ಇಂತಹವರು ಸಂವಿಧಾನದ ಬದಲಾವಣೆ ಮಾತಾಗಳಾಡಿದಾಗ ಇವರ ಹುಟ್ಟಡಗಿಸಲು ಭಾರತದ ಪ್ರತಿಯೊಬ್ಬ ಪ್ರಜೆ ಇವರ ವಿರುದ್ಧ ಧ್ವನಿ ಎತ್ತಲೇಬೇಕು
ಬಸವಕಲ್ಯಾಣ
“ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಜಾತ್ಯಾತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು.” ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮೊನ್ನೆ ಬೆಂಗಳೂರಿನ ಸಮಾವೇಶವೊಂದರಲ್ಲಿ ಮಾತನಾಡಿದ ಮಾತುಗಳು ಇವು.
ಈ ಜಾತಿವಾದಿ ವೈದಿಕರಿಗೆ ಮಂಡಿಯೂರಿ ಗೌರವಿಸುವ ಮನು ಸಂವಿಧಾನ ಬರಬೇಕಂತೆ…ಈ ದೇಶ ಜಾತ್ಯಾತೀತ ರಾಷ್ಟ್ರವಾಗಿರುವುದು ಬೇಡವಂತೆ. ಇದು ನಿಮಗೆ ಮೈಲಿಗೆ ಎನ್ನಿಸಿದರೆ, ಇಲ್ಲವೆ ಇಲ್ಲಿ ಗೌರವದಿಂದ ನಿಮಗೆ ಬದುಕಲು ಸಾಧ್ಯವಾಗುವುದಿಲ್ಲವಾದರೆ, ನಿಮಗೆ ಮರ್ಯಾದೆ, ಗೌರವದಿಂದ ಕಾಪಾಡುವ ದೇಶಕ್ಕೆ ಹೋಗಿ ಬಿಡಿ ಸ್ವಾಮಿ. ನಿಮ್ಮ ಈ ತಾರತಮ್ಮ ನೀತಿಯಿಂದ ನಮಗೂ ನಿಮ್ಮ ಜೊತೆ ಬದುಕಲು ಇಷ್ಟವಿಲ್ಲ.
ಶತಶತಮಾನದಿಂದ ಭಾರತದ ಈ ಮಣ್ಣಿನ ಮೂಲನಿವಾಸಿಗಳಾದ ನಮಗೆ ನೀವೆಷ್ಟು ಗೌರವದಿಂದ ನಡೆಸಿಕೊಂಡು ಬಂದಿರುವಿರಿ ಎಂಬುದು ಈ ಭಾರತದ ಇತಿಹಾಸ ಚೆನ್ನಾಗಿ ಬರೆದುಕೊಂಡಿದೆ. “ಬಂದ ದಾರಿಗೆ ಸುಂಖವಿಲ್ಲ” ಎಂಬ ಗಾದೆ ನುಡಿಯಂತೆ ಹೋಗಿ ಬಿಡಿ, ಬೇಡ ಅಂದವರ್ಯಾರು ಸ್ವಾಮಿ.
ಬುದ್ಧ, ಬಸವರ ಆಶಯಗಳು
ಒಬ್ಬ ದಲಿತ ಮೂಲದ ಅಂಬೇಡ್ಕರ್ ಬರೆದ ಸಂವಿಧಾನ ಎಂದೂ, ಅದರೊಳಗೆ ಗುರು ಬಸವಾದಿ ಶರಣರ ವಚನ ಸಾಹಿತ್ಯದ ಆಶಯಗಳಿವೆ ಎಂದೂ, ಬುದ್ಧನ ಮಾನವೀಯತೆ ಧರ್ಮದ ಮಾತುಗಳಿವೆ ಎಂದೂ, ಬಹುತ್ವ ಸಂಸ್ಕೃತಿಗಳಿಗೆ ಬದುಕುವ ಹಕ್ಕು ಇದೆ ಎಂಬ ಕಾರಣಗಳಿಗೆ ಮನುವಿನ ಹುಳಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇವರ ಅಂಗದ ಭೂಗರ್ಭದೊಳಗೆ ಕಳೆದ 77ವರ್ಷದಿಂದ ತಡೆಯಲಾರದ ಕೊತಕೊತನೆ ಕುದಿದು, ಜ್ವಾಲಾಮುಖಿ ಕಿಚ್ಚು ಧಗಧಗನೇ ಉರಿಯುತ್ತಿದೆ. ಇನ್ನಾದರೂ ತಣ್ಣಾಗಾಗುತ್ತಿಲ್ಲ. ಸತ್ಯವೆಂಬುದು ಹೀಗೆ ಅಲ್ಲವೇ ಅದು ನುಂಗಲು ಆಗುತ್ತಿಲ್ಲ ಉಗುಳಲು ಆಗುತ್ತಿಲ್ಲ.
