ಬೆಳಗಾವಿಯಲ್ಲಿ ಹರ್ಡೇಕರ್ ಮಂಜಪ್ಪನವರ ಬದುಕಿನ ಮೇಲೆ ಉಪನ್ಯಾಸ

ಬೆಳಗಾವಿ

ಕರ್ನಾಟಕದ ಗಾಂಧಿ ಎಂದೇ ಹೆಸರು ಪಡೆದ ವಿಭೂತಿ ಪುರುಷ ಹರಡೇಕರ್ ಮಂಜಪ್ಪನವರು ಕರ್ನಾಟಕದಲ್ಲಿ ಬಸವ ಯುಗದ ವಚನ ಸಾಹಿತ್ಯ ಸಂಶೋಧನೆ ಮತ್ತು ಪ್ರಸಾರದಲ್ಲಿ ಧಾರವಾಡದ ಮುರುಘಾ ಮಠದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳ ಜೊತೆಗೂಡಿ ಕಾರ್ಯಗೈದರು. 1924 ರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷತೆ ವಹಿಸಿದ್ದ ಮಹಾತ್ಮ ಗಾಂಧೀಜಿಯವರಿಗೆ ವಿಶ್ವಗುರು ಬಸವಣ್ಣನವರ ಕ್ರಾಂತಿಕಾರಕ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದವರು ಹರ್ಡೇಕರ್ ಅವರು ಎಂದು ಪ್ರೊ. ಶ್ರೀಕಾಂತ ಶಾನವಾಡ ಹೇಳಿದರು.

ರವಿವಾರ ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಹರ್ಡೇಕರ್ ಮಂಜಪ್ಪನವರ ಬದುಕು ಮತ್ತು ಬರಹ ಕುರಿತು ಅವರು ಮಾತನಾಡಿದರು.

ಈಗಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯವರಾದ ಮಂಜಪ್ಪನವರ ತಾಯಿ ಮಂಜಮ್ಮ. ತಂದೆಯ ಕುರಿತಾದ ಮಾಹಿತಿ ಇಲ್ಲ ಎನ್ನುವದು ಹಲವಾರು ಗ್ರಂಥಗಳಲ್ಲಿ ಉಲ್ಲೇಖಿತವಾಗಿದ್ದರೂ, ಇತ್ತೀಚಿನ ಬಸವಪಥ ಪ್ರಕಟಿತ ಲೇಖನದಲ್ಲಿ ಸಂಶೋಧಕರಾದ ಡಾ. ವೀರಣ್ಣ ದಂಡೆಯವರು ಅವರ ಕುಟುಂಬದ ಮೂಲದ ಕುರಿತು ಪೂರಕ ಮಾಹಿತಿ ಒದಗಿಸಿದ್ದಾರೆ.

ಸತ್ಯಾಗ್ರಹ, ದನುರ್ದಾರಿ, ಕ್ರಾಂತಿಕಾರಿ ಬಸವಣ್ಣ ಹೀಗೆ ಹಲವಾರು ಪತ್ರಿಕೆ ಮತ್ತು ಗ್ರಂಥಗಳ ಮೂಲಕ ಧರ್ಮ ಪ್ರಸಾರಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಅನುಪಮ ಸೇವೆಗೈದಿದ್ದಾರೆ. ಅಥಣಿ ಮುರುಘೇಂದ್ರ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದು, ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿಯವರ ಜೊತೆಗೂಡಿ ಅಪ್ಪ ಬಸವಣ್ಣನವರ ಜಯಂತಿಯನ್ನು ದಾವಣಗೆರೆಯಲ್ಲಿ ಆಚರಿಸಿದ್ದು ಒಂದು ಮೈಲುಗಲ್ಲು. ಅದು ಕರ್ನಾಟಕದಲ್ಲೇ ಮೊಟ್ಟಮೊದಲ ಜಯಂತಿ ಎನ್ನುವುದರೊಂದಿಗೆ ಹರ್ಡೇಕರ್ ಮಂಜಪ್ಪನ ಹೆಸರನ್ನು ಚಿರಸ್ಥಾಯಿಗೊಳಿಸಿದೆ ಎಂದು ಶಾನವಾಡ ಹೇಳಿದರು.

ಶರಣ ಶಂಕರ ಗುಡಾಸ ಮತ್ತು ಸದಾಶಿವ ದೇವರಮನಿ ಅವರು ತಮ್ಮ ಅನುಭವ ಹೇಳಿದರು ಮತ್ತು ಉಪನ್ಯಾಸ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಬಾಳಪ್ಪ ಕಾಡನ್ನವರ ಕುಟುಂಬದವರಿಂದ ಪ್ರಸಾದ ಸೇವೆ ನೆರವೇರಿತು. ಸಂಗಮೇಶ ಅರಳಿ ಅವರು ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ ನೆರವೇರಿಸಿದರು. ಜಾಹ್ನವಿ ಘೋರ್ಪಡೆ, ಸುವರ್ಣಾ ಗುಡಸ, ಮಹಾದೇವಿ ಅರಳಿ, ವಿ.ಕೆ. ಪಾಟೀಲ, ಬಿ.ಪಿ. ಜೇವಣಿ, ಕುಮಾರಿ ಪಲ್ಲವಿ ಮತ್ತು ಅಶ್ವಿನಿ ಇವರೆಲ್ಲ ವಚನ ಪ್ರಾರ್ಥನೆ ಮಾಡಿದರು. ಸಂಘಟನೆ ವೇದಿಕೆಯ ಮೂಲಕ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ಸಾಮೂಹಿಕ ವಚನ ಪ್ರಾರ್ಥನೆ ನೆರವೇರಿತು. ಮಹಾದೇವಿ ತಿಗಡಿ, ಸುನೀಲ ಸಾಣೇಕೊಪ್ಪ , ಭಾಗ್ಯ ದೆಯನ್ನವರ, ಬಸವರಾಜ ಬಿಜ್ಜರಗಿ, ಕಮಲಾ ಗಣಾಚಾರಿ, ಅಶೋಕ ಇಟಗಿ, ಬಸವರಾಜ ಕರಡಿಮಠ, ಬಸನಗೌಡ ಪಾಟೀಲ, ಶಿವಾನಂದ ಲಾಳಸಂಗಿ, ಲಿಂಗಾಯತ ಸಂಘಟನೆಯ ಸದಸ್ಯರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *