ಫೆಬ್ರವರಿ 28 ಬನಹಟ್ಟಿಯಲ್ಲಿ ಬಸವಣ್ಣನವರ ಹೆಸರಿನ ಹಿಂದೂ ಸಮಾವೇಶ
ಜಮಖಂಡಿ:
ಫೆಬ್ರವರಿ 28 ಬನಹಟ್ಟಿಯಲ್ಲಿ ನಡೆಯುತ್ತಿರುವ ಬಸವಣ್ಣನವರ ಹೆಸರಿನ ಹಿಂದೂ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿರುವ ಕನ್ನೇರಿ ಸ್ವಾಮಿಯ ವಿರುದ್ಧ ಪಟ್ಟಣದಲ್ಲಿ ಲಿಂಗಾಯತ, ದಲಿತ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.
ತಹಿಶೀಲ್ದಾರ ಅನಿಲ ಬಡಿಗೇರ ಅವರನ್ನು ಭೇಟಿ ಮಾಡಿ ಬಸವ ತತ್ವದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧೀಶರ ಕುರಿತು ಅಪಮಾನಕಾರಿ ಹೇಳಿಕೆಗಳನ್ನು ನೀಡಿದ ಹಿನ್ನಲೆಯಲ್ಲಿ ಕನೇರಿ ಸ್ವಾಮಿಗೆ ನ್ಯಾಯಾಲಯವು ಧಾರ್ಮಿಕ ಕಲಹ ಪ್ರಚೋದಿಸುವಂತೆ ಮಾತನಾಡಿದ್ದಿರಿ. ಆದ್ದರಿಂದ ನೀವು ಮಠದಲ್ಲಿಯೇ ಇದ್ದು ಪೂಜೆ, ಮಾಡಿಕೊಂಡಿರಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗುವ ಅಗತ್ಯವಿಲ್ಲ ಎಂದು ಆದೇಶಿಸಿದೆ.
ಆದರೂ ಲೆಕ್ಕಿಸದೆ ಕನ್ನೇರಿ ಸ್ವಾಮಿ ಬನಹಟ್ಟಿಯ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಲಿಂಗಾಯತ ಸಮಾಜದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ. ಹೀಗಾಗಿ ಕನ್ನೇರಿ ಸ್ವಾಮಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಬೇಕೆಂದು ವಿನಂತಿದರು.

ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಧಾರ್ಮಿಕ ಭಾವನೆಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ, ಮನವಿ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಂಗಡಿ, ಅಣ್ಣಾಸಾಬ ಜಗದೇವ, ಬಸವ ದಳದ ಮುಖಂಡರಾದ ಶಂಕರ ಸಾವಳಗಿ, ಉಟಗಿ ಸರ್, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಸ್. ಬಾಂಗಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ಕೋಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪರಶುರಾಮ ಕಾಂಬ್ಳೆ, ಬಸವಂತ ಕಾಂಬ್ಳೆ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು.
ಮರೆಗುದ್ದಿ ಮಹಾಂತಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ, ರಾವಸಾಬ ಜಕ್ಕಪ್ಪನವರ, ರಮೇಶ ವಾಜಂತ್ರಿ, ದೀಪಾ ಯಡಹಳ್ಳಿ, ರಾಜಶ್ರೀ ಜಗದೇವ, ಪಾರ್ವತಿ ಅಂಗಡಿ, ಸುವರ್ಣ ಸಬರದ, ಗಂಗೂತಾಯಿ ಮುಧೋಳ, ಮಹಾದೇವಿ ಜಕ್ಕಪ್ಪನವರ, ಎಂ.ಬಿ. ಕೊಪ್ಪರದ, ಪಿ.ಬಿ. ನೇಮಗೌಡ, ಎಸ್.ಜಿ. ತೇಲಿ, ಸಿ.ಆರ್. ಹಾದಿಮನಿ, ಆರ್.ಎ. ಜಗದೇವ, ಜಿ.ಎಚ್. ಮುಧೋಳ, ಡಿ.ಆರ್. ಯಡಹಳ್ಳಿ, ಎಂ.ಡಿ. ಸಂಖ, ಬಿ.ಎಸ್. ನಾಗನೂರ, ಟಿ.ಬಿ. ಖೋತ ಸೇರಿದಂತೆ ಬಸವಕೇಂದ್ರ, ಜೆ.ಎಲ್.ಎಂ, ಬಸವದಳ, ದಸಂಸ ಸಂಘಟನೆಗಳ ಪ್ರಮುಖರು, ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ದಲಿತ ಸಂಘಟನೆಗಳಿಗೂ ಲಿಂಗಾಯತರಿಗೂ ಏನು ಸಂಬಂಧ ಸರ್
ಉದ್ದೇಶ ಒಂದೇ. ಸಮಾನ ಮನಸ್ಕರು .
