ಬಸವನ ಕಲ್ಯಾಣ
ಶರಣ ಭೂಮಿ ಬೀದರನ ವಕ್ಪ್ ಮಂಡಳಿ ವಿರುದ್ಧದ ಪ್ರತಿಭಟನಾ ಸಮಾವೇಶ ಭಾಷಣದ ವೇಳೆ ಮುಸ್ಲಿಂರ ವಿರುದ್ಧ ಮಾತಾಡುವ ಭರಾಟೆಯಲ್ಲಿ ಸುಖಾಸುಮ್ಮನೆ ಬಸವಣ್ಣನವರ ಲಿಂಗೈಕ್ಯದ ಬಗ್ಗೆ ಮಾತನಾಡಿ ಅಪಾರ ಬಸವಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಕ್ಷಮೆ ಕೇಳದೆ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ ತಾನು ಮಾತಾಡಿದ್ದು ಸರಿ ಇದೆ ಎಂದು ವೈದಿಕರ ಛೇಲಾ ಯತ್ನಾಳ ದಾಷ್ಟ್ಯತನದ ಹೇಳಿಕೆ ನೀಡಿದ್ದಾರೆ.
ಬಸವಧರ್ಮಪೀಠವನ್ನು ಒಳಗೊಂಡಂತೆ ಅಪಾರ ಬಸಭಕ್ತರ ಭಾವನೆಗೆ ಧಕ್ಕೆಯಾಗುವಂತಹ ಮಾತಾನಾಡಿದ ಯತ್ನಾಳ ನಮ್ಮ ಗುರುಗಳಾದ ಲಿಂಗೈಕ್ಯ ಮಾತೆ ಮಹಾದೇವಿಯವರ ನೈತಿಕದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಬಸವಣ್ಣನವರ ತತ್ವದ ದ್ರೋಹಿ, ಬಸವ ತತ್ವದ ಗಂಧ ಗಾಳಿ ಗೊತ್ತಿರದ ನಿಮಗೆ ಬಸವ ತತ್ವದ ಬಗ್ಗೆ ಮಾತಾಡುವ ನೈತಿಕತೆ ಹಕ್ಕು ಇಲ್ಲ. ಆ ನೈತಿಕತೆ ನಿಮ್ಮಲ್ಲಿ ಬರಬೇಕಾದರೆ ಹಿಂದುತ್ವದ ಗುಂಗಿನಿಂದ ಮೊದಲು ಹೊರಗೆ ಬನ್ನಿ.
ನಮ್ಮ ಗುರುಗಳು ಐದು ದಶಕಗಳ ಕಾಲ ಬಸವ ತತ್ವವನ್ನು ತಲೆಯ ಮೇಲೆ ಹೊತ್ತು ಬಸವದರ್ಮ ಪ್ರಚಾರ ಮಾಡಿ ಲಿಂಗಾಯತರ ಆಸ್ಮಿತೆ ಕಾಪಾಡಿದ್ದಾರೆ. ಲಿಂಗಾಯತದಲ್ಲಿ ಹುಟ್ಟಿದ ನೀವು ಎಷ್ಟು ಋಣಿಯಾಗಿರಬೇಕೆಂದು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು. ವಿಜಯಪುರ ಲಿಂಗಾಯತ ರ್ಯಾಲಿ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಮಾತನಾಡದೆ ಲಿಂಗಾಯತ ಹೋರಾಟಗಾರರನ್ನು ನೋಡಿ ಬಿಲ ಸೇರಿಕೊಂಡಿದ್ದ ನೀವು ಈಗ ಇದ್ದಕ್ಕಿದ್ದಂತೆ “ಹೊತ್ತಾರೆ ಎದ್ದ ಕುರುಡನಿಗೆ ಆಗುಸೆಯಲ್ಲಿ ಬೆಳಗಾದಂತೆ” ಬಸವಣ್ಣನ ತತ್ವ ಪಾಲಕರು ನಾವು ಎಂದೂ, ಮುಸ್ಲಿಂರ ಖಾಸಗಿ ಜಮೀನಾದ ಫೀರಪಾಶ ಬಂಗಲಾವನ್ನು ಅನುಭವ ಮಂಟಪ ಅದನ್ನು ಮರಳಿ ಪಡೆಯುತ್ತೇವೆ ಎಂದೂ ಹೇಳಿದ್ದೀರಿ.
