ದೇವನೂರು
ಡಿ ಎಂ ಮಹಾದೇವಮೂರ್ತಿ ಬರೆದಿರುವ ‘ಶ್ರೀ ಗುರು ಮಲ್ಲೇಶ್ವರ ಪ್ರಭಾವಲಯ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ಮಂಗಳವಾರ ಜರುಗಿತು.
ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠದ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಸುಮಾರು ನಾಲ್ಕು ದಶಕಗಳ ಹಿಂದೆ ರಚಿತವಾಗಿರುವ ಶ್ರೀ ಗುರುಮಲ್ಲೇಶ್ವರ ಪ್ರಭಾವಲಯ ಗ್ರಂಥ ಈಗ ಬಿಡುಗಡೆಯ ಭಾಗ್ಯ ಪಡೆಯುತ್ತಿದೆ. ದೇವನೂರಿನ ಮಹಾದೇವಮೂರ್ತಿ ಅವರ ಅಧ್ಯಾತ್ಮ, ಅಧ್ಯಯನಗಳ ಫಲವೇ ಈ ಕೃತಿ, ಎಂದು ಪ್ರೊಫೆಸರ್ ಎಂ ಚಂದ್ರಶೇಖರಯ್ಯ ಹೇಳಿದರು.
ಪ್ರೊ. ಡಿ ಎಂ ಶಾಂತಪ್ಪ ರವರು ಸ್ವಾಗತ ಮಾಡಿದರು, ಬಸವರಾಜು ಶಾಸ್ತ್ರಿಗಳು ವಚನಗಾಯನ ಹಾಡಿದರು, ಶ್ರೀಮತಿ ಗುರುಶಾಂತಮ್ಮ ಮಹಾದೇವಮೂರ್ತಿ, ಮಲ್ಲಿಕಾರ್ಜುನ ಆರಾಧ್ಯರು, ಎಂ ಬಸವರಾಜು, ಬಿ ಚಿನ್ನಸ್ವಾಮಿ, ಡಿ ಎಸ್ ಗುರುಸ್ವಾಮಿ, ಶಿವರುದ್ರಪ್ಪ, ಎಂ ಕೆ ಮಲ್ಲೇಶಪ್ಪ, ಪಿ ಎಂ ಗುರುಸ್ವಾಮಿ, ಬಸಪ್ಪ ಅವಿನಾಶ್, ವೇದಿಕೆ ಮೇಲೆ ಉಪಸ್ಥಿತರಿದ್ದರು.
ಬಸವಣ್ಣನವರ ಅವತಾರವೇ ಶ್ರೀಗುರುಮಲ್ಲೇಶ್ವರರು. ಶ್ರೀಗುರುಮಲ್ಲೇಶ್ವರ ಅಪ್ಪಿದವರೆಲ್ಲರು ದೈವತ್ವವನ್ನ ಪಡೆದಿರುತ್ತಾರೆ. ಅವರ ಬಗ್ಗೆ ಪುಸ್ತಕ ಬರೆದು ಉತ್ತಮ ಕೆಲಸವನ್ನ ಮಾಡಿದ್ದಾರೆ