ಶರಣ ಗಾಣದ ಕಣ್ಣಪ್ಪ ಶಿವಾನುಭವ ಸೇವಾ ಸಮಿತಿಯ ಮಾಸಿಕ ಶಿವಾನುಭವ

ಕೊಪ್ಪಳ

ಮಾನವ ಜನ್ಮ ಬಹಳ ದೊಡ್ಡದು, ಅದನ್ನು ಎಂದು ಕೆಡಿಸಿಕೊಳ್ಳಬಾರದು. ನಮಗೆಲ್ಲಾ ಬಸವಾದಿ ಶರಣರ ವಚನಗಳು ಮತ್ತು ಅವರ ಬದುಕೇ ಯಾವಾಗಲೂ ಆದರ್ಶ ಎಂದು ಶರಣ ಗಿರೀಶ್ ಸಸಿಮಠ ಹೇಳಿದರು.

ಅವರು ಶನಿವಾರ ಜಿಲ್ಲಾ ಗಾಣಿಗರ ಸಮುದಾಯ ಭವನದಲ್ಲಿ, ಶರಣ ಗಾಣದ ಕಣ್ಣಪ್ಪ ಶಿವಾನುಭವ ಸೇವಾ ಸಮಿತಿ ವತಿಯಿಂದ ನಡೆದ 33ನೇ ಮಾಸಿಕ ಶಿವಾನುಭವ ಕಾರ್ಯಕ್ರಮಲ್ಲಿ ಮಾತನಾಡಿದರು.

12ನೇಯ ಶತಮಾನದಲ್ಲಿ ಶರಣೆ ಸತ್ಯಕ್ಕ ರಾಜಬೀದಿಯ ಕಸಗೂಡಿಸುವ ಕಾಯಕ ಸಂದರ್ಭದಲ್ಲಿ ಬೀದಿಯಲ್ಲಿ ಬಿದ್ದ ಒಂದು ಚಿನ್ನದ ಗಂಟು ಅವರಿಗೆ ಸಿಕ್ಕಿತು. ಅದನ್ನು ಕಂಡು ಒಂದು ವಚನ ರಚನೆ ಮಾಡಿದ್ದಾರೆ ಎಂದರು.

ಲಂಚವಂಚನಕ್ಕೆ ಕೈಯಾನದಭಾಷೆ. ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ ನಾನು ಕೈ ಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ. ಇಂತಲ್ಲದೆ ನಾನು ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ, ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ, ಎಂಬ ಸತ್ಯಕ್ಕನವರ ವಚನದಂತೆ

ಶರಣರು ನುಡಿದಂತೆ ನಡೆದರು. ಅದಕ್ಕಾಗಿ ಅವರ ವಿಚಾರಗಳು ಶಾಶ್ವತ. ನನ್ನದಲ್ಲದ ಚಿನ್ನವನ್ನು ಮುಟ್ಟಿದರೆ ನನ್ನ ನರಕದಲ್ಲಿ ಇಡು ಅನ್ನುವ ಮಾತನ್ನ ಹೇಳಿದ ಸತ್ಯಕ್ಕನಂತವರು ನಮಗೆಲ್ಲ ಶ್ರೇಷ್ಠರು, ಎಂದರು.

ಜಾತಿಭೇದ ಜರಿದು ಬನ್ನಿ
ವಯೋ ಭೇದ ಮರೆತು ಬನ್ನಿ
ಲಿಂಗ ಭೇದ ಮರೆತು ಬನ್ನಿ
ಮನೆಮಂದಿ ನೆರೆಹೊರೆಯವರನ್ನ ಕರೆದು ತನ್ನಿ
ವಚನ ಪ್ರಾರ್ಥನೆ ಮಾಡ ಬನ್ನಿ
ವಚನಗಳ ಹೇಳಬನ್ನಿ ಅನುಭಾವವ ಅರಿಯ ಬನ್ನಿ
ಅನುಭಾವ ತಿಳಿಸ ಬನ್ನಿ ಅದಕ್ಕಾಗಿ ಸತ್ಸಂಗ ಸೇರೋಣ ಬನ್ನಿ.
ಶರಣ ಗಾಣದ ಕಣ್ಣಪ್ಪ ಶಿವಾನುಭವ ಮಂಟಪಕ್ಕೆ ಬನ್ನಿ ಎನ್ನುವ ಕವನವನ್ನು ಗವೀಶ ವಾಚಿಸಿದರು.

ಅಕ್ಷರಮಾತೆ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತ ಸರೋಜಿನಿ ಕಲಹಾಳ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಲ್ಲಪ್ಪ ( ಗಿಡ್ಡಪ್ಪ) ಮೆತಗಲ್ಲ, ಹೊಸೂರು ಅಧ್ಯಕ್ಷತೆ ವಹಿಸಿದ್ದರು.

ಶರಣೆ ರಿತಿಕಾ ಇಂಗಳದಾಳ ವಚನ ಪಠಣ ಮಾಡಿದರು. ರುದ್ರಪ್ಪ ಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶೇಖರ ಇಂಗಳದಾಳ ಸ್ವಾಗತ ಕೋರಿದರು. ಶಿವಸಂಗಪ್ಪ ವಣಗೇರಿ ಶರಣು ಸಮರ್ಪಣೆ ಮಾಡಿದರು.

ಶರಣಪ್ಪ ಉಳ್ಳಾಗಡ್ಡಿ, ಪರಪ್ಪ ಗೊಂದಿಹೊಸಳ್ಳಿ ಟಣಕನಕಲ್ ಬಳಗ , ಶಿವಬಸಯ್ಯ ವಿರೂಪಾಪುರ, ಸುವರ್ಣ ಗಾಣಿಗರ, ಈರಮ್ಮ ಕೊಳ್ಳಿ, ಪ್ರೆಮಕ್ಕ ಟಣಕನಕಲ್, ಈರಣ್ಣ, ಬಸವರಾಜ ಜಕಾತಿ , ವಿಜಯಲಕ್ಷ್ಮಿ ಪಾಟೀಲ ಇತರರು ಉಪಸ್ಥಿತರಿದ್ದರು. ಶಂಕ್ರಪ್ಪ ವೀರಪ್ಪ ನಕ್ರಳ್ಳಿ, ಹ್ಯಾಟಿ ಇವರ ಸುಪುತ್ರ ಚಂದ್ರಪ್ಪ ದಾಸೋಹ ಸೇವೆ ವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು, ಜಿಲ್ಲಾ ಯುವಘಟಕ, ಜಾ ಲಿಂ ಮಹಾಸಭಾ ಕೊಪ್ಪಳ.