ಲಿಂಗಾಯತನಾಗಿ ಬಸವಕಲ್ಯಾಣದ ಬಸವತತ್ವದ ಒಂದು ಸಮಾವೇಶದಲ್ಲಿ ಭಾಗಿಯಾಗದ ಯತ್ನಾಳರು ಫೀರ ಪಾಷಾ ಬಾಂಗಲಾ ಜಾಗ ಎಲ್ಲಿದೆ ಎಂಬುದು ಮೊದಲು ಗೊತ್ತು ಮಾಡಿಕೊಂಡು ಅನುಭವ ಮಂಟಪದ ಬಗ್ಗೆ ಅಧಿಕೃತ ಮಾಹಿತಿ ಕಲೆ ಹಾಕಲಿ ನಂತರ ಹೋರಾಟ ಕೈಗೊಳ್ಳಲಿ. ಅದು ಬಿಟ್ಟು ಬಸವತತ್ವಕ್ಕೆ ಸಂಬಂಧವಿರದ ನಕಲಿ ಸ್ವಾಮಿಗಳ ಗುಂಪಿನ ಜೊತೆ ಸೇರಿಕೊಂಡು ಯಾವ ದಾಖಲೆ ಇಲ್ಲದೆ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಿ ಏನು ಮಾಡುವರು. ಶಾಂತಿಯುತವಾದ ಶರಣಭೂಮಿ ಬಸವಕಲ್ಯಾಣವನ್ನು ನಿಮ್ಮ ಸ್ವಾರ್ಥಕ್ಕಾಗಿ ಕೋಮು ದ್ವೇಷಕ್ಕೆ ಎಳೆದು ತರುವುದು ಉಚಿತವಲ್ಲ.
ಚರ್ಚೆಗೆ ಪಾಂಥಾಹ್ವಾನ:
ಸದಾಕಾಲ ವೈದಿಕತೆ, ಹಿಂದುತ್ವದ ಬಗ್ಗೆ ಮಾತನಾಡುತ್ತಾ ಸ್ವಧರ್ಮ ದ್ವೇಷಿಯಾಗಿರುವ ನೀವು ಬಸವಣ್ಣನವರ ಲಿಂಗೈಕ್ಯದ ಕುರಿತು ಚರ್ಚೆಗೆ ಸಿದ್ಧ ಎಂದಿರುವಿರಿ. ನಿಮ್ಮದೇ ಜಿಲ್ಲೆಯ ಒಂದು ಊರಿನ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿಮ್ಮ ಕೋಮು ಮಾತಿಗೆ ಜನಗಳಿಂದ ವಿರೋಧ ವ್ಯಕ್ತವಾದಾಗ ವೇದಿಕೆಯಿಂದ ಕೆಳಗೆ ಇಳಿದು ಓಡಿ ಹೋದ ಭೂಪ ನೀವು. ಚರ್ಚೆಗೆ ಬರುವಿರಾದರೆ ನಿಮ್ಮ ಪಾಂಥಾಹ್ವಾನವನ್ನು ನಾವು ಸ್ವೀಕರಿಸುತ್ತೇವೆ. ನೀವು ಎಲ್ಲಿ ಹೇಳುವಿರೋ ಅಲ್ಲಿ ಬರುತ್ತೇವೆ, ಇಲ್ಲವೇ ನೀವು ಕರೆದಲ್ಲಿ ನಾವು ಬರುತ್ತೇವೆ.
ಬಸವಣ್ಣನವರ ದುರಂತದ ಸಾವಿಗೆ ಕಾರಣ ಯಾರು?
