ಇಂತಹ ಸಂಸ್ಕಾರಹೀನ ಕಾವಿಧಾರಿಗಳು ನಾಡಿಗೆ, ಮಠ ಪರಂಪರೆಗೆˌ, ಶರಣ ಪರಂಪರೆಗೆ ಕಳಂಕಪ್ರಾಯರು.
ವಿಜಯಪುರ
ಲಿಂಗಾಯತ ಮಠ ಪರಂಪರೆಗೆ ಇತ್ತೀಚಿಗೆ ಕಪ್ಪು ಮಸಿ ಬಳೆಯುವ ಕಾರ್ಯಗಳು ಅಯೋಗ್ಯ ಕಾವಿಧಾರಿ ಮಠಾಧೀಶರಿಂದ ನಡೆಯುತ್ತಿದೆ.
ಹಿಂದುತ್ವದ ಮೂಲಭೂತವಾದಿಗಳಾಗಿ ‘ಅಗ್ರಹಾರದ ನಾಜಿ’ಗಳಂತೆ ನಾಡಿನ ಸೌಹಾರ್ದತೆ ಕದಡುವ ಕುಕೃತ್ಯದಲ್ಲಿ ಈ ಕಾವಿಧಾರಿಗಳು ತೊಡಗಿದ್ದಾರೆ.
ಮಾತೆತ್ತಿದರೆ ಸನಾತನ ಪರಂಪರೆ ಮುಂತಾದ ಸವಕಲು ಸರಕುಗಳನ್ನು ಪಠಿಸುವ ಈ ಕಾವಿಗಳು ಮಾಡುವ ಕತ್ತಲೆಯ ಕಾರ್ಯಗಳು ಒಂದೆರಡಲ್ಲ.
ಬಸವ ಪರಂಪರೆಯ ಬಸವೋತ್ತರ ಯುಗದ ಪ್ರಮುಖ ವಚನಕಾರರಲ್ಲಿ ಶರಣ ಕಾಡಸಿದ್ಧರು ಪ್ರಮುಖರು. ಮಹಾರಾಷ್ಟ್ರದ ಕನ್ಹೇರಿಯ ಮಠ ವಚನಕಾರ ಕಾಡಸಿದ್ಧರ ಅವೈದಿಕ ಲಿಂಗಾಯತ ಪರಂಪರೆಗೆ ಸೇರಿದ ಮಠ.
ಈ ಮಠಕ್ಕೆ ಯಾವ ಅಧ್ಯಾತ್ಮಿಕˌ ವಚನ ಸಾಹಿತ್ಯˌ ಶರಣ ಪರಂಪರೆಯ ಹಿನ್ನೆಲೆ ಇರದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ್ ಗ್ರಾಮದ ಮೇಟಿ ಎನ್ನುವ ಲಿಂಗಾಯತ ರೆಡ್ಡಿ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ ಈಗಿನ ಪೀಠಾಧಿಪತಿ.

ಇವರು ವಿಜಯಪುರದ ಜ್ಞಾನಯೋಗಾಶ್ರಮದ ಪ್ರಸಿದ್ಧ ಪ್ರವಚನಕಾರರಾಗಿದ್ದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮಿಗಳ ಶಿಷ್ಯ ಎಂದು ಹೇಳಿಕೊಳ್ಳುತ್ತಾರೆ.
ಸಿದ್ದೇಶ್ವರ ಸ್ವಾಮಿಗಳಿಗೆ ಇದ್ದ ಅಘಾದ ಜ್ಞಾನವಾಗಲಿˌ ಇನ್ನೊಂದು ಧರ್ಮದ ಕುರಿತು ಅವರಿಗಿದ್ದ ಗೌರವವಾಗಲಿ ಯಾವುದೂ ಇವರಿಗೆ ಇಲ್ಲ.
