ಘಾಟನೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಜತ್ತ

ಜತ್ತ ತಾಲೂಕಿನ ಬೀಳೂರು ಪಟ್ಟಣದ ಶರಣ ರವಿ ಚೆನ್ನಪ್ಪ ಕುಹಳ್ಳಿ ಅವರ ಬಿಗ್ ಬಜಾರ್
ನೂತನ ಕಟ್ಟಡದ ಉದ್ಘಾಟನೆಯನ್ನು ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಸಲಾಯಿತು.

ಜಮಖಂಡಿಯ ಬಸವ ಕೇಂದ್ರದ ಶರಣ ದಂಪತಿಗಳಾದ ರಾಜಶ್ರೀ ಹಾಗೂ ಅಣ್ಣಾಸಾಹೇಬ ಜಗದೇವ ಅವರು ವಚನಮೂರ್ತಿಗಳಾಗಿ ಕಾರ್ಯ ನೆರವೇರಿಸಿದರು.

ಮೊದಲು ಸರ್ವರಿಗೂ ವಿಭೂತಿ ಧಾರಣೆ ಮಾಡಿಸಲಾಯಿತು. ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ಎಲ್ಲರಿಂದ ಪುಷ್ಪಾರ್ಪಣೆ ನಡೆಯಿತು. ಶರಣೆ ಜಯಶ್ರೀ ಅವರು ಶರಣರ ವಚನಗಳನ್ನು ಹಾಡಿದರು.

ನಂತರ ಅನುಭಾವ ನಡೆಯಿತು. ಬಸವಾದಿ ಶರಣರು ಸ್ಥಾಪಿತ ಲಿಂಗಾಯತ ಧರ್ಮದ ಸಂಸ್ಕಾರಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ನಾವೆಲ್ಲ ಕಾಯಕನಿಷ್ಠ ಧರ್ಮೀಯರಾಗಬೇಕು. ಲಿಂಗಾಯತರಾದ ನಾವೆಲ್ಲ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಸಂಪನ್ನತೆ ಸಾಧಿಸಬೇಕು. ನಮ್ಮ ಮಕ್ಕಳಿಗೆ ಲಿಂಗಧಾರಣೆ ಮಾಡಿಸಿ, ಅವರಿಗೆ ಲಿಂಗಾನುಸಂಧಾನ ಕಲಿಸಬೇಕೆಂದು ಶರಣ ಅಣ್ಣಪ್ಪ ಜಗದೇವ ಹೇಳಿದರು.

ಇದೇ ಸಂದರ್ಭದಲ್ಲಿ ರವಿ ಕುಹಳ್ಳಿ ಅವರ ತಂದೆ ಚನ್ನಪ್ಪ, ತಾಯಿ ಗಂಗಮ್ಮ ಅವರನ್ನು ಸತ್ಕರಿಸಲಾಯಿತು.

ನೂರಾರು ಜನ ಶರಣ, ಶರಣೆಯರು, ಕುಹಳ್ಳಿ ಬಂಧು-ಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share This Article
3 Comments
  • ಶುಭವಾಗಲಿ,
    ಈ ಕಾಯ೯ ಮಾಡಿದವರಿಗೆ ,ಮಾಡಿಸಿ ದೇವರಿಗೂ ಶರಣು ಶರಣಾಥಿ೯ಗಳು.

  • ಮಹಾರಾಷ್ರದಲ್ಲಿ ಇರುವ ಜತ್ತದಲ್ಲಿ ಲಿಂಗಾಯತ ನಿಜಾಚರಣೆಯಂತೆ ನೂತನ ಬ್ಯಸಿನೆಸ್ ಶುರು ಮಾಡಿರುವುದು ಖುಷಿ ತಂದಿತು, ಹೊರ ರಾಜ್ಯಗಳಲ್ಲಿಯೂ ಬಸವ ತತ್ವಗಳ ಆಚರಣೆ , ವಚನ ಸಾಹಿತ್ಯದ ಅಸ್ಮಿತೆಯೇ ನಮ್ಮ ಉಸಿರು ಎನ್ನುವ ಸಂದೇಶ ಕರ್ನಾಟಕದಲ್ಲಿರುವ ನಮಗೂ ಇವರ ನಡೆ ಅಭಿಮಾನ ಮೂಡಿಸಿದೆ

Leave a Reply

Your email address will not be published. Required fields are marked *