ಬಸವರಾಜ ಯತ್ನಾಳ ನೀವೇ ಹೇಳುವಂತೆ ಒಂದು ವೇಳೆ ಬಸವಣ್ಣನವರು ಹೊಳೆ ಹಾರಿ ಸತ್ತಿದ್ದರೆ ಅದಕ್ಕೆ ಕಾರಣ ವೈದಿಕರು. ಅಂಥವರ ಛೇಲಾನಾಗಿ ಹೋಮ ಹವನ ಮಾಡುತ್ತೇನೆಂದು ಬಹಿಂರಂಗವಾಗಿ ಹೇಳುತ್ತಾ, ಬಸವ ತತ್ವದ ವಿರುದ್ಧ ಚಟುವಟಿಕೆಗಳನ್ನು ನಡೆಸುವ ಮತ್ತು ಬಸವಣ್ಣನವರ ಸಾವನ್ನು ಸಂಭ್ರಮಿಸುತ್ತಾ ತಿರುಗ್ಗುತ್ತಿರುವ ನೀನು ಬಸವಭಕ್ತನಾಗಲು ಹೇಗೆ ಸಾಧ್ಯ?, ನಾನೇ ಬಸವಣ್ಣ ಎಂದು ಉಢಾಪೆಯಿಂದ ಹಾಗೂ ಅಹಂಕಾರದಿಂದ ಹೇಳಿ ಅಕ್ಷಮ್ಯ ಅಪರಾಧ ಎಸಗಿ ಬಸವಣ್ಣನವರ ಅವಕೃಪೆಗೆ ಪಾತ್ರರಾಗಿರುವಿರಿ ಮುಂದೆ ಅದರ ಪರಿಣಾಮ ಉಣ್ಣುವಿರಿ, ಅದನ್ನು ಕಾಲವೇ ನಿರ್ಧರಿಸುತ್ತದೆ.
ಬಸವಣ್ಣನವರ ಬಗ್ಗೆ ಏಕಿಷ್ಟು ತಾತ್ಸಾರ:
ಬಸವಣ್ಣನವರು ತಾವು ಹುಟ್ಟುತ್ತಲೇ ಶ್ರೀಮಂತಿಕೆ ಜೀವನ, ಧಾರ್ಮಿಕ ಸ್ವಾತಂತ್ರ್ಯ ಎಲ್ಲವನ್ನೂ ಅನುಭವಿಸಿದ್ದರು ಹಾಗೆಯೇ ಅವರು ಮುಂದುವರೆಯಬೇಕಾಗಿತ್ತು. ಆದರೆ ಈ ಭರತ ಖಂಡದಲ್ಲಿ ವೈದಿಕರ ಸೃಷ್ಟಿದ ಶ್ರೇಣಿಕೃತ ವ್ಯವಸ್ಥೆಯ ತಾರತಮ್ಯ ಕಾರಣವಾಗಿ ಮನನೊಂದು ಬ್ರಾಹ್ಮಣ್ಯತ್ವವನ್ನು ತ್ಯಜಿಸಿ, ಶೋಷಣೆಗೆ ಒಳಗಾದ (ಇಂದಿನ ಲಿಂಗಾಯತರು ಸೇರಿದಂತೆ)ವರಿಗೆ ಧರ್ಮದ ನ್ಯಾಯ ಕೊಡಿಸಬೇಕೆಂದು ಸ್ವತಂತ್ರ ಲಿಂಗಾಯತ ಸ್ಥಾಪಿಸಿ, ಧರ್ಮದ ಬಾಗಿಲು ತೆರೆದು ಅಲ್ಲಿ ಎಲ್ಲರಿಗೂ ಅವಕಾಶ ನೀಡಿ ತನ್ನ ಇಡೀ ಜೀವನವನ್ನು ನಿಮ್ನ ವರ್ಗದ ಜೊತೆಗೆ ಕಳೆದ ಯುಗ ಪುರುಷ.
