ಹುಬ್ಬಳ್ಳಿ
ನಗರದ ಮಹಾಶರಣೆ ಗಂಗಾಬಿಕಾ ಬಳಗ ಪ್ರತಿ ಸೋಮವಾರ ನಡೆಸುವ ಮಹಾಮನೆ ಕಾರ್ಯಕ್ರಮವು 200 ಕಂತುಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗೃಹಿಣಿಯರಿಗಾಗಿ ವಚನ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಿದೆ.
ಆಸಕ್ತರು ಭಾಗವಹಿಸಿ ಬಹುಮಾನಕ್ಕೆ ಪಾತ್ರರಾಗಲು ಕೋರಲಾಗಿದೆ.
ಸೂಚನೆಗಳು:
1) ಹೆಸರು ಕೊಡಲು ಕೊನೆಯ ದಿನಾಂಕ 01/02/2025.
2) ಸ್ಪರ್ಧೆಯ ದಿನಾಂಕ : 3/02/25 ಸೋಮವಾರದಂದು,
ಸಮಯ ನಂತರ ತಿಳಿಸಲಾಗುವುದು.
3) ಸ್ಪರ್ಧೆಗೆ ಬೇಕಾದ ಪೇಪರ್ ಒದಗಿಸಲಾಗುವುದು.
4) 1 ಗಂಟೆಯ ಸ್ಪರ್ಧೆಯೆಂದು ನಿಗದಿಪಡಿಸಲಾಗಿದೆ.
5) ಬಹುಮಾನ
ಪ್ರಥಮ ಬಹುಮಾನ ₹.1000/-
ದ್ವಿತೀಯ ಬಹುಮಾನ ₹ 700/-
ತೃತೀಯ ಬಹುಮಾನ ₹ 500/-
6) ಬರಹ ಹಾಗೂ ಭಾಷೆ ಸ್ಪಷ್ಟ ವಾಗಿರಬೇಕು.
7) 12ನೇ ಶತಮಾನದ ಬಸವಾದಿ ಶರಣ-ಶರಣೆಯರ ವಚನಗಳಿಗೆ ಮಾತ್ರ ಅವಕಾಶವಿದೆ.
8) ಸರ್ವಜ್ಞ, ಆಧುನಿಕ ವಚನಗಳಿಗೆ ಅವಕಾಶವಿಲ್ಲ.
9) ವಚನಕಾರರ ಹೆಸರು ಹಾಗೂ ಅಂಕಿತನಾಮ ಸ್ಪಷ್ಟವಾಗಿರಬೇಕು.
10) ಮಕ್ಕಳಿಗೆ ಪ್ರವೇಶವಿಲ್ಲ.
ಬಹುಮಾನದಲ್ಲಿ ಬದಲಾವಣೆವಾಗಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು :
ಸಂಚಾಲಕರು,
ಮೊ.ಸಂಖ್ಯೆ: 9972044182