ಕಲಬುರಗಿಯ ‘ವಚನ ಮಂಟಪ’ದ ಚಿತ್ರಗಳನ್ನು ಬಿಡುಗಡೆ ಮಾಡಿದ ಖರ್ಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಉದ್ದೇಶಿತ ಕಟ್ಟಡದ ವಾಸ್ತುಶಿಲ್ಪಿಗಳು ಮೂರು ವಿನ್ಯಾಸ ನೀಡಿದ್ದು ಇದರಲ್ಲಿ ನಿಮಗೆ ಯಾವುದು ಇಷ್ಟ ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

ಕಲಬುರಗಿ

ಕಲಬುರಗಿಯಲ್ಲಿ ಸರಕಾರ ನಿರ್ಮಾಣ ಮಾಡಲು ಯೋಚಿಸಿರುವ ‘ವಚನ ಮಂಟಪ’ದ
ಉದ್ದೇಶಿತ ಕಟ್ಟಡದ ಚಿತ್ರಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ.

ಉದ್ದೇಶಿತ ಕಟ್ಟಡದ ವಾಸ್ತುಶಿಲ್ಪಿಗಳು ಮೂರು ವಿನ್ಯಾಸ ನೀಡಿದ್ದು ಇದರಲ್ಲಿ ನಿಮಗೆ ಯಾವುದು ಇಷ್ಟ ಎಂದು ಖರ್ಗೆ ಕೇಳಿದ್ದಾರೆ.

87
‘ವಚನ ಮಂಟಪ’ ವಿನ್ಯಾಸ

ಕಲಬುರಗಿಯಲ್ಲಿ ನಿರ್ಮಾಣವಾಗುವ ‘ವಚನ ಮಂಟಪ’ ಕಟ್ಟಡದ ಮೂರು ವಿನ್ಯಾಸದಲ್ಲಿ ನಿಮ್ಮ ಆಯ್ಕೆ ಯಾವುದು?

ವಚನ ಮಂಟಪದ ಕಟ್ಟಡ ಗುರು ಬಸವಣ್ಣನವರ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಗತಿಪರ ಚಿಂತನೆಯ ಸಾರವನ್ನು ಪ್ರತಿಬಿಂಬಿಸಬೇಕು. ಸಮಾನತೆ, ಒಳಗೊಳ್ಳುವಿಕೆ ಮತ್ತು ನೈತಿಕ ಸಮಗ್ರತೆ ಒತ್ತಿ ಹೇಳುವ ಶರಣರ ವಚನಗಳ ಆದರ್ಶಗಳನ್ನು ಅಧ್ಯಯನ ಮಾಡಲು, ಪ್ರತಿಬಿಂಬಿಸಲು ಮತ್ತು ಪ್ರಚಾರ ಮಾಡಲು ವಿದ್ವಾಂಸರು, ಚಿಂತಕರು ಮತ್ತು ಅನುಯಾಯಿಗಳು ಒಟ್ಟಾಗಿ ಸೇರುವ ಕೇಂದ್ರವಾಗಬೇಕು, ಎಂದು ಖರ್ಗೆ ಹೇಳಿದ್ದಾರೆ.

ವಿನ್ಯಾಸ 1

ಸಾಮಾಜಿಕ ಜಾಲತಾಣ ‍‘ಎಕ್ಸ್‌’ನ ತಮ್ಮ ಖಾತೆಯಲ್ಲಿ ಇದರ ಬಗ್ಗೆ ಹೇಳಿಕೆ ನೀಡಿರುವ ಖರ್ಗೆ ವಚನ ಮಂಟಪ ಕರ್ನಾಟಕದ ಶ್ರೀಮಂತ ಆಧ್ಯಾತ್ಮಿಕ ಮತ್ತು ತಾತ್ವಿಕ ಪರಂಪರೆಯ ಸಂಕೇತವಾಗಿರಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿನ್ಯಾಸ 2

‘ಬುದ್ಧ, ಬಸವ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳು ಭಾರತದ ಸಾಮಾಜಿಕ- ರಾಜಕೀಯ ಚೌಕಟ್ಟಿನೊಂದಿಗೆ ಆಳವಾಗಿ ಹೆಣೆದುಕೊಂಡಿವೆ.

ಈ ಮಹಾನ್ ಚಿಂತಕರು ಪ್ರತಿಪಾದಿಸಿದ ಪ್ರಗತಿಪರ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ಬಯಸುವವರಿಗೆ ಈ ಕೇಂದ್ರ ಮಾರ್ಗದರ್ಶಕವಾಗಲಿದೆ. ಮುಂದಿನ ಪೀಳಿಗೆಗೆ ಬಸವ ತತ್ವದ ದಾರಿದೀಪವಾಗಿ ನಿಲ್ಲುವ ಹೆಗ್ಗುರುತಾಗಲಿದೆ’ ಎಂದು ಹೇಳಿದ್ದಾರೆ.

ವಿನ್ಯಾಸ 3
Share This Article
4 Comments
  • ಮುಡುಬಿ ಗುಂಡೇರಾವ ಸೇಡಂ ಸಂಶೋಧಕ ಸಾಹಿತಿಗಳು ಮೊ 9448449806 says:

    ಮೂರನೇಯದು ಉತ್ತಮ

  • ಈ ಚಿತ್ರದ ಮೊದಲ ಪೋಟೋ, ಸ್ವಲ್ಪ ಮೂರ್ಖ ಹೊಂದಾಣಿಕೆ ಮಾಡಿರಬೇಕು. ಮೊದಲು ನೋಡಿದಾಗ ಅದರಲ್ಲಿ 3 ನೇ ಚಿತ್ರ ಚೆಂದ ಅನಿಸುತ್ತದೆ. ಕೆಳಗಿನ ಪೊಟೋ ದಲ್ಲಿ ಸಂಖ್ಯೆ ಬೇರೆ ಬೇರೆ ಕೊಟ್ಟಿದ್ದಾನೆ.
    ಹೀಗಾಗಿ ಅಭಿಪ್ರಾಯ vote ಮಾಡುವಾಗ ತಪ್ಪು voting ಆಗಿದೆ.

  • ನಾನು 3 ನೇ ಕಟ್ಟಡ ವಿನ್ಯಾಸ ಆಯ್ಕೆ ಮಾಡುತ್ತೇನೆ.
    ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ.
    ಮುಂಭಾಗದಲ್ಲಿ ಮೆಟ್ಟಿಲುಗಳು ಎರಡು ಭಾಗಗಳ ಮಧ್ಯ ಗಾರ್ಡನ್ ಇದ್ದು ಹೋಗಿಬರಲು ಬಳಕೆಸ್ನೇಹಿಯಾಗಿದೆ.
    ದೂರದಿಂದ ವೀಕ್ಷಿಸುತ್ತಲೇ ಒಂದು‌ವಿಶೇಷ ಕೇಂದ್ರವೆಂಬ ಭಾವನೆ ಬರುವುದು.

Leave a Reply

Your email address will not be published. Required fields are marked *