ಅಷ್ಟೇ ಏಕೆ ಅಖಂಡ ಭಾರತ ಒಂದು ಕಡೆ ಮುಸ್ಲೀಂರ ದಾಳಿಗೆ ಮತ್ತೊಂದು ಕಡೆ ಕ್ರಿಶ್ಚಿಯನ್ನರ ಧರ್ಮಕ್ಕೆ ತುತ್ತಾಗುವ ಸಂದರ್ಭದಲ್ಲಿ ಶೋಷಿತರು ಪಾಶ್ಚಾತ್ಯ ಸಂಸ್ಕೃತಿಯ ಧರ್ಮದ ಪಾಲಾಗಬಾರದೆಂದು ಲಿಂಗಾಯತ ಧರ್ಮ ನೀಡುವುದರ ಮೂಲಕ ಬಹದೊಡ್ಡ ಮತಾಂತರವನ್ನು ತಡೆಹಿಡಿದು ಭಾರತದ ಭವಿಷ್ಯವನ್ನು ಬರೆದರು. ಇಂತಹ ಐತಿಹಾಸಿಕ ಸತ್ಯವನ್ನು ಒಪ್ಪಿಕೊಳ್ಳದೆ ಕುರುಡರಂತೆ ವರ್ತಿಸುತ್ತಾ, ಬಸವಣ್ಣನವರ ಬಗ್ಗೆ ಏಕಿಷ್ಟು ತಾತ್ಸಾರ ತಾಳುತ್ತಾರೋ ಅರ್ಥವಾಗದ ಸಂಗತಿ. ಬಿ ಎಸ್ ವೈ ತನ್ನದೇ ಧರ್ಮವನ್ನು ಹೀಯಾಳಿಸುತ್ತಾ ‘ಹರಕೆಯ ಕುರಿಯಾಗಿ’ ವೈದಿಕರು ಕೆಡವಿದ ಖೆಡ್ಡಾಕ್ಕೆ ಬಿದ್ದರು, ಅದೇ ರೀತಿ ಈಗ ಯತ್ನಾಳಂಥವರು ಈ ದುರಂತದ ಭಾಗವೇ ಆಗಿರುವರು.
ಒಟ್ಟಾರೆ ಬಸವಣ್ಣನವರನ್ನು ನೇರವಾಗಿ ವಿರೋಧಿಸದ ವೈದಿಕರ ಆರ್ ಎಸ್ ಎಸ್ ಗುಂಪು ಲಿಂಗಾಯತ ಧರ್ಮಿಯರನ್ನು ಬಳಸಿಕೊಂಡು ತೆರೆಮರೆಯಲ್ಲಿ ಬಸವ ತತ್ವವನ್ನು ಮುಗಿಸುವ ಹುನ್ನಾರ ನಡೆಸುತ್ತಿರುವರು, ಅದು ಎಂದೆಂದೂ ಸಾಧ್ಯವಾಗದ ಸಂಗತಿ. ಬಸವಣ್ಣನವರನ್ನು ಮತ್ತು ಬಸವತತ್ವವನ್ನು ಅದುಮಿಟ್ಟಷ್ಟು ಪುಟಿದೇಳುವ ಬುಗ್ಗೆಯಂತೆ ಎಂಬುದು ಕಣ್ಣು ಕಾಣದ ಗಾವಿಲರಿಗೇನು ಗೊತ್ತು. ಬಸವತತ್ವ ಸುಳ್ಳಿನಿಂದ ಅಥವಾ ಎರವಲುನಿಂದ ತಯಾರಾದ ತತ್ವ ಅಲ್ಲ; ಕಾಯಕ ಜೀವಿಗಳು ಬೆವರಿಳಿಸಿ ದುಡಿದು, ಅನುಭಾವಿಸಿ ಕಟ್ಟಿದ ತತ್ವ ಅದನ್ನು ಬಸವ ಸಂತತಿಗಳು ಎಂದಿದಿಗೂ ಕಾಪಾಡುತ್ತಾರೆ ಎಂಬ ಎಚ್ಚರಿಕೆ ಪ್ರಜ್ಞೆ ಇರುವುದು ಒಳಿತು.
ಬಸವಣ್ಣನವರ ಬಗ್ಗೆ ಯಾರು ತಾತ್ಸಾರ ಭಾವನೆ ತಾಳುತ್ತಾರೆಯೋ.ಬಸವಣ್ಣ ಸಾಮಾನ್ಯ ಯಕಶ್ಚಿತ ಮಾನವ ಅಂತಾ ಯಾರು ಹಗುರವಾಗಿ ಭಾವಿಸುತ್ತಾರೆಯೋ ಅವರಿಗೆ ಬಸವಾದಿ ಶರಣರು ನಿಜವಾಗಿಯೂ ಸತ್ಯವಾಗಿಯೂ ಶಿಕ್ಷೆ ಕೊಟ್ಟೇ ಕೊಡುತ್ತಾರೆ. ನೆನಪಿರಲಿ.ಅವರ ಜೀವನ ನಾಯಿಪಾಡಾಗುತ್ತದೆ.ಇದು ಸತ್ಯ ಸತ್ಯ ಸತ್ಯ.
ಜೈ ವಿಶ್ವ ಗುರು ಬಸವೇಶ್ವರ ಮಹಾರಾಜ ಕಿ