ಬಸವ ತಾಲಿಬಾನ್: ಇಂದು ಬಸವ ರೇಡಿಯೋನ ಮೊದಲನೇ ಚರ್ಚೆ

ಬಸವ ಮೀಡಿಯಾ
ಬಸವ ಮೀಡಿಯಾ

ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಡಾ ರಾಜಶೇಖರ ನಾರನಾಳ ಇಂದು ರಾತ್ರಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು

ಬಸವ ಅನುಯಾಯಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದು ದೊಡ್ಡ ವಿವಾದ ಸೃಷ್ಟಿಸಿರುವ ಕನ್ನೇರಿ ಶ್ರೀಗಳ ನಡೆ ನುಡಿಯ ಮೇಲೆ ರಾತ್ರಿ ಎಂಟು ಗಂಟೆಗೆ ಬಸವ ರೇಡಿಯೋ ಆನ್ಲೈನ್ ಚರ್ಚೆ ಆಯೋಜಿಸಿದೆ.

ಚರ್ಚೆಯಲ್ಲಿ ಪಾಲ್ಗೊಳ್ಳುವವರು ಮೂರು ವಿಷಯಗಳನ್ನು ಮೇಲೆ ವಿಶೇಷವಾಗಿ ವಿಶ್ಲೇಷಿಸುತ್ತಾರೆ.

1) ಬಸವ ತತ್ವದ ಕಾಡ ಸಿದ್ದೇಶ್ವರ ಮಠದ ಪರಂಪರೆ
2) ಇದಕ್ಕೆ ಅಪವಾದವಾಗಿರುವ ಕನ್ನೇರಿ ಶ್ರೀ
3) ಇದಕ್ಕೆ ಬಸವ ಅನುಯಾಯಿಗಳು ಹೇಗೆ ಪ್ರತಿಕ್ರಿಯೆ ನೀಡಬೇಕು

ಮಠಗಳು ಭಕ್ತರ ಭಾಗವಹಿಸುವಿಕೆ ಮತ್ತು ದಾಸೋಹದಿಂದ ನಡೆಯುವ ಸಂಸ್ಥೆಗಳಾಗಿರುವುದರಿಂದ, ಮಠಾಧೀಶರಿಗೆ ಮಠದ ಕಾರ್ಯಕ್ರಮಗಳು ಮತ್ತು ಸೈದ್ಧಾಂತಿಕ ಚೌಕಟ್ಟನ್ನು ಮೀರುವ ಸ್ವಾತಂತ್ರ ಇಲ್ಲ ಅನ್ನುವುದನ್ನು ಮನದಟ್ಟಾಗುವಂತೆ ಚರ್ಚೆ ಮಾಡಬೇಕು,” ಎಂದು ಬಸವ ರೇಡಿಯೋದ ಸಂಪಾದಕ ಎಚ್ ಎಂ ಸೋಮಶೇಖರಪ್ಪ ಹೇಳಿದರು.

ಇಂದಿನ ಕಾರ್ಯಕ್ರಮದ ವಿವರ

ದಿನಾಂಕ: 25-02-2025
ಸಮಯ: ರಾತ್ರಿ 8:00 ಗಂಟೆ

ಚರ್ಚೆಯಲ್ಲಿ ಪಾಲ್ಗೊಳ್ಳುವವರು

1) ಪೂಜ್ಯ ಚನ್ನಬಸವಾನಂದ ಸ್ವಾಮೀಜಿ,
ಬಸವ ಗಂಗೋತ್ರಿ, ಬೆಂಗಳೂರು

2) ಡಾ ರಾಜಶೇಖರ ನಾರನಾಳ
ಶರಣ ತತ್ವ ಚಿಂತಕ

ಪ್ರಾಸ್ತಾವಿಕ, ಸಮಾರೋಪ ನುಡಿ,
ಹೆಚ್ ಎಂ ಸೋಮಶೇಖರಪ್ಪ

ಕಾರ್ಯಕ್ರಮ ನಿರ್ವಹಣೆ:
ಕುಮಾರಣ್ಣ ಪಾಟೀಲ್

ದಯವಿಟ್ಟು ಗಮನಿಸಿ:

1) ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಮತ್ತು ಡಾ ರಾಜಶೇಖರ ನಾರನಾಳ 20 ನಿಮಿಷ ಮಾತನಾಡಲಿದ್ದಾರೆ. (ಒಟ್ಟು ಅವಧಿ – 40 ನಿಮಿಷ)

2) ನಂತರ 15 ನಿಮಿಷ ಮುಕ್ತ ವೇದಿಕೆ (ಆಸಕ್ತರಿಗೆ ಮಾತನಾಡಲು ಅವಕಾಶ)

3) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.

4) ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/uhe-ejax-usq

Share This Article
1 Comment

Leave a Reply

Your email address will not be published. Required fields are marked *