ಗಂಗೆ ಪವಿತ್ರವಾದರೆ, ನಮ್ಮೂರಿನ ಕೆರೆಯ ನೀರೂ ಪವಿತ್ರವಲ್ಲವೇ?

ಕುಂಭಮೆಳದಲ್ಲಿ ಮುಳುಗಿ ಬಂದಿರುವ ಲಿಂಗಾಯತ ಸ್ವಾಮಿಗಳಿಗೆ ಬಸವಣ್ಣನವರೂ ಗೊತ್ತಿಲ್ಲ, ೨೧ನೆಯ ಶತಮಾನದ ವಿಜ್ಞಾನವೂ ಗೊತ್ತಿಲ್ಲ.

ಬೆಂಗಳೂರು

ಬೆಂಗಳೂರಿನ ಮೆಜೆಸ್ಟ್ಟಿಕ್ ರಸ್ತೆ ಬದಿಗಳಲ್ಲಿ “ಪವಿತ್ರ ಗಂಗಾ ಜಲದ ವಿತರಣೆ” ಎಂಬ ಭಿತ್ತಿ ಚಿತ್ರಗಳು ರಾರಾಜಿಸುತ್ತಿವೆ. ಗಂಗಾ ನದಿ ನೀರು ಪವಿತ್ರ ಎಂದು ಯಾರು ಹೇಳಿದ್ದು? ವಚನಕಾರರು ಇನ್ನಿಲ್ಲದಂತೆ ಇಂತಹ ಮೌಢ್ಯವನ್ನು ಟೀಕಿಸಿದ್ದಾರೆ, ನಿರಾಕರಿಸಿದ್ದಾರೆ, ತಿರಸ್ಕರಿಸಿದ್ದಾರೆ.

ಇಂತಹ ಭಿತ್ರಿ ಚಿತ್ರ ಹಾಕಿರುವ ವ್ತಕ್ತಿಯು ಯಾವ ಶತಮಾನದಲ್ಲಿ ಬದುಕುತ್ತಿದ್ದಾನೆ ಎಂಬ ಅನುಮಾನ ನನಗೆ.

ಬಸವಣ್ಣನವರು ಅತ್ಯಂತ ವ್ಯಂಗ್ಯವಾಗಿ ಒಂದು ವಚನದಲ್ಲಿ “ಜಲನೊಂದೆ ಶೌಚಾಚಮನಕ್ಕೆ” ಎನ್ನುತ್ತಾರೆ. ಶೌಚವಿರಲಿ ಅಶೌಚವಿರಲಿ ಬಳಸುವುದು ನೀರನ್ನು ತಾನೇ? ಇದರಲ್ಲಿ ಪವಿತ್ರವಾದದು – ಅಪವಿತ್ರವಾದುದು ಎಂಬುದು ಎಲ್ಲಿದೆ? ಇದ್ದರೆ ಶುದ್ಧ – ಅಶುದ್ಧ ಇರುತ್ತದೆ.

ಮತ್ತೊಂದು ವಚನದಲ್ಲಿ ಬಸವಣ್ಣ

“ನೀರ ಕಂಡಲ್ಲಿ ಮುಳುಗುವರಯ್ಯಾ ಮರನ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ, ಒಣಗುವ ಮರನ ನಂಬಿದವರು ನೆಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ”

ಸಿದ್ಧರಾಮಣ್ಣನವರು “ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ ಗಂಗೆಯ ಮುಳಿಗಿದಡೇನಾಗುವುದಯ್ಯಾ? ಎನ್ನುತ್ತಾರೆ.

ಇಂದಿನ ೨೧ನೆಯ ಶತಮಾನದಲ್ಲಿ ಈ ಜನರಿಗೆ ಏನಾಗಿದೆ? ಹಿಂದೆ ಇದೇ ರೀತಿಯಲ್ಲಿ ಗಂಗಾ ಜಲವನ್ನು ಶಿವರಾತ್ರ‍್ರಿಯಂದು ಹಂಚುತಿದ್ದ ರಾಜಕಾರಣಿಯು ಜೈಲು ಸೇರಿದ್ದು ಇಂದು ರಹಸ್ಯವಾಗೇನು ಉಳಿದಿಲ್ಲ.

