24X7X365 ಬಸವ ನಾಮ ಪಠಿಸುವ ಬಸವ ಸಮಿತಿಯ ಅರವಿಂದ ಜತ್ತಿ ಅವರ ಮೌನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಕಲಬುರ್ಗಿ
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ:
ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ;
ಕೇಳು, ಕೂಡಲಸಂಗಮದೇವಾ,
ಮರಣವೇ ಮಹಾನವಮಿ!
- ವಿಶ್ವಗುರು ಬಸವಣ್ಣನವರು
ಮಂಗಳೂರಿನ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ ವೈದಿಕ ಧರ್ಮದ ಶಾಸ್ತ್ರಗಳಲ್ಲಿರುವ ವಿಚಾರಗಳನ್ನು ವಚನಗಳು ಸುಲಭ ಕನ್ನಡದಲ್ಲಿ ಮನೆಮನೆಗೆ ತಲುಪಿಸಿದವು ಎಂದು ಹೇಳಿದ್ದು ಆಶ್ಚರ್ಯ ಅಲ್ಲ. ಅದರೆ ಅವರ ಹೇಳಿಕೆಯ ಬಗ್ಗೆ ವಿಷಾದವಿದೆ.
ಅವರಿಗೆ 12ನೆಯ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮೇಶ್ವರ, ಛಲವಾದಿ ನಾಮದೇವ, ಅಕ್ಕಮಹಾದೇವಿ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಮತ್ತು ಇತರ ಶರಣರು ಈ ನೆಲದಲ್ಲಿ ಮಾಡಿದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ರಾಂತಿಯ ಅರಿವಿದೆ. ಆದರೆ ಅದನ್ನು ಮರೆಮಾಚಲು ಈ ಹೇಳಿಕೆ ನೀಡಿದ್ದಾರೆ.

ಅದರೆ, ದುರ್ದೈವ ಅಂದರೆ, ಅದೇ ವೇದಿಕೆಯ ಮೇಲಿದ್ದ 24X7X365 ಬಸವ ನಾಮ ಪಠಿಸುವ ಬಸವ ಸಮಿತಿಯ ಅರವಿಂದ ಜತ್ತಿ ಅವರ ಮೌನವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅವರೇಕೆ ವೇದಿಕೆಯ ಮೇಲೆ ಸ್ವಾಮೀಜಿ ಅವರ ಮಾತಿಗೆ ಪ್ರತಿಕ್ರಿಯೆ ಕೊಡಲಿಲ್ಲ? ಬಿಜೆಪಿ, ಆರೆಸ್ಸೆಸ್ ಮನ ಒಲಿಸಲು ಮಂಗಳೂರಲ್ಲಿ ಈ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತೆ? ಅವರ ವೈಯಕ್ತಿಕ ಹಿತಾಸಕ್ತಿಗೆ ಬಸವ ತತ್ವವನ್ನು ಗಾಳಿಗೆ ತೂರಿದರೆ?
ಸೈದ್ಧಾಂತಿಕವಾಗಿ ವಿರೋಧಿಗಳು ಎಂಬ ಕಾರಣಕ್ಕೆ ಪೇಜಾವರ ಮಠದ ಶ್ರೀಗಳು ವಚನ ಸಮ್ಮೇಳನಕ್ಕೆ ಬರಬಾರದು ಅಂತಲ್ಲ. ಅದರೆ ಆ ಸಮ್ಮೇಳನದಲ್ಲಿ ಕಳಬೇಡ ಕೊಲಬೇಡ… ವಚನ ಹೇಳಿ, ಅದು ಬಸವಣ್ಣನವರ ರಚನೆ ಅನ್ನೋದನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದನ್ನು ಪ್ರಶ್ನಿಸಬೇಕಿತ್ತು.
ಬಸವಣ್ಣ ಮತ್ತು ಬಸವಾದಿ ಶರಣರು ಸನಾತನ/ಹಿಂದುತ್ವದ ಭಾಗ ಎಂಬಂತೆ ಬಿಂಬಿಸಿ ಶರಣರಿಗೆ ಅವಮಾನ ಮಾಡಿರುವ ಪೇಜಾವರ ಶ್ರೀಗಳ ಹೇಳಿಕೆಯನ್ನೂ ಪ್ರಶ್ನಿಸಬೇಕಿತ್ತು. ಆದರೆ ಜತ್ತಿ ಅವರು ಅದನ್ನು ಮಾಡದಿರಲು ಕಾರಣವೇನು?