ಮಾತೆತ್ತಿದರೆ ಸಾಕು ಅಲ್ಪಸಂಖ್ಯಾತರ ವಿರುದ್ಧ ವಿಷ ಕಾರುವ ಇವರು ಸಿದ್ದೇಶ್ವರ ಸ್ವಾಮಿಗಳ ಹೆಸರು ಹೇಳಲು ಯಾವುದೆ ನೈತಿಕತೆ ಹೊಂದಿಲ್ಲ. ಇವರಿಗೆ ಸನ್ಯಾಸಿಯಾಗುವ ಅವಕಾಶ ನೀಡಿದ್ದು ಲಿಂಗಾಯತ ಧರ್ಮದ ಶರಣ ಪರಂಪರೆಯೆ ಹೊರತು ಇವರು ಬೆಂಬಲಿಸುವ ಸನಾತನ ಧರ್ಮವಲ್ಲ.
ಇವರಿಗೆ ಸನ್ಯಾಸಿಯಾಗುವ ಅವಕಾಶ ನೀಡಿದ್ದು ಲಿಂಗಾಯತ ಧರ್ಮದ ಶರಣ ಪರಂಪರೆಯೆ ಹೊರತು ಇವರು ಬೆಂಬಲಿಸುವ ಸನಾತನ ಧರ್ಮವಲ್ಲ.
ಇಂತಹ ಸಂಸ್ಕಾರಹೀನ ಕಾವಿಧಾರಿಗಳು ನಾಡಿಗೆ, ಮಠ ಪರಂಪರೆಗೆˌ, ಶರಣ ಪರಂಪರೆಗೆ ಕಳಂಕಪ್ರಾಯರು. ಈತನ ಹಣೆಯ ಮೇಲಿರುವ ಶುಭ್ರ ವಿಭೂತಿಯ ಬದಲಿಗೆ ಉಗ್ರ ರಕ್ತ ತಿಲಕವು ಈತನೊಬ್ಬ ಲಿಂಗಾಯತ ವಿರೋಧಿˌ ಬಸವ ವಿರೋಧಿ ಎನ್ನುವುದನ್ನು ಎತ್ತಿ ತೋರಿಸುತ್ತದೆ.
ಇವರು ಸಂಘ ಪರಿವಾರದ ಸಾವಯವ ಕೃಷಿ ಘಟಕದ ಮುಖ್ಯಸ್ಥ. ಕೃಷಿಯ ಹೆಸರಿನಲ್ಲಿ ಹಿಂದುತ್ವವನ್ನು ಗಟ್ಟಿಗೊಳಿಸಲು ಸಂಘ ಇವರನ್ನು ದಾಳವಾಗಿ ಬಳಸಿಕೊಳ್ಳುತ್ತದೆ. ಇವರಿಗೆ ನಿರ್ಧಿಷ್ಟವಾಗಿ ಯಾವುದೇ ಶಿಷ್ಯವರ್ಗವಿಲ್ಲ, ಏಕೆಂದರೆ ಇವರು ಯಾವತ್ತೂ ಅಧ್ಯಾತ್ಮˌ ಭಕ್ತಿˌ ಅನುಭಾವದ ಕುರಿತು ಮಾತನಾಡುವುದೆ ಇಲ್ಲ. ಕಾರಣ ಇವರಿಗೆ ಆ ವಿಷಯಗಳ ಕುರಿತು ಯಾವ ಜ್ಞಾನವೂ ಇಲ್ಲ.
ಆ ಕಾರಣದಿಂದ ಇವರು ಒಬ್ಬ ಹಿಂದುತ್ವದ ಏಜೆಂಟ್ ನಂತೆ ಅಲ್ಪಸಂಖ್ಯಾತರ ವಿರುದ್ಧ ಮತ್ತು ಲಿಂಗಾಯತ ಬಸವಾನುಯಾಯಿಗಳ ವಿರುದ್ಧ ಆಗಾಗ ಹಗುರವಾಗಿ ನಾಲಿಗೆ ಹರಿಬಿಡುತ್ತಾರೆ.
