ಕೊಪ್ಪಳ
ಸಾಂಸ್ಕೃತಿಕ ನಾಯಕ ಬಸವಣ್ಣನವರ ವ್ಯಕ್ತಿತ್ವಕ್ಕೆ ಅವಮಾನವಾಗುವ ರೀತಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಜಿಲ್ಲೆಯ ಇತರ ಬಸವಪರ ಸಂಘಟನೆಗಳು ತೀವ್ರವಾಗಿ ಖಂಡಿಸಿ ಶುಕ್ರವಾರ ಪ್ರತಿಭಟಿಸಿದವು.
“ಒಂದನ್ನಾಡಲು ಹೋಗಿ ಒಂಬತ್ತಾಡುವ ಡಂಭಕರ ಮೆಚ್ಚ ನಮ್ಮ ಕೂಡಲಸಂಗಮದೇವ” ಎಂದು ಧರ್ಮ ಸಂಸ್ಥಾಪಕ ಬಸವಣ್ಣನವರು ಹೇಳಿದ್ದಾರೆ. ಲಿಂಗಾಯತ ಧರ್ಮೀಯರಾದ ಯತ್ನಾಳ ಅವರಿಗೆ ನಾಲಿಗೆ ಮೇಲೆ ಹಿಡಿತ ತಪ್ಪಿ ಅರಿವಿಲ್ಲದ ಪುಢಾರಿಯಂತೆ ಮಾತನಾಡುತ್ತಿದ್ದಾರೆ. ಇದು ಶೋಭೆ ತರುವಂಥದ್ದಲ್ಲ.
ಬಸವಣ್ಣನವರ ಬಗ್ಗೆ ಲಘುವಾಗಿ ಮಾತನಾಡಿ ಬಸವ ಭಕ್ತರಿಗೆ ನೋವುಂಟು ಮಾಡಿದ್ದಕ್ಕೆ ಕೂಡಲೇ ಯತ್ನಾಳರು ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದರೆ ಮುಂದೆ ಅವರ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಸಿವೆ.
ತಹಶೀಲ್ದಾರ ಮುಖಾಂತರ ಮಾನ್ನ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಯತ್ನಾಳ ವಿರುದ್ಧ ಸರಕಾರ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.
ಮೊದಲಿಗೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆದು, ಸಂಘಟನೆಗಳ ಮುಖಂಡರಾದ ಹನುಮೇಶ ಕಲ್ಮಂಗಿ, ಬಸವರಾಜ ಬಳ್ಳೊಳ್ಳಿ, ಸಾವಿತ್ರಿ ಮುಜುಂದಾರ, ಶಿವಕುಮಾರ ಕುಕನೂರ, ರಾಜೇಶ ಸಸಿಮಠ, ಈರಣ್ಣ ಕೊರ್ಲಹಳ್ಳಿ, ಶಿವಬಸಯ್ಯ ವೀರಾಪುರ ಮತ್ತಿತರರು ಮಾತನಾಡಿದರು. ಯತ್ನಾಳ್ ನಡೆ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿದರು.
ಅರ್ಚನಾ ಸಸಿಮಠ, ಸೌಮ್ಯ ನಾಲ್ವಾಡ, ನಿರ್ಮಲ ಬಳ್ಳೊಳ್ಳಿ, ಗುಡದಪ್ಪ ಹಡಪದ, ದಾನಪ್ಪ ಶೆಟ್ಟರ, ಶರಣಬಸನಗೌಡ ಪಾಟೀಲ, ಶೇಖರ ಇಂಗಳದಾಳ ಸಂಗಮೇಶ ವಾರದ ಹೋರಾಟದ ನೇತೃತ್ವ ವಹಿಸಿದ್ದರು. ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಯ ಹಲವಾರು ಸದಸ್ಯರು ಭಾಗವಹಿಸಿದ್ದರು.
ಪ್ರತಿಭಟನೆಗಳು ಲಿಂಗಾಯತ ಧರ್ಮದ ವಿಚಾರಕ್ಕೆ ಮಾತ್ರ ಆಗಬೇಕು. ವ್ಯಕ್ತಿಗಳ ಬಗ್ಗೆ ಅಲ್ಲ. ಲಿಂಗಾಯತ ಧರ್ಮಕ್ಕೆ ಇದುವರೆವಿಗೂ ಕೆಲ ರಾಜಕಾರಣಿಗಳು, ಮಠಾಧೀಶರು ತಮ್ಮ ಅನುಕೂಲಕ್ಕೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ. ಇತಿಹಾಸ ಬದಲಿಸಿದ್ದಾರೆ, ಲಿಂಗಾಯತ ಹೆಸರನ್ನೇ ಸರಕಾರಿ ದಾಖಲೆಯಿಂದ ತೆಗೆದಿದ್ದಾರೆ, ಲಿಂಗಾಯತರಿಗೆ ರಾಜ್ಯ ಸರಕಾರ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಮಾಡಿರುವ ಶಿಪಾರಸ್ಸಿಗೆ ಅಡ್ಡಗಾಲಾಕಿದ್ದಾರೆ. ಇವುಗಳು ಮುಖ್ಯ ವಿಷಯಗಳು. ಇವುಗಳಿಗೆ ಹೂರಾಟ ಪ್ರಾರಂಬ ಆಗಲಿ.
ಇಷ್ಟೆಲ್ಲಾ ಆದ್ರೂ ಅವರು ಕ್ಷಮೆ ಕೇಳುವ ಅವಕಾಶ ಮಡಿಲ ಮುಂದೆ ಎಲ್ಲ ಒಗ್ಗಟ್ಟಾಗಿ ಮುಖ್ಯ ಮಂತ್ರಿಗಳ ಬೇಟಿ ಮಾಡಿ ಮನವಿ ಮಾಡೋಣ
👍👍👍
ಹರಕು ಬಾಯಿಯ ಯತ್ನಾಳ