ಮಠಾಧೀಶರ ಸಭೆ: ಗೂಗಲ್ ಮೀಟ್ ನಲ್ಲಿ ಮೂಡಿದ ಹೊಸ ಆಲೋಚನೆಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಲಿಂಗಾಯತ ಸಮಾಜದ ಮುಂದಿರುವ ಆತಂಕಗಳನ್ನು ಚರ್ಚಿಸಲು ಜನವರಿ 17 ಸಭೆ ಸೇರುತ್ತಿರುವ ಮಠಾಧೀಶರಿಗೆ ಬೆಂಬಲ ಸೂಚಿಸಲು ಶುಕ್ರವಾರ ರಾತ್ರಿ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಬಸವಾ ಮಿಡಿಯಾದ ಸಹಯೋಗದಲ್ಲಿ ಗೂಗಲ್ ಮೀಟ್ ನಡೆಯಿತು.

ಪ್ರಾಸ್ತಾವಿಕ ಮಾತುಗಳನ್ನು ನುಡಿದ ಟಿ. ಆರ್. ಚಂದ್ರಶೇಖರ ಅವರು ಸಮುದಾಯದ ಆತಂಕಗಳನ್ನು ಎದುರಿಸಲು ಮುಂದೆ ಬಂದಿರುವ ಮಠಾಧೀಶರ ನಡೆ ಕ್ರಾಂತಿಕಾರಕವಾಗಿದೆ ಅದನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸೋಮಶೇಖರಪ್ಪ, ಬೆಂಗಳೂರು, ಡಾ. ಗಿರಿಜಾ ಹಸಬಿ, ಗದಗ, ಶಿವಕುಮಾರ್ ಪಾವಟೆ, ಬೆಂಗಳೂರು, ಡಾ ಜೆ ಎಸ್ ಪಾಟೀಲ್, ವಿಜಾಪುರ, ಚೆನ್ನಒಡೆಯನಪುರದ ಚನ್ನಪ್ಪ, ನಂಜನಗೂಡು, ಕೆ . ಬಿ. ಮಹಾದೇವಪ್ಪ, ಬೆಂಗಳೂರು, ಶ್ರೀಶೈಲ ಜಿ ಮಸೂತೆ, ಬೆಂಗಳೂರು, ಮಾತನಾಡಿದರು.

ನಿಜಾಚರಣೆ, ಜನ ಸಂಪರ್ಕ, ಯುವಕರ ಸಂಘಟನೆ, ಶಿಕ್ಷಣ, ಹಿಂದುತ್ವ ಸಂಘಟನೆಗಳ ಅಪಾಯ, ಮಠಗಳ ಸ್ವರೂಪ, ಕಾರ್ಯ ವೈಖರಿ, ಬಸವ ತತ್ವ ಪ್ರಸಾರ, ಲಿಂಗಾಯತ ಧರ್ಮ ಹೋರಾಟ ಮುಂತಾದ ಹಲವಾರು ವಿಷಯಗಳ ಅವರುಗಳಿಂದ ಹೊಸ ಆಲೋಚನೆಗಳು, ಸಲಹೆಗಳು ಬಂದವು.

ನಾಗರಾಜ್ ನಿಂಬರ್ಗಿ ಅವರು ಶರಣ ಗೀತೆ ಹಾಡಿದರು ಸ್ವಾಗತ ಭಾಷಣವನ್ನು ಕುಮಾರ್ ಪಾಟೀಲ್ ಮಾಡಿದರು.

ಗೂಗಲ್ ಮೀಟ್ ನಲ್ಲಿ ಬಂದ ಹಲವಾರು ಸಲಹೆಗಳನ್ನು ಕ್ರೋಡೀಕರಿಸಿ ಮಠಾಧೀಶರಿಗೆ ತಲುಪಿಸಲಾಗುವುದು.

Share This Article
3 Comments
  • ಬಸವ ಪ್ರಣೀತ ಲಿಂಗಾಯತ ಗುರುಗಳು, ಮೊದಲು, ಪಾದಪೂಜೆ,ಪಾದೋದಕ,ಬೀದಿ ಬೀದಿಗಳಲ್ಲಿ ಕಾಲಿಗೆ ಬೀಲಿಸಿಕೊಳ್ಳುವುದು,ಮಹಾ ಜಗದ್ಗುರು ಎನ್ನುವುದು,ಎತ್ತರದ ಕುರ್ಚಿ ,ಪಲ್ಲಕ್ಕಿ. Etc.ಇವುಗಳನ್ನು ಬಿಡಬೇಕು…..ಭಕ್ತರಿಗೂ ತಿಳುವಳಿಕೆ ನೀಡಬೇಕು.
    ಆದರೆ,ನಮ್ಮ ಗುರುಗಳನ್ನು ಗೌರವ,ಭಕ್ತಿಯಿಂದ ಆದರಿಸಬೇಕು.

  • ಕೆಲವು ಸಲಹೆಗಳು ಲಿಖಿತ ರೂಪದಲ್ಲಿ ಒಕ್ಕೂಟದ ಕೈ ಸೇರಲಿ.

  • ಈ ದಿನ ಧಾರವಾಡದಲ್ಲಿ ನಡೆಯಲಿರುವ ಮಠಾಧೀಶರ ಸಭೆಯ ಸ್ಥಳ ಯಾವುದು ತಿಳಿಸಿ.

Leave a Reply

Your email address will not be published. Required fields are marked *