ವಚನಗಳು ಹಾಗೂ ಅವುಗಳಲ್ಲಿನ ಸತ್ಯ, ಶುದ್ಧ, ಸಚ್ಚಾರಿತ್ರ್ಯ ತತ್ವಗಳು ಬಾಯಿ ಪಾಠ ಮಾಡಿಕೊಂಡು ವೇದಿಕೆಯ ಮೇಲೆ ಹೇಳುವ ಗಿಳಿಪಾಠ ಆಗದೇ, ಬಸವ ತತ್ವಕ್ಕೆ, ಬಸವಾದಿ ಶರಣರ ಘನತೆಗೆ ಚ್ಯುತಿ ಬಂದಾಗ ಅದಕ್ಕೆ ಪ್ರತಿಕ್ರಿಯಿಸಿ ತಿಳಿ ಹೇಳಬೇಕಾಗುತ್ತದೆ ಎಂದು ಅರವಿಂದ ಜತ್ತಿ ಅವರಿಗೆ ಬುದ್ಧಿ ಹೇಳುವಷ್ಟು ನಾನು ದೊಡ್ಡವನಲ್ಲ.
ಅದರೆ, ಆ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ಹೇಳಿಕಿಗೆ ಪ್ರತಿಕ್ರಿಯೆ ನೀಡದೆ ಮೌನವಾಗಿ ಉಳಿದಿರುವ ಜತ್ತಿ ಅವರ ನಡೆಯು ಬಸವ ತತ್ವಕ್ಕೆ ಮಾಡುವ ಅಪಚಾರ ಆಗಿದೆ. ಅವರಿಂದ ತಕ್ಷಣವೇ ಸ್ಪಷ್ಟನೆ ಬರಲಿ.
ದೊಡ್ಡವರು ಸಣ್ಣವರು ಸಂಬಂಧ ಇಲ್ಲ, ವೇದಿಕೆ ಸಿಕ್ಕಿದೆ ಯಾವನೋ ಹೆಂಗೆಂಗೊ ಮಾತನಾಡುವಾಗ ಸುಮ್ಮನೆ ಕುಳಿತರೆ ಅವನು ಎಲ್ಲರಿಗಿಂತ ಚಿಕ್ಕವನು.
ಸತ್ಯ ಯಾವತ್ತೂ ಕಟೋರ, ನಿಜ ವಚನಕ್ಕೆ ಬೇರೆ ಸಾಟಿ ಇಲ್ಲ ಅದು ನಮ್ಮ ಜನಜೀವನದ ನಮ್ಮ ಸಮಾಜದ ರಕ್ತ
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
– ಬಸವಣ್ಣ
ತಾಯ ಮೊಲೆ ಹಾಲು ನಂಜಾಯಿತೇ ..?!
ಇದರ ಆಯೋಜಕರು ಯಾರು ಎನ್ನುವದನ್ನು ಪತ್ತೆ ಮಾಡಬೇಕು. ಇದು ಶರಣರ ವಚನಗಳು ವೇದ ಶಾಸ್ತ್ರ ಆಗಮ ಪುರಾಣ ಗಳಿಗಿಂತ ಭಿನ್ನ ಇಲ್ಲವೆಂದು ಸಾಬೀತು ಮಾಡುವ ವೈದಿಕರ ಪ್ರಯತ್ನ. ಇದಕ್ಕೆ ಸಾಕ್ಷಿ ಆದವರು ಅಲ್ಲಿಯೇ ಹೇಳಬೇಕಿತ್ತು.
Mr. Aravind Jatti is a dignified person having a proud legacy behind him. He knows how to handle the opposing narrative. No body need teach him how to safeguard Sharana philosophy; no body so far equalled his contributions.
Those who think street Barking is the only way to drive home a point must grow up! People hear his speech properly before passing illogical judgments ! Remember we are living in Democracy and everyone has an opinion to express. At the same time he knows how to educate the less knowledgeable ones.