ಇಷ್ಟಿದ್ದೂ ಬಸವಣ್ಣನ ಹೆಸರೇಳಿಕೊಂಡು ಬದುಕುತ್ತಿರುವ ಅನೇಕ ಲಿಂಗಾಯತ ಸ್ವಾಮಿಗಳು ಪ್ರಯಾಗ್ ರಾಜ್‌ನಲ್ಲಿ ಕುಂಭಮೆಳದಲ್ಲಿ ಗಂಗೆಯಲ್ಲಿ ಮುಳುಗಿ ಬಂದಿದ್ದಾರೆ. ಈ ಸ್ವಾಮಿಗಳಿಗೆ ಬಸವಣ್ಣನವರು ಗೊತ್ತಿಲ್ಲ, ೨೧ನೆಯ ಶತಮಾನದ ವಿಜ್ಞಾನವೂ ಗೊತ್ತಿಲ್ಲ. ಇಂತಹ ಜನರನ್ನಿಟ್ಟುಕೊಂಡು ಕಾಯಕಕ್ಕೆ ತಿಲಾಂಜಲಿಯಿಟ್ಟು ಆರ್ಥಿಕತೆಯನ್ನು ಕಟ್ಟಲು ಸಾಧ್ಯವೇ?

ಕುಂಭಮೇಳದಲ್ಲಿ ಮುಳುಗೇಳುವ ಜನರನ್ನಿಟ್ಟುಕೊಂಡು ಅದಾವ “ವಿಕಸಿತ ಭಾರತ”ವನ್ನು ಕಟ್ಟಲು ಸಾಧ್ಯ? ವಿಕಸಿತ ಭಾರತ, ಅಮೃತಕಾಲ, ೨೦೪೭, ವಾರಕ್ಕೆ ೯೦ ಗಂಟೆ ಕೆಲಸ ಮಾಡುಬೇಕು ಮುಂತಾದವು ಕೇವಲ ಬ್ರಾಹ್ಮಣ್ಯದ ಭ್ರಮೆಗಳು. ವಾರಕ್ಕೆ ೭೦ ಗಂಟೆ – ವಾರಕ್ಕೆ ೯೦ ಗಂಟೆ ಕೆಲಸ ಮಾಡಬೇಕು ಎನ್ನುವ ಈ ಬ್ರಾಹ್ಮಣ್ಯದ ತುಂಡುಗಳು ಕೋಟ್ಯಂತರ ಮಾನವ ದಿನಗಳನ್ನು ನಾಶ ಮಾಡುತ್ತಿರುವವರ ಕುಂಭಮೇಳದ ಬಗ್ಗೆ ಯಾಕೆ ಚಕಾರವೆತ್ತುವುದಿಲ್ಲ? ಒಟ್ಟಾರೆ ದೇಶವನ್ನು ಮೌಡ್ಯದಲ್ಲಿ ಮುಳುಗಿಸಿದ್ಧಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/IxxC2m7AXyW84KPf73t5iL


Share This Article
3 Comments
  • ಕುಂಭಮೇಳಕ್ಕೆ ಹೋದವರಿಗಿಂತ ಹೋಗದೆ ತಮ್ಮ ತಮ್ಮ ಊರಿನಲ್ಲಿ ಇದ್ದವರಿಗೆ ತುಂಬಾ ಸಮಾಧಾನವಾಗಿದೆ ಏಕೆಂದರೆ ನಾವು ಪಾಪನೇ ಮಾಡಿಲ್ಲ ನಾವು ಹೋಗಬೇಕಾದ ಅವಶ್ಯಕತೆಯೂ ಇಲ್ಲ ಅಲ್ಲಿಗೆ ಹೋದವರೆಲ್ಲ ಪಾಪ ಮಾಡಿದವರು….

    • ಪ್ರಯಾಗದಲ್ಲಿ ಮಿಂದೆದ್ದು ಬಂದ ಲಿಂಗಾಯತ ಖಾವಿಧಾರಿಗಳ ಕಂಡರೆ ಥೂ… ಛೀ.. ಎಂಬ ಅಭಿಯಾನ ಆರಂಭಿಸಬೇಕು!

  • ಶರಣ ವಿಜಯಕುಮಾರ,,ಸರಿಯಾದ ಮಾತು,,ಪಾಪ ಮಾಡಿದ ಪಾಪ ಪ್ರಜ್ಞೆ ಇರುವವರು ತಮ್ಮೂರಿನ ಶುದ್ಧ ನೀರನ್ನು ಮಲೀನಗೊಳಿಸಬಾರದೆನ್ನುವ ಕಳಕಳಿಯಿಂದ, ಆಗಲೇ ಹಲವರ ಪಾಪದಿಂದ ಕಲುಷಿತವಾಗಿದ್ದ ಕುಂಭಮೇಳ ತ್ರಿವೇಣಿ ಸಂಗಮದ ನೀರಿನಲ್ಲಿ ತಮ್ಮ ಪಾಪ ತೊಳ್ಕೊಂಡು ಬಂದವರ್ರೆ,, ಹೊಸಾ ಪಾಪ ಮಾಡಲು ರಿನೀವಲ್ ಸರ್ಟಿಫಿಕೇಟ್ ತಂದವರೆ

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು