ಬೆಳಗಾವಿ
ಇತ್ತೀಚೆಗೆ ಬೀದರಿನ ವಕ್ಫ ವಿರೋಧಿ ಸಭೆಯಲ್ಲಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಬಸವಣ್ಣನವರಂತೆ ಹೊಳೆ ಹಾರಿ ಸಾಯಿರಿ ಎಂಬ ಹೇಳಿಕೆ ನೀಡಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಲಿಂಗಾಯತ ಧರ್ಮ ಸಂಸ್ಥಾಪಕ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಅತ್ಯಂತ ಕೀಳುಮಟ್ಟದ, ವಿವೇಕ ರಹಿತ, ಅಸಂಬಧ್ಧ ಹೇಳಿಕೆಯನ್ನು ಯತ್ನಾಳರು ನೀಡಿದ್ದಾರೆ.
ಯತ್ನಾಳರ ಈ ಹೇಳಿಕೆ ಅವರ ಮಾನಸಿಕ ಅಸ್ಥತ್ವತೆ ಹಾಗೂ ಹತಾಶ ಭಾವನೆಯನ್ನು ತೋರುತ್ತದೆ. ಅಧಿಕಾರ ಲಾಲಸೆಗಾಗಿ ಯಾರನ್ನೋ ಮೆಚ್ಚಿಸಲು, ಯಾರನ್ನೋ ಓಲೈಸಲು ತನ್ನ ಧರ್ಮ ಗುರುವನ್ನೇ ಅವಮಾನಿಸಿದ ಯತ್ನಾಳರ ಈ ಹೇಯವಾದ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಉಗ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರ ಹೇಳಿಕೆಯಿಂದ ಕೋಟ್ಯಾಂತರ ಬಸವಾಭಿಮಾನಿಗಳಿಗೆ ಆಘಾತ ಹಾಗೂ ಮನಸ್ಸಿಗೆ ನೋವು ಉಂಟಾಗಿದೆ. ಆವೇಶಭರಿತರಾಗಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ನೀಡಿರುವ ಅಸಂಬದ್ಧ ಹೇಳಿಕೆಯನ್ನು ತತ್ ಕ್ಷಣ ಹಿಂಪಡೆದು ಸಾರ್ವಜನಿಕವಾಗಿ, ಬೇಷರತ್ತಾಗಿ ಯತ್ನಾಳರು ಕ್ಷಮೆ ಕೋರಬೇಕೆಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಇಷ್ಟೊಂದು ಜನರು ಮತ್ತು ಸಂಘಟನೆಗಳು ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾರಣಕ್ಕೆ ಹೇಳಿಕೆ ಆಕಸ್ಮಾತ್ ಬಂದದ್ದು ನಿಮಗೆಲ್ಲ ನೋವಾಗಿದ್ದರೆ ಹಿಂಪಡೆಯುತ್ತೇನೆ ಎಂದು ಹೇಳಬಹುದು. ಇವರಿಗೆ ಸರಿಯಾದ ಬುದ್ಧಿ ಕಲಿಸಬೇಕಿದ್ದಲ್ಲಿ ಲಿಂಗಾಯತ ಸಮೂಹ ನಮ್ಮ ಧರ್ಮ ಸಂಸ್ಥಾಪಕ ಮತ್ತು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಇಷ್ಟೊಂದು ಕೀಳು ಮತ್ತು ಅಸಹ್ಯಕರವಾದ ಮಾತುಗಳನ್ನಾಡಿರುವ ಇವರಿಗೆ ಮತ ಹಾಕದಂತೆ ಎಲ್ಲಾ ಬಸವೆಪರ ಸಂಘಟನೆಗಳು ಕರೆಕೊಡಬೇಕು. ಇದು “ಧರ್ಮ ನಿಂದನೆ” ಇವರಿಗೆ ರಾಜಕೀಯ ಬಹಿಷ್ಕಾರ ಹಾಕಬೇಕು.
ಯತನಾಳ ಅವರು ಮಾತನಾಡಿದ್ದು ತಪ್ಪು. ಯಾರೂ ಬಸವನ್ನನವರು ಐಕ್ಯವಾದದ್ದನ್ನು ನೋಡಿಲ್ಲ. ದೈವ ಸಂಪನ್ನ ವಿಶವ ಗುರುವಿಗೆ ಹೀಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು.
ಇದು ಬಸವನಗೌಡ ಯತ್ನಾಳ ಮಾತಾಗಿದ್ದರೂ ಆರ್‌ಎಸ್ ಎಸ್, ಬಿಜೆಪಿಯ ಒಳ ಮಾತಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಈ ತಾತ್ಪರ್ಯದ ಮಾತುಗಳನ್ನು ಆರ ಎಸ್ ಎಸ್ ಹಿಂಭಾಲಕರು ಪ್ರಚಾರ ಮಾಡುತ್ತಿರುವುದರಿಂದಲೇ ಬಸವಣ್ಣನ ಬಗ್ಗೆ ಪ್ರತಿ, ಗೌರವ ಇಲ್ಲದಂತೆ ಸಮಾಜದಲ್ಲಿ ಮಾಡುತ್ತಿದ್ದಾರೆ.
ಬಿಜೆಪಿ ಎಂದಿಗೂ ಲಿಂಗಾಯತರ ಪರವಾಗಿ ನಿಲ್ಲಲು ಸಾಧ್ಯವೇ ಇಲ್ಲ..ಏಕೆಂದರೆ ಬ್ರಾಹ್ಮಣ್ಯಕ್ಕೆ ಬಸವವಣ್ಣ ವಿಚಾರಗಳೆ ಎದಿರೇಟು ನೀಡುತ್ತಿರುವುದರಿಂದ ಬಸವಣ್ಣನನ್ನು ಅಪ್ರಸ್ತುತಗೊಳಿಸಲು ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತಿದೆ…
ಅಷ್ಟಕ್ಕೂ, ಯತ್ನಾಳ್ ಮೇಲೆ ಅವರು ಏನಾದರೂ ಕ್ರಮ ಜರುಗಿಸುತ್ತಾರೆಯೇ….?
ಈ ರೀತಿಯ ಹುಚ್ಚನೆಂದೆ ಹೇಳಿಕೊಳ್ಳುವ ವ್ಯಕ್ತಿಗಳ ಮೂಲಕವೇ ಯಾರನ್ನು, ಯಾವ ದರ್ಮವನ್ನು, ಗುಂಪನ್ನು ಅಮಾನ್ಯಗೊಳಿಸು ಪ್ರಯತ್ನವನ್ನು ಇಂತಹವರಿಂದಲೇ ಮಾಡಿಸುತ್ತಾರೆ…ಅದಕ್ಕೆ ಈಗಲೂ ಯತ್ನಾಳ್ ಹುಚ್ಚನಾಗಿಯೂ, ಬಿಜೆಪಿಯ ನಾಯಕನಾಗಿಯೂ ಇರಲೇಬೇಕಿದೆ, ಇದು ಆರ್‌ಎಸ್‌ಎಸ್ ಕುತಂತ್ರ.
ಲಿಂಗಾಯತ ಧಮಿ೯ಯರನ್ನು ಒಗ್ಗೂಡಿಸುವುದು ಯಸ್ಟುಮುಖ್ಯವೋ, ಇಂಥಹ ಹೇಳಿಕೆಗಳನ್ನು ಖಂಡಿಸಿ ಅಂಥವರಿಗೆ ಪಾಠಕಲಿಸುವುದೂ ಅಸ್ಟೇ ಮುಖ್ಯ .
ಬೆಳಗಾವಿ ಜಾ ಲಿಂ ಮಾ ,ದ ತಿಮಾ೯ನ ಸರಿಯಾಗಿದೆ.
ಸಾಧ್ಯವಾದರೆ ಜಾಗತಿಕ ಲಿಂಗಾಯತ ಮಹಾಸಭಾ ಯತ್ನಾಳರನ್ನು ಲಿಂಗಾಯತ ಸಮಾಜದಿಂದ ಬಹಿಕ್ಷರಿಸಬೇಕು ಮತ್ತು ಸಮಸ್ತ ಲಿಂಗಾಯತ ಸಮಾಜದವರು ಅವರಿಗೆ ಮತ ಚಲಾಯಿಸದಂತೆ ಮನವಿಯನ್ನು ಮಾಡಿಕೊಳ್ಳಬೇಕು.