ಈ ಭಾಗದಲ್ಲಿ ಇವರು “ಲೂಜ್ ಟಂಗ್ ಸ್ವಾಮಿ” ಎಂದೇ ಕುಖ್ಯಾತಿ ಪಡೆದಿದ್ದಾನೆ. ಇವರ ಪಟಾಲಮ್ ನಲ್ಲಿ ವಚನದರ್ಶನ ಪುಸ್ತಕ ಸಂಪಾದನೆಯ ಕುಖ್ಯಾತಿ ಹೊಂದಿರುವ ಸದಾಶಿವಾನಂದ (ಕೈವಲ್ಯಾನಂದ) ಮುಂತಾದ ತ್ರಿಶೂಲ ವಿತರಣೆ ಮಾಡುವ ಉಗ್ರ ಹಿಂದುತ್ವವಾದಿ ಕಾವಿಗಳ ಗುಂಪಿದೆ. ಇವರಿಗೆ ಯಾವುದೆ ಅಧ್ಯಾತ್ಮ ಪರಂಪರೆಯಿಲ್ಲ ˌ ಕೇವಲ ಹಿಂದುತ್ವದ ವಿಷ ಕಾರುವುದುˌ ಹಗುರವಾಗಿ ನಾಲಿಗೆ ಹರಿಬಿಡುವುದೆ ಇವರ ಕಾರ್ಯ. ಈ ಗುಂಪು ಸದಾ ವಿಜಯಪುರದ ಸಿದ್ಧೇಶ್ವರ ಸ್ವಾಮಿಗಳ ಹೆಸರನ್ನು ಅನಗತ್ಯವಾಗಿ ಬಳಸಿ ಅವರ ಜ್ಞಾನವನ್ನು ಹಾಗೂ ಬದುಕಿನ ಸರಳ ಸಜ್ಜನಿಕೆಯ ಮಾರ್ಗವನ್ನು ಅವಮಾನಿಸುತ್ತದೆ.
ಒಂದು ವಚನವನ್ನು ಸರಿಯಾಗಿ ಹೇಳಲು ಬಾರದ ಇವರು ಮಾತನಾಡಿದಾಗಲೆಲ್ಲ ವಿಷ ಹೊರಬರುತ್ತದೆ. ಮಠಾಧೀಶನಾಗಲು ಯಾವುದೇ ಅರ್ಹತೆ ಇಲ್ಲದ ಇಂತಹ ಮೂರನೇ ದರ್ಜೆಯ ಜನರು ಮಠ ಪರಂಪರೆಗೆˌ ಅಧ್ಯಾತ್ಮ ಪರಂಪರೆಗೆˌ ಶರಣ ಪರಂಪರೆಗೆ ಕೆಟ್ಟ ಹೆಸರನ್ನು ತರುತ್ತಾರೆ.
ಲಿಂಗೈಕ್ಯ ಸಿದ್ದೇಶ್ವರ ಸ್ವಾಮಿಗಳಿಗೆ ಕೊನೆಕೊನೆಗೆ ಈ ಗುಂಪಿನ ಸೌಹಾರ್ದತೆಯ ವಿರೋಧಿ ಚಟುವಟಿಕೆಗಳ ಕುರಿತು ತಿಳಿದಿತ್ತು. ಅಷ್ಟೊತ್ತಿಗೆ ಕಾಲ ಮಿಂಚಿಹೋಗಿತ್ತು. ಇವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಆಗಲಿಲ್ಲವೆಂತಲು ಹಾಗೂ ಕೊನೆಗಾಲದಲ್ಲಿ ಸಿದ್ಧೇಶ್ವರ ಸ್ವಾಮಿಗಳನ್ನು ಈ ಗುಂಪು ನಿಯಂತ್ರಿಸಲು ಪ್ರಯತ್ನಿಸುತ್ತಿತ್ತು ಎಂತಲು ಸ್ವಾಮಿಗಳ ಸಮಿಪವರ್ತಿಗಳು ಅಭಿಪ್ರಾಯ ಪಡುತ್ತಾರೆ.