12 Ne ಶತಮಾನದಲ್ಲಿ basavanna navaru ಎಲ್ಲ ganarannu ಇವಾ ನಮ್ಮವ ಇವಾ ನಮ್ಮವ ಅಂತ ತಬ್ಬಿಕೊಂಡು ಲಿಂಗಾ ದೀಕ್ಷಾ ಪಡದವರೆಲ್ಲ ದಲಿtaru ಅಂತ ಹೇಳಿದ್ದಾರೆ. ದಲಿತ ಸಮುದಾಯದ ಅವರನ್ನು ಸೇರಿಸಿ ಹೊಸ ರಾಜಕೀಯ ಪಕ್ಷ ಕಟ್ಟಿ ಈ ದೇಶದ ಚುಕ್ಕಾಣಿ ನೀವು ಹಿಡಿಯಬಹುದು.
ಲಿಂಗಾಯತರ ಮೂಲತಃ ಯಾರು?
ಲಿಂಗಾಯತರು ದಲಿತರಿಗೆ, ಶೂದ್ರರಿಗೆ ಕೊಟ್ಟ SC. ಮೀಸಲಾತಿ ಪಡೆಯಲು ಅವರ ಬೆಂಬಲ ಪಡೆದಿಲ್ಲ.
ಹೆಚ್ಚಿನ ಲಿಂಗಾಯತರು ಹಿಂದೆ ದಲಿತರು /ಶೂದ್ರರಾಗಿದ್ದರು. ಈಗಿನ ದಲಿತರನ್ನು ಲಿಂಗಾಯತರು ಜೊತೆಯಲ್ಲಿ ಕರೆತರಬೇಕು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು,ಪ್ರತಿಭಟನೆ ಸಭೆಯಲ್ಲಿ ಕನ್ನೇರಿ ಸ್ವಾಮಿಗಳಿಗೆ ಉಗ್ರವಾದ ಎಚ್ಚರಿಕೆ ನೀಡಿದರು. ಇನ್ನಾದರೂ ಕನ್ನೇರಿ ಸ್ವಾಮಿಗಳು ಲಿಂಗಾಯತ ಧರ್ಮಿಯರ ಹಾಗೂ ಸ್ವಾಮಿಗಳ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕೆಂದು ಎಚ್ಚರಿಸಿದ್ದು ಸಮಂಜಸವಾಗಿದೆ.ಶರಣುಶರಣಾರ್ಥಿಗಳು
ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಉಗ್ರವಾದದ ಮಾತುಗಳನ್ನ …ಲಿಂಗಾಯತ ಧರ್ಮಕ್ಕೆ ಅಪಮಾನ ಮಾಡುವ ಮಾತುಗಳನ್ನೇ ಆಡಿದ್ದಾರೆ ….ತಾವೇನು ಮಾಡಿದಿರಿ???
ಇದು ಹೀಗೆ ಮುನ್ನಡೆದು ಲಿಂಗಾಯತ ಧರ್ಮದ ಅವನತಿಗೆ ಕಾರಣವಾಗುವುದು ಎಚ್ಚರಿಕೆ!!
ಈ ಸಂಘಟನೆಯನ್ನು ಎರಪಡಿಸಿದ ಆ ಲಜ್ಜೆಗೆಟ್ಟ ನೀಚರಿಗೆ ಪಠಕಲಿಸಬೇಕು ಅವರಿಗೆ ಎಚ್ಚರಿಕೆ ನೀಡಬೇಕು
ಲಿಂಗಾಯತ ಎಂದು ಹೇಳುವ ಹಿಂದೂ ಲಿಂಗಯ್ತಾರು ರಾಜಕೀಯ ಮಾಡುವ ಮೊಸದ ಜಾಲ್ ಭಯ ಹುಟ್ಟಿಸುವುದುಹಿಂದೂ ತಾಲಿಬಾನಿಗಳು.ಅವರ ಕಾರ್ಯ ಸಾಧಿಸಲು ಹೇಯ ಕೆಲಸ ಮಾಡುವರು. ಲಿಂಗಾಯತ ಹೆಸರು ಹೇಳಿ ಬಸವ ಣ್ಣನ ಕಾಯಕ ನಿಯಮ ಬಿಟ್ಟು ಲಜ್ಜೆಗೆಟ್ಟ ಸ್ವಾಮಿ ಮುಂದೆ ಮಾಡಿ ಸಭೆ ಮಾಡಿ ಲಿಂಗಾಯತ ರಿಗೇ ಮೋಸ ಮಾಡುವ ನರಿ ಬುದ್ಧಿ ಜನಕ್ಕೆ ಪಾಠ ಕಲಿಸಲು ಲಿಂಗಾಯತ ಸಂಘ ಸಂಸ್ಥೆ ಗಳು ಜಾಗ್ರತೆ ಮೂಡಿಸಿ ಶರಣ ಧರ್ಮದ ಬೆಳಕು ಬೀರಿ. ನಿಮ್ಮ ಕಾರ್ಯಕ್ರಮ ನಮ್ಮ ಕಾರ್ಯ ನಿಮ್ಮ ಹೆಜ್ಜೇಯಲ್ಲಿ ನಾವು ಹೆಜ್ಜೆ ಹಾಕುತ್ತೇವೆ ಜಯ್ ಲಿಂಗಾಯತ 👏🏻ಶರಣು ಶರಣು 🙏🏻🙏🏻