ಭಾಲ್ಕಿ
ಮಹಾರಾಷ್ಟದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಶರಣ ಸಾಹಿತ್ಯ ಅಧ್ಯಯನ ಕೇಂದ್ರದ ಉದ್ಘಾಟನೆ ನೆರವೇರಿತು.
ಶಿವಾಜಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ಟಿ.ಶಿರ್ಕೆ ಅವರು ಅಧ್ಯಕ್ಷತೆ ವಹಿಸಿ, ಭಾಲ್ಕಿ ಶ್ರೀಗಳು ಮಹಾರಾಷ್ಟ ಬಸವ ಪರಿಷತ್ತ ಮೂಲಕ ಮರಾಠಿಯಲ್ಲಿ ಶರಣ ಸಾಹಿತ್ಯ ಪ್ರಕಟಿಸಿದ ಕಾರಣದಿಂದಲೆ ನಮಗೆ ಇಂತಹ ಕಾರ್ಯ ಮಾಡಲಿಕ್ಕೆ ಪ್ರೇರಣೆಯಾಗಿದೆ.
ಬಸವಣ್ಣನವರ ಚಿಂತನೆಗಳು ಯುವಕರಿಗೆ ಪ್ರೇರಣಾದಾಯಕವಾಗಿದೆ. ಅವರ ವಚನ ಸಾಹಿತ್ಯ ಅಧ್ಯಯನ ಮಾಡಲಿಕ್ಕೆ ಶರಣ ಸಾಹಿತ್ಯ ಅಧ್ಯಯನ ಕೇಂದ್ರ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಮ್ಮ ಅನುಭಾವ ಹಂಚಿಕೊಂಡರು.
ಸಾನಿಧ್ಯ ವಹಿಸಿ ಶ್ರೀಗಳು ಬಸವಾದಿ ಶರಣರ ವಚನ ಸಾಹಿತ್ಯ ಜಗತ್ತಿಗೆ ದಾರಿದೀಪವಾಗಿದೆ. ಆ ದಿಶೆಯಲ್ಲಿ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಶರಣ ಸಾಹಿತ್ಯ ಅಧ್ಯಯನ ಪ್ರಾರಂಭವಾಗಿದ್ದು ನಮಗೆ ಅತ್ಯಂತ ಸಂತೋಷ ತಂದಿದೆ, ಎಂದು ಹೇಳಿದರು.
ನಾವು ಕಳೆದ ಎರಡು ದಶಕಗಳಿಂದ ಮಹಾರಾಷ್ಟದ ಬಸವ ಪರಿಷತ್ತಿನ ಮೂಲಕ ಶರಣ ಸಾಹಿತ್ಯವನ್ನು ಮರಾಠಿಯಲ್ಲಿ ಪ್ರಕಟಿಸುವ ಕಾರ್ಯ ಮಾಡುತ್ತಿದ್ದೇವೆ. ಇಂದು ಆ ಕಾರ್ಯ ಸಾರ್ಥಕವಾಗಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಶರಣ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.
ಉಪಕುಲಪತಿಗಳಾದ ಡಾ.ಪಿ.ಎಸ್.ಪಾಟೀಲ, ಕುಲಸಚಿವರಾದ ಡಾ.ಬಿ.ಎಂ.ಸಿಂಧೆ ಹಾಗೂ ಅಧ್ಯಾಸನದ ಮುಖ್ಯಸ್ಥರಾದ ಡಾ.ತೃಪ್ತಿ ಕರೆಕಟ್ಟಿ ಮುಂತಾದ ಗಣ್ಯರು ವೇದಿಕೆ ಮೇಲೆ ಇದ್ದರು.
ಶರಣ ಸಾಹಿತ್ಯ ಅಧ್ಯಯನ ಕೇಂದ್ರ ಪ್ರಾರಂಭವಾಗಲು ಕೊಲ್ಲಾಪುರ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯರಾದ ಶ್ರೀ ಅಭಿಷೇಕ ಮಿಠಾರಿ, ಯಶ ಅಂಬೋಳೆ, ಸರಳತಾಯಿ ಪಾಟೀಲ, ರಾಜಶೇಖರ ತಂಬಾಕೆ, ಬಿ.ಎಂ.ಪಾಟೀಲ ಮುಂತಾದ ಗಣ್ಯರು ಶ್ರಮಿಸಿದರು.