ದೇವರ ದೃಷ್ಟಿಯಲ್ಲಿ ಸಮಾನತೆಗಿಂತ ಮನುಷ್ಯರ ದೃಷ್ಟಿಯಲ್ಲಿ ಸಮಾನತೆ ಇರಬೇಕು ಎಂಬ ಸಂವಿಧಾನದ ವಿಚಾರಗಳು ಅವರನ್ನು ಹೇಗೆ ನಿದ್ರಿಸಲು ಬಿಡುತ್ತಿವೆ ಹೇಳಿ. ಅದೇನೇ ಇರಲಿ ಬ್ರಿಟೀಷರು ಭಾರತವನ್ನು 200ವರ್ಷಗಳ ಕಾಲ ನಮ್ಮನ್ನಾಳಿ ಸಿಕ್ಕಿದ್ದಷ್ಟು ಸಂಪತ್ತು ದೋಚಿದ್ದಾರೆ ಎಂಬುದು ನಮಗೂ ಕಟುಸತ್ಯ. ಅಷ್ಟೇ ಸತ್ಯ ಶತಶತಮಾನಗಳ ಕಾಲ ಮೇಲ್ಜಾತಿಯವರು ಕೆಳಜಾತಿಯವರನ್ನು ಮಾನಸಿಕವಾಗಿ ಗುಲಾಮರಾಗಿಸಿಕೊಂಡು ಪ್ರಾಣಿಗಳಂತೆ ನಿಕೃಷ್ಟವಾಗಿ ಕಂಡು ದುಡಿಸಿಕೊಂಡಿದ್ದು ಅಷ್ಟೇ ಕಟುಸತ್ಯವಾಗಿದೆ. ಅದೇನೇ ಇರಲಿ, ಬ್ರಿಟೀಷರನ್ನು ಬಿಟ್ಟೋಡಿಸಲು ಭಾರತೀಯರೆಲ್ಲರೂ ಜಾತಿ, ಮತ, ಪಂಥ, ಪಂಗಡ, ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಒಗ್ಗಟ್ಟಾಗಿ ಹೋರಾಡಿ ಕಳೆದ 74 ವರ್ಷದ ಹಿಂದೆ ನಮಗೆ ನಾವೇ ಸಂವಿಧಾನ ರಚಿಸಿಕೊಂಡು ಒಂದಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು ಅಷ್ಟೇ ಸತ್ಯವಲ್ಲವೇ.
ಹಾಗಿದ್ದ ಮೇಲೆ ಸಂವಿಧಾನ ಬದಲಾಯಿಸಬೇಕು, ತರತಮ್ಯ ಆಧಾರದ ಮೇಲೆ ದೇಶವನ್ನು ನಡೆಸಬೇಕೆಂಬುವರು, ಪತಿಜ್ಞೆಗೆ ವಿರುದ್ಧವಾಗಿ ಮಾತಾಡುವವರು ಭಾರತದಲ್ಲಿ ಇರಬೇಕಾ? ಇಂಥ ಲಜ್ಜೆಗೆಟ್ಟ, ನಾಣುಗೆಟ್ಟ ಗಿರಾಕಿಗಳನ್ನು ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಿಸಬಾರದೇಕೆ?
ಸಂವಿಧಾನದ ಬಗ್ಗೆ ಅಜ್ಞಾನ
ಶೋಷಿತರ ಗುಂಪಿನ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಸಿ ಎಂ ಸಿದ್ಧರಾಮಯ್ಯ ಈ ಹಿಂದೆ ಬಸವಲಿಂಗಪ್ಪ, ಎಪಿಜೆ ಅಬ್ದುಲ್ ಕಲಾಂ, ದೇವೇಗೌಡಗಳಂತಹ ರಾಜಕಾರಣಿಗಳು ಮತ್ತು ಎಂ ದರ್ಜೆಯಿಂದ ಡಿ ದರ್ಜೆಯ ಅಧಿಕಾರಿಗಳಿಗೆ ಅಂಬೇಡ್ಕರ್ ನೀಡಿದ ಸಂವಿದಾನವಲ್ಲದೆ ಬೇರೊಂದು ‘ಮನು’ ಸಂವಿಧಾನದಲ್ಲಿ ಅಧಿಕಾರ ಹೊಂದಲು ಸಾಧ್ಯವೆ? ಮತ್ತು ಸಮಾನತೆ ಬಯಸಲು ಸಾಧ್ಯವೆ? ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಮಾತಾನಾಡುವ ಅಜ್ಞಾನಿಗಳ ಮಾತು ಕೇಳಿ ಪ್ರತಿಭಟಿಸದೆ ಸುಮ್ಮನೇ ಕುಳಿತುಕೊಂಡಿರುವ ನಾವುಗಳೂ ಅಜ್ಞಾನಿಗಳಲ್ಲವೆ?
ಮನು ಸಂಸ್ಕೃತಿಗಳಿಗೆ ಗೌರವ ನೀಡುವ ಸಂವಿಧಾನ ಬರಬೇಕೆಂದು ದಾಷ್ಟ್ಯತನದ ಹೇಳಿಕೆ ನೀಡುವವರನ್ನು ಮಠದಿಂದ ಮತ್ತು ಅಧಿಕಾರದಿಂದ ಪದಚ್ಯುತಿ ಗೊಳಿಸಬೇಕು. ಉನ್ನತ ಸ್ಥಾನದಲ್ಲಿದ್ದರೂ ಇವರಿಗೆ ಸಂವಿಧಾನದ ಬಗ್ಗೆ ಕನಿಷ್ಟ ಜ್ಞಾನವು ಇರದಿರುವುದು ದುರಂತ. ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಹಕ್ಕಿನಲ್ಲಿ ಯಾರು ಬೇಕಾದರೂ ಯಾವ ಧರ್ಮವನ್ನಾದರೂ ಪಾಲಿಸಲಿಕ್ಕೆ ಅವಕಾಶ ಕೊಟ್ಟಾಗಿದೆಯಲ್ಲ; ಮತ್ಯಾಕೆ ಈ ಅಸಡ್ಡೆ ಮಾತು ತಿಳಿಯದು. ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಸಿಕ್ಕು ಉನ್ನತ ದರ್ಜೆಯಲ್ಲಿರುವುದು ಈ ಪೂಜಾರಿಗಳಿಗೆ ಹೊಟ್ಟೆಕಿಚ್ಚಾಗಿದೆ. ಕಾರಣ ಶೋಷಿತರನ್ನು ಗುಲಾಮರನ್ನಾಗಿ, ಮಲ ಹೋರಿಸುವರನ್ನಾಗಿ ಇಡಬೇಕಾಗಿದೆ, ಅವರ ಬೆಳವಣಿಗೆ ಸಹಿಸದಾಗಿದೆ.
ಇತ್ತೀಚೆಗೆ ಸಂವಿಧಾನದ ಅರಿವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಿರುವುದರಿಂದ, ಶೋಷಿತರು ಜಾಗೃತರಾಗಿ ಮನುಸ್ಮೃತಿ ಹೆಣೆದ ಕರ್ಮಕಾಂಡದ ವಿರುದ್ಧ ಧ್ವನಿ ಎತ್ತುತ್ತಿರುವುದರಿಂದ, ದೇವಸ್ಥಾನಗಳಲ್ಲಿ ದಲಿತರು ಪೂಜೆಗೆ ಅರ್ಹತೆ ಪಡೆದುಕೊಳ್ಳುತ್ತಿರುವುದರಿಂದ ಅಥವಾ ಶೋಷಿತರು ಕಟ್ಟಿದ ಮಠಕ್ಕೆ, ದೇಗುಲಕ್ಕೆ ಅವರವರ ಜಾತಿಯವರನ್ನೆ ಅಧಿಕಾರಿಯನ್ನಾಗಿ, ಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳುತ್ತಿರುವುದರಿಂದ ತಮ್ಮ ಜುಟ್ಟಕ್ಕೆ ಬೆಂಕಿ ಬಿದ್ದಂತೆ ವರ್ತಿಸುತ್ತಿರುವರು.