In domocravy, every one has got freedom of speech and right to express his views. But this right has reasonable restriction. Any view or expression shall be based on true facts. False/imaginary facts are condemnable. The statement of Pejawar Sri is an utter false, biased and baseless. I condemn the statement of Pejawar Sri.
ವಚನಗಳು ವೇದ ಉಪನಿಷತ್ತು ಗಳ ಸಾರವಲ್ಲ. ಅವುಗಳು ಅನುಭಾವ ಸಾಹಿತ್ಯ. ಶರಣರ ಬಗ್ಗೆ ವಚನ ಸಾಹಿತ್ಯದ ಬಗ್ಗೆ ಹಗುರವಾಗಿ ಮಾತಾಡುವ, ಬರೆಯುವ ಪ್ರವೃತ್ತಿ ಇತ್ತೀಚಗೆ ಒಂದು ಫ್ಯಾಶನ್ ಆಗಿದೆ. ಅಂತಹ ವ್ಯರ್ಥ ಪ್ರಯತ್ನ ಖಂಡನೀಯ.
ಜತ್ತಿ ಅವರ ಬಸವ ನಿಷ್ಠೆ ಪ್ರಶ್ನಾತೀತ. ಅದರೂ ಅವರು ಪೇಜಾವರ ಶ್ರೀ ಗಳ ಅಸಂಭದ್ದ ಹೇಳಿಕೆಗೆ ಪ್ರತಿಕ್ರಿಯಿಸಬೇಕಾಗಿತ್ತು.
ಶರಣು ಶರಣಾರ್ಥಿ.
Sir, p. Rudrappa it is open secret. It was sponsored by Suttur Mutt and supported by RSS. BajarAnga dala. ABVP and other organisation which have the support of Suttur Matt and Sw—-.
ಬಹಳಷ್ಟು ವಚನಗಳು ಅವರು ಓದಿ ಅರ್ಥ ಮಾಡಿಕೊಂಡರೆ ಅವರ ನಿಲವು ಬದಲಿಸಬಹುದು. ಸಾವಿರಾರು ವಚನಗಳು ಅವರ ವೇದದಲ್ಲಿ ಎಲ್ಲ. ಕೆಲವು ವಚಗಳು ಅವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಅವರ ಅಭಿಪ್ರಾಯ ತಿಳಿಸಲು ಮರೆಯಬೇಡಿ. Sharanu sharnarthi
ಜತ್ತಿಯವರೊಳಗಿನ ಸಂಘಿ ಸಹವಾಸ ದೋಷ
ಅವರೊಳಗಿನ ಹುಸಿ ಬಸವಪ್ರೇಮದ ಅನಾವರಣ.
ಇದು ಈಗಿನ ನನ್ನ ಅಭಿಪ್ರಾಯವಾದರೂ ಬಹುದಿನಗಳಿಂದ ಬಸವನಾಮಧಾರಿ ಜತ್ತಿ ಅಣ್ಣನ ಬಗ್ಗೆ ಹಲವು ದಿನಗಳಿಂದ ಈ ರೀತಿಯ ಅಬಿಪ್ರಾಯಗಳು ಜನಗಳ ಬಾಯಲ್ಲಿ ಬರುತ್ತಿದ್ದವು ಈಗ ಜತ್ತಿ ಅಣ್ಣನವರು ಸಾಬೀತುಪಡಿಸಿದರು.
ನೆಲನೊಂದೇ ಹೊಲಗೇರಿ, ಶಿವಾಲಯಕ್ಕೆ.
ಜಲನೊಂದೇ ಶೌಚ ಆ ಚಮನಕ್ಕೆ,
ನಿಲವೊಂದೆ ತನ್ನ ತಾನರಿದವಂಗೆ. ಎನ್ನುವಂಥ ಒಂದು ಇಪ್ಪತ್ತು ವಚನ ಪೇಜಾವರ ಶ್ರೀಗಳಿಗೆ , ಶ್ರೀ b d jetti ಅನ್ನವವರು ಕಲಿಸಬೇಕೆಲ್ಲವೇ? ಆಗ ಅವರ ಮೌನಮೂರಿದಂತಯೇ ಆಗುತ್ತದೆ.
ಇದೊಂದು ಕೋರಿಕೆ.