ಕಲಬುರಗಿ
ಬಸವ ಕಲ್ಯಾಣದ 12ನೇ ಶತಮಾನದ ಅನುಭವ ಮಂಟಪದ ಜಾಗ ಅತಿಕ್ರಮಣವಾಗಿದೆ ಎಂದು ಆರೋಪಿಸಿ ಅದನ್ನು ಮರಳಿ ಪಡೆಯಲು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರು ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈಗಿನ ಪೀರ ಪಾಷಾ ಬಂಗ್ಲೆ ಅಂದಿನ ಬಸವಣ್ಣನವರ 12ನೇ ಶತಮಾನದ ಅನುಭವ ಮಂಟಪ ಆಗಿದೆ. ಹೀಗಾಗಿ ಅತಿಕ್ರಮಣ ಆಗಿರುವುದನ್ನು ಮರಳಿ ಪಡೆಯಲು ಡಿಸೆಂಬರ್ 10 ರಂದು ನಾಡಿನ ವಿವಿಧ ಮಠಾಧೀಶರ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ, ರಾಜೇಶ್ವರ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಇತರ ಸ್ವಾಮೀಜಿಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಲ ಅನುಭವ ಮಂಟಪ ಪ್ರತಿಯೊಬ್ಬ ಭಾರತೀಯನ ಸ್ವತ್ತಾಗಿದೆ. ಅದನ್ನು ಮರಳಿ ಪಡೆದು ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಲು ಮುಂದಿನ ಪೀಳಿಗೆಗೆ ಅದನ್ನು ಸಂರಕ್ಷಿಸಿ ಕಾಪಾಡುವುದು ನಮ್ಮೇಲ್ಲರ ಆಧ್ಯ ಕರ್ತವ್ಯವಾಗಬೇಕು ಎಂದು ವಿವರಣೆ ನೀಡಿದರು.
ಈ ಕುರಿತು ಮಠಾಧೀಶರು ಹಾಗೂ ಹಿಂದೂಗಳು ಈ ಹಿಂದೆ ಜಾಗ ಮರಳಿಸುವಂತೆ ಆಗ್ರಹಿಸಿದ್ದರೂ ಸರ್ಕಾರ ಕಿವಿಗೆ ಹಾಕಿಕೊಳ್ಳದ ಹಿನ್ನೆಲೆಯಲ್ಲಿ ಈಗ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಲಾಗಿದೆ. ದೆಹಲಿ ಚಲೋದಲ್ಲಿ ೧೦೦ ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುವರು ಎಂದು ಸ್ವಾಮೀಜಿಯವರು ಸ್ಪಷ್ಠಪಡಿಸಿದರು.
ಪಾಳಾ ಗುರುಮೂರ್ತಿ ಶಿವಾಚಾರ್ಯರು, ಬೇಮಳಖೇಡ ಚಂದ್ರಶೇಖರ ಶಿವಾಚಾರ್ಯರು, ಬಸವಕಲ್ಯಾಣ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಸದಲಾಪುರ ಸಿದ್ಧಲಿಂಗ ಶಿವಾಚಾರ್ಯರು, ಸಿಂಧನಕೇರಾ ಹೊನ್ನಲಿಂಗ ಮಹಾಸ್ವಾಮಿಗಳು, ಕಮಠಾಣ ರಾಚೋಟೇಶ್ವರ ಶಿವಾಚಾರ್ಯರು, ಖಟಕಚಿಂಚೋಳಿಯ ಬಸವಲಿಂಗ ಶಿವಾಚಾರ್ಯರು, ಹೋರಾಟಗಾರ ಎಂ.ಎಸ್.ಪಾಟೀಲ್ ಉಪಸ್ಥಿತರಿದ್ದರು.
ಬಸವಕಲ್ಯಾಣ ದ ಫೀರ ಫಾಷಾ ಬಂಗಲೆ ಜಾಗ ಅನುಭವ ಮಂಟಪದ ಮೂಲ ಜಾಗ ಅಂತಾ ಹೋರಾಟ ಮಾಡುವ ಪ್ರಮೋದ್ ಮುತಾಲಿಕ್ ರ ಸ್ನೇಹಿತ ಮತ್ತು ಪಂಚಾಚಾರ್ಯರ ಪಾಲೋವರ್ಸ ರಾದ ಆಂದೋಲನ ಸ್ವಾಮಿಜಿಗೆ ಜಯವಾಗಲಿ.
ಬಸವಕಲ್ಯಾಣ ದ ಫೀರ ಫಾಷಾ ಬಂಗಲೆ ಜಾಗ ಅನುಭವ ಮಂಟಪದ ಮೂಲ ಜಾಗ ಅಂತಾ ಹೋರಾಟ ಮಾಡುವ ಪ್ರಮೋದ್ ಮುತಾಲಿಕ್ ರ ಸ್ನೇಹಿತ ಮತ್ತು ನಮ್ಮ ಪಂಚಾಚಾರ್ಯರ ಪಾಲೋವರ್ಸ ರಾದ ಆಂದೋಲನ ಸ್ವಾಮಿಜಿಗೆ ಜಯವಾಗಲಿ.
ಈ ಕಂತ್ರಿ ಸ್ವಾಮಿಗಳು ಸಾಮರಸ್ಯ ಕೇಡಿಸಲು ದೇಹಲಿಗೆ ಹೋರಟಿರುವರು ಇವರು ಮುತಾಲಿಕ್ ಪಡೆಯವರು
ವಕ್ಫ್ ಹೋರಾಟ ವಿಫಲವಾಯ್ತು ಈಗ ಬಂಗಲೆ ಹಿಂದೆ ಬಿದ್ದಿದ್ದಾರೆ
ಇವರಾರೂ ಬಸವಣ್ಣನವರ ತತ್ವ ಪಾಲಿಸಿದವರಲ್ಲ
ಇವರೆಲ್ಲಾ ಸನಾತನ ಹಿಂದೂ ವೀರಶೈವರು,
ಕುಂಕುಮಧಾರಿಗಳು ಲಿಂಗಾಯತರಲ್ಲ
ಈ ಅಂದೋಲ ಸ್ವಾಮಿ ಬಸವ ತತ್ವದವನಲ್ಲ ಇವನು ಶ್ರೀರಾಮಸೇನೆಯವನು ಇವನು ಯಾವತ್ತು ವಿಭೂತಿ ಧರಿಸಿದವಲ್ಲ ಸದಾ ಇವನ ಹಣೆಯ ಮೇಲೆ ಕುಂಕುಮವಿರುತ್ತೆ ಹಾಗೂ ಇವರೆಲ್ಲರೂ ಸಂಘಪರಿವಾದ ಸನಾತನಿಗಳಿಗಳು ಇವರನ್ನ ತಡೆಯುವದು ಒಳ್ಳೆಯದು ಕಾರಣ ಈಗ ನಿಮಾ೯ಣ ಹಂತದಲ್ಲಿರುವ ಅನುಭವ ಪಂಟಪವನ್ನು ಪೂಣ೯ವಾಗದಂತೆ ತಡೆಯುವ ಹುನ್ನಾರ RSS ಇವರಿಂದ ಮಾಡಿಸಲು ಹೋರಟಂತಿದಿದೆ.
ಯಾವುದೇ ಒಂದು ಸ್ಥಳವನ್ನು ಕಿತ್ತುಕೊಳ್ಳಲು ದಾಖಲೆ ಬೇಕು.ಇವರಿಾಡುತ್ತಿರುವದು ಢೋಂಗಿ ಹೋರಾಟ.ಬಸವಣ್ಣ ನವರನ್ನೇ ದೂಷಿಸುವ ಇವರಿಗೆ ಅನುಭವ ಮಂಟಪದ ಗೊಡವೆ ಬೇಕಿಲ್ಲ,ಬದಲಾಗಿ ಕೋಮು ಸಾಮರಸ್ಯ ಕೆಡಿಸಬೇಕು ಮತ್ತು ಈ ಮೂಲಕ ಹಿಂದುಗಮನಸ್ಸಿನಲ್ಲಿ ಧ್ವೇಷ ತುಂಬಬೇಕು.