ಈಗ ಮನುಸ್ಮೃತಿಯ ಬುಡ ಅಲ್ಲಾಡುವ ದಿನ ಹತ್ತಿರ ಬಂದಿರುವುದರಿಂದ ಸಂವಿಧಾನವನ್ನು ವಿರೋಧ ಮಾಡದೇ ಮತ್ತೇನು ಮಾಡವರು ಹೇಳಿ.(ಮಗ ಬಿಡೋದು ಬಿಟ್ಟು; ಭಂಗಿ ಸೇದಿದ ಎಂಬ ಗಾದೆ ಮಾತಿನಂತೆ ಇವರ ಪರಿಸ್ಥಿತಿಯಾಗಿದೆ)
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಓದಿದ ಜ್ಞಾನ ಮತ್ತು ಬರೆದ ಭಾರತದ ಸಂವಿಧಾನದ ಕಾಲಿನ ಪಾದದ ದೂಳಿಗೂ ಸಮವಲ್ಲದ ಹಾಗೂ ಒಂದೇ ರೀತಿ ಇರುವ ಮನುಷ್ಯರಲ್ಲಿಯೇ ಈ ದರಿದ್ರ ‘ಜಾತಿ’ ಎಂಬ ಎರಡಕ್ಷರದ ರಾಕ್ಷಸ ಪದದ ಬೇಧವನ್ನು ಹಣೆಗೆ ಲೇಪಿಸಿ, ಶತಶತಮಾನಗಳ ಕಾಲ ಆಳಿದ್ದು ಈ ಮನುಸ್ಮೃತಿ. ಇದನ್ನು ಈ ಆಧುನಿಕತೆಯಲ್ಲೂ ಜಾರಿಗೆ ತಂದು ಸಮಸಮಾಜ ನಿರ್ಮಿಸಿ ಯಶಸ್ವಿಯಾಗಿ 77ವರ್ಷಗಳ ಕಾಲ ಭವ್ಯ ಭಾರತ ರಥವನ್ನು ಮುನ್ನೆಡೆಸುವ ಸಂವಿಧಾನವನ್ನು ಬದಲಾಯಿಸಿ ಮತ್ತದೇ ಸಂಸ್ಕೃತಿಯನ್ನು ಜಾರಿಗೆ ತರಬೇಕೆಂದು ಹೇಳುವ ವಿಕೃತಿ ಮನಸ್ಥಿತಿಯವರನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು ಹೇಳಿ.
ಬ್ರಾಹ್ಮಣ ಮಠಗಳು, ಲಿಂಗಾಯತ ಮಠಗಳು
ಈ ಬ್ರಾಹ್ಮಣ ಮಠಗಳು ನಮ್ಮ ಭಾರತಕ್ಕೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ ಸಮಾನತೆಯಿಂದ ಏನು ಕೊಡುಗೆ ಕೊಟ್ಟಿವೆ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಈ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ, ಚರ್ಚಿಸಬೇಕಾದ ವಿಷಯ ಇದು. ಲಿಂಗಾಯತ ಮತ್ತು ಲಿಂಗಾಯತ ಒಳ ಪಂಗಡಗಳ ಮಠಗಳಿಗೆ ಬನ್ನಿ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗು ಧಾರ್ಮಿಕಕ್ಕೆ ಮತ್ತು ಸಾಮಾಜಿಕ ಸಮಾನತೆಯ ಅಮೂಲ್ಯ ಕೊಡುಗೆಯನ್ನು ನೀಡಿ ಶತ ಶತಮಾನಗಳ ಕಾಲ ಭಾರತವನ್ನು ಆರ್ಥಿಕವಾಗಿ, ಜಾತ್ಯಾತೀತವಾಗಿ ಸದೃಢಗೊಳಿಸಿವೆ. ಆದರೆ ವೈದಿಕ ಮಠಗಳ ಕಾರ್ಯ ಮಾತ್ರ ಸೊನ್ನೆ; ಬರೀ ಧಾರ್ಮಿಕತೆಯ ಸೋಗು ಮಾಡುವರು.