ಬಸವಾನುಯಾಯಿಗಳನ್ನು ಬಸವ ತಾಲಿಬಾನಿಗಳೆಂದು ಕರೆದು ತಮ್ಮ ಹೀನ ಸಂಸ್ಕಾರ ತೋರಿರುವ ಈ ಕನ್ಹೇರಿ ಸ್ವಾಮಿಗೆ ಶರಣ ಪರಂಪರೆಯ ಲಿಂಗಾಯತ ಮಠಾಧೀಶರು ತಕ್ಕ ಉತ್ತರವನ್ನು ನೀಡಬೇಕಿದೆ.
ಬಸವರ ಮಾರ್ಗದಲ್ಲಿ ಬದುಕುವುದು ತಾಲಿಬಾನಿಗಳಾಗುವುದಾದರೇ, ಕನ್ಹೇರಿ ಸ್ವಾಮಿಯೇ ಕೇಳಿಲ್ಲಿ ನಾವು ಬಸವ ತಾಲಿಬಾನಿಗಳೇ…
If living in the path of Basava is like becoming a Taliban, then Kanheri Swami listen,we are the Basava Talibani’s only…
#Basavanna #kannheriswami #Asianetsuvarnanews
ಈ ಕಂತ್ರಿ ಸ್ವಾಮಿಗೆ ಪಾದರಕ್ಷೆ ಪೂಜೆ ಮಾಡುವುದಕ್ಕಾದರೂ ನಾವು ತೆಲಿಬ್ಯಾನಿಗಳಾಗೋದಕ್ಕೆ ತಯಾರಿದ್ದೇವೆ
ನಿರ್ಮಲವಾದ ಮನಸ್ಸುಗಳನ್ನು ಕಲುಷಿತಗೊಳಿಸುವ ಹೊನ್ನಾರದ ಹೇಳಿಕೆಗಳು ಇವು. ನನ್ನನ್ನು ಯಾರು ಗಮನಿಸುತ್ತಿಲ್ಲ ಎಂಬ ಬೇಗುದಿ ಮತ್ತು ಪ್ರಚಾರದ ಹುಚ್ಚು ಈ ಮಾತುಗಳಲ್ಲಿ ಎದ್ದು ತೋರುತ್ತದೆ . ಇಂತಹರ್ ಇದ್ದಾರೆ ಎಂದು ಬಸವ ಅನುಯಾಯಿಗಳು ಎಚ್ಚೆತ್ತುಕೊಂಡರೆ ಸಾಕು. ನಮ್ಮೆಲ್ಲರ ಒಗ್ಗಟ್ಟಿನ ಬಲವೇ ಇಂತಹ ರನ್ನು ಹತ್ತಿಕ್ಕುವ ಮೂಲ ಮಂತ್ರ.
Jnb
ಬಸವ ನಾಡಿನ ಸಮಾಜ ಮತ್ತು ಸಾಮಾಜಿಕ ದ್ರೋಹಿ ಈ ಕನ್ನೇರಿಶ್ರೀ..ವಿಭೂತಿ ಮತ್ತು ಲಿಂಗಾಯತ ದ್ರೋಹಿ ಈ ಕನ್ನೇರಿಶ್ರೀ.ಇವರ ವಿರುದ್ಧ ಲಿಂಗಾಯತ ಧರ್ಮದ ಅನುಯಾಯಿಗಳು ಪ್ರತಿಭಟನಾ ಆಂದೋಲನ ಹಮ್ಮಿಕೊಳ್ಳಲೇ ಬೇಕು.
ಅಗ್ರಹಾರಿಗಳ ತೀರ್ಥಪ್ರಸಾದದ ಊಟದ ಈ ಸ್ವಾಮೀಜಿಯು ಲಿಂಗಾಯತರನ್ನೆ ಟಾರ್ಗೆಟ್ ಮಾಡಿ ಯಾವಾಗಲೂ ಮಾತನಾಡುವ ಕುತಂತ್ರಗಳನ್ನ ಲಿಂಗಾಯತರು ಗಮನಿಸಬೇಕು
ಅಗ್ರಹಾರದ ಈ ನಾಜೀ ಗೆ ಬಸವಪರ ಸಂಘಟನೆಗಳಿಂದ ಉತ್ತರ ಕೊಡಲೇಬೆಕು, ಬಸವಪರವಿರುವವರನ್ನು ತಾಲಿಬಾನಿಗಳು ಯಂದು ಕರೆದ ಇವನ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಹಾದಿಯಾಗಿ ಎಲ್ಲರೂ ಪೋಲಿಸ್ ಠಾಣೆ ಗೆ ದೂರು ನೀಡಬೆಕು.