ಆದ್ದರಿಂದ ಇಂತಹವರು ಸಂವಿಧಾನದ ಬದಲಾವಣೆ ಮಾತಾಗಳಾಡಿದಾಗ ಇವರ ಹುಟ್ಟಡಗಿಸಲು ಭಾರತದ ಪ್ರತಿಯೊಬ್ಬ ಪ್ರಜೆ ಇವರ ವಿರುದ್ಧ ಧ್ವನಿ ಎತ್ತಲೇಬೇಕು ಅದು ನಮ್ಮ ಅಸ್ಮಿತೆಯೂ ಆಗಿದೆ. ಸಂವಿಧಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ಒಂದು ಆಂದೋಲನ ರೂಪದಲ್ಲಿ ಚಳುವಳಿ ರೂಪಿಸುವುದು ಹಿಂದೆಂದಿಗಿಂತಲೂ ಇಂದು ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ಕಳೆದ ವರ್ಷ ಕರ್ನಾಟಕದ ಸಿದ್ಧರಾಮಯ್ಯ ಸರಕಾರದ ಸಂವಿಧಾನ ರಕ್ಷಣೆಗಾಗಿ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ರಾಜ್ಯಾದ್ಯಂತ ಸಂವಿಧಾನದ ರಥಯಾತ್ರೆ ಹೊರಡಿಸಿ ಜಾಗೃತಿಗೊಳಿಸಿದ್ದು ಶ್ಲಾಘನೀಯ. ಕೇವಲ ಸರಕಾರದ ಮಟ್ಟದಲ್ಲಿ ಆದರೆ ಸಾಲದು, ಖಾಸಗಿ ಸಂಘ ಸಂಸ್ಥೆಗಳು ಅಲಲ್ಲಿ ಸಂವಿಧಾನದ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಅಲ್ಲಿ ‘ಸಂವಿಧಾನ ಓದು’ (ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬರೆದ) ಪುಸ್ತಕ ಉಚಿತವಾಗಿ ಹಂಚಬೇಕು ತನ್ಮೂಲಕ ಸಂವಿದಾನ ವಿರೋಧಿ ಪುಡಾರಿಗಳ ಪುಂಡಾಟದ ಮಾತುಗಳನ್ನು ಹತ್ತಿಕ್ಕಬೇಕು.
ಭಾರತ ವಿಶ್ವಗುರುವಾಗುವುದು ಜಾತಿವಾದಿ ಮನುಸ್ಮೃತಿಯಿಂದಲ್ಲ ಬದಲಿಗೆ ಜಾತ್ಯತೀತ ನಿಲುವಿನ ವಿಶ್ವಗುರು ಬಸವಾದಿ ಪ್ರಮಥರ ವಚನ ಸಾಹಿತ್ಯದ ಆಶಯಗಳನ್ನೊಳಗೊಂಡ ಅಂಬೇಡ್ಕರರು ಬರೆದ ಸಂವಿಧಾನದಿಂದ ಮಾತ್ರ ಸಾಧ್ಯ. *ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕೆಂಬುದನ್ನು ಮನಸಾಕ್ಷಿಯಾಗಿ ನಂಬಿ ಸಂವಿಧಾನ ಉಳಿವಿಗೆ ಶ್ರಮಿಸೋಣ.
ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ
ಇನ್ನು ಮುಂದೆ ಭಾರತೀಯರು ಮನವಾದಿಗಳ ಗುಲಾಮರಾಗಬೇಡಿ. ಬುದ್ಧ ಬಸವ ಅಂಬೇಡ್ಕರರು ಇದನ್ನು ತಿರಸ್ಕರಿಸಿದ್ದಾರೆ. ಇಂದಿನ ಸರ್ವ ಭಾರತೀಯರು ಆ ಕೆಲಸ ಮಾಡಬೇಕಾಗಿದೆ. ನಾವು ವೈದಿಕರ ಗುಲಾಮರಾಗದೆ ಶೂದ್ರ ಅತಿ ಶೂದ್ರಾಗದೆ ಬುದ್ಧ ಬಸವರ ಮಾರ್ಗದಲ್ಲಿ ನಡೆಯಬೇಕಿದೆ. ನಮ್ಮ ಧ್ವನಿ ಗಟ್ಟಿಯಾಗುವವರೆಗೆ… ಇಂತಹ ವೈದಿಕ ಸ್ವಾಮಿಗಳು ಹುಡುಕುತ್ತಲೇ ಇರುತ್ತಾರೆ. ಆದ್ದರಿಂದ ಬುದ್ಧ ಬಸವನ ಅನುಯಾಯಿಗಳು ಎಚ್ಚರವಾಗಬೇಕಿದೆ. ಸಂವಿಧಾನಕ್ಕೆ ಯಾರು ಗೌರವ ಕೊಡುವುದಿಲ್ಲವೋ, ಅವರನ್ನು ಭಾರತೀಯರು ಗೌರವಿಸಬಾರದು.