ಕನ್ನೇರಿ ಮಠಾಧೀಶರ ಈ ಹೇಳಿಕೆ ಅಕ್ಷಮ್ಯ ಅಪರಾಧ ಮತ್ತು ಧರ್ಮ ನಿಂದನೆಗೆ ಸಮನಾದುದು. ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಬಸವ ಧರ್ಮೀಯರ ಕ್ಷಮಾರ್ಪಣೆ ಕೇಳಬೇಕು. ಒಬ್ಬ ಬಸವ ಪ್ರಣೀತ ಲಿಂಗಾಯತ ಮಠವೊಂದರ ಮಠಾಧೀಶರ ಈ ಹೇಳಿಕೆ ಖಂಡನೀಯ. ಇವರ ಮಾತಿನ ಹಿಂದೆ ಬೇರೆ ಏನೋ ಹುನ್ನಾರ ಇರುವಂತಿದೆ.
ಇವನಾರವನೆನ್ನದೆ ಇವ ನಮ್ಮವ ಎನ್ನುವ ಬಸವ ಹೃದಯಿಗಳಿಗೆ ತಾಲಿಬಾನಿ ಗಳು ಎನ್ನುವ ನಿನ್ನ ನಾಲಿಗೆ ಹಿಡಿತ ಮೀರಿದೆ ಇನಾದರೂ ಇಚ್ಛೆತುಕೊಂಡು ಸರಿಪಡಿಸಿಕೊ ಇಲಂದ್ರೆ ಬಸವ ಪ್ರಜ್ಞೆ ನಿನ್ನ ನಾಲಿಗೆ ಸೀಳಿತು…..
ನಿನ್ನನ್ನ ಬೆಳಿಸಿದ್ದು ಮತ್ತು ನೀನೂ ಇವಾಗ ಈ ಮಟ್ಟದಲ್ಲಿ ಬೆಳೆದು ನಿಂತದ್ದು ಲಿಂಗಾಯತ ಮಠದಲ್ಲಿಯೇ ಎನ್ನುವ ಪ್ರಜ್ಞೆ ಇರಲಿ . ಕೇಸರಿ ನೆಕ್ಕುವ ನೀಚನೆ.
ಈ ಸ್ವಾಮೀಜಿಯ ಭಾಷೆಯೇ ವಿಚಿತ್ರವಾಗಿದೆಯಲ್ಲ , ಬಸವ ಅಸ್ಮಿತೆಯನ್ನು ತಾಲಿಬಾನ್ ಎಂದು ಕರೆಯುತ್ತಾನೆಂದರೆ ಇದು ಉಧ್ದಟತನ,
ಇದು ಗೂಂಡಾಗಿರಿ ಅಲ್ಲದೆ ಯಾವ ಸಂಸ್ಕಾರವೂ ಇಲ್ಲ ಇವರಿಗೆ ,ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುತ್ತಿದ್ದಾನೆ , ಬಸವ ತತ್ವದ ಪರ ಇರುವವರಿಗೆ ತಾಲಿಬಾನ್ ಎಂದಿರುವುದು ಅಕ್ಷಮ್ಯ , ಮೊದಲು ಕಾಡಸಿಧ್ದೇಶ್ವರ ಶರಣರ ವಚನ ಓದಿಕೊಂಡು ಕಾಡಸಿದ್ದೇಶ್ವರ ಶರಣರ ಕುರಿತು ಮಾತನಾಡಲಿ ಈ ಸ್ವಾಮಿ , ಆ ಶರಣರ ವಚನ ಓದಿಕೊಂಡಿದಾರೋ ಇಲ್ವೋ ಇವರು
Not fair .
ಕ್ಷೌರ ಮಾಡಿಕೊಂಡಿರುವ ಒಸಮಾ-ಬಿನ್-ಲಾಡೆನ್ ತರಹ ಕಾಣುವ ಕಾವಿಧಾರಿ ವ್ಯಕ್ತಿಯೊಬ್ಬ ಲಿಂಗಾಯತರನ್ನು ಬಸವ ತಾಲಿಬಾನಿಗಳು ಎಂದು ತಮ್ಮ ಹೀನ ಸಂಸ್ಕಾರವನ್ನು ಮೆರೆದಿದ್ದಾನೆ!
ಕಾನೆರಿ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಅಪ್ಪಟ ಬಸವ ತತ್ವದ ಅನುಯಾಯಿಗಳನ್ನು ಬಸವ ತಾಲಿಬಾನಿ ಗಳು ಎಂದು ಕರೆದು ಅವಮಾನ ಮಾಡಿದ್ದಾರೆ. ಇವರನ್ನು ಹೀಗೇ ಬಿಟ್ಟರೆ ಮುಂದೆ ಬಸವ ತತ್ವಗಳ ಅನುಯಾಯಿಗಳು ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಪ್ರಾರಂಭದಲ್ಲೇ ಅವರಿಗೆ ಸರಿಯಾದ ಪಾಠ ಕಲಿಸಿ ಮುಂದೆ ಹೀಗೆ ಮಾತನಾಡದಂತೆ ಮಾಡುವ ಅಗತ್ಯ ಇದೆ. ಅದಕ್ಕಾಗಿ ನಾಡಿನ ಸಮಸ್ತ ಬಸವ ಪರ ಸಂಘಟನೆಗಳು ದ್ವನಿ ಎತ್ತಿ ಈ ಮನುವಾದಿಗಳ ಸೇವಕನಾದ ಕನೇರಿ ಮಠದ ಸ್ವಾಮೀಜಿ ವಿರುದ್ದ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಡುವ ದಿಶೆಯಲ್ಲಿ ಮುಂದುವರೆಯಬಹುದೇ?
ಈ ಮನುವಾದಿ ಮನಸ್ಸಿನ ಕಾವಿದಾರಿಯನ್ನು ಈನಾಡಿನಿಂದ ಗಡಿಪಾರು ಮಾಡಬೇಕು ಗುರು ಬಸವ ದ್ರೋಹಿ
ಸಾಮರಸ್ಯ ಹಾಳುಗೇಡುವ ಇಂತಹ ಲೂಸ್ ಟಂಗ್ ಸ್ವಾಮಿಗೆ ಒಂದು ಗತಿ ಕಾಣಿಸಲೇಬೇಕು.
ಬಸವ ಪರಂಪರೆಯ ಸ್ವಾಮಿಗಳು ಇವರಿಗೆ ಬುದ್ದಿ ಕಲಿಸಬೇಕು. ಸಾಮಾಜಿಕ ಜಾಲತಾಣದಲ್ಲೂ ಇವರ ಕುಕ್ರತ್ಯದ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು. ಯಾವ ಬಸವ ಪರಂಪರೆಯ ಸ್ವಾಮಿಗಳು ಮಾತನಾಡದಿರುವದು ಇಂತಹ ಕುಹಕಿಗಳಿಗೆ ಹಾಸಿಕೊಟ್ಟಂತಾಗಿದೆ.
ಬಸವ ಪರಂಪರೆಯ ಸ್ವಾಮಿಗಳು ಇವರಿಗೆ ಬುದ್ದಿ ಕಲಿಸಬೇಕು. ಸಾಮಾಜಿಕ ಜಾಲತಾಣದಲ್ಲೂ ಇವರ ಕುಕ್ರತ್ಯದ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು. ಯಾವ ಬಸವ ಪರಂಪರೆಯ ಸ್ವಾಮಿಗಳು ಮಾತನಾಡದಿರುವದು ಇಂತಹ ಕುಹಕಿಗಳಿಗೆ ಹಾಸಿಕೊಟ್ಟಂತಾಗಿದೆ.