ಬಸವಕಲ್ಯಾಣ
ಸೆಪ್ಟೆಂಬರ್ ೨೨ರಿಂದ ಅಕ್ಟೋಬರ್ ೨ರವರೆಗೆ ನಗರದಲ್ಲಿ ನಡೆಯಲಿರುವ ಶರನ್ನವರಾತ್ರಿ ದಸರಾ ದರ್ಬಾರ್ ಆಯೋಜಿಸಲು ಸಂಭಾವ್ಯ ಸ್ಥಳಗಳನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀಗಳು ವೀಕ್ಷಿಸಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ಶರಣು ಸಲಗರ ಅವರ ಜೊತೆ ಬಿಕೆಡಿಬಿ ಯಾತ್ರಿ ನಿವಾಸ, ಸಭಾ ಭವನ, ಕಲ್ಯಾಣ ಮಂಟಪ ಮತ್ತು ಅಕ್ಕಮಹಾದೇವಿ ಕಾಲೇಜು ಮೈದಾನ ವೀಕ್ಷಿಸಿದರು.
ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ, ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ಶರಣು ಸಲಗರ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಪ್ರಮುಖರಾದ ಸುನೀಲ ಪಾಟೀಲ, ಸೋಮಶೇಖರ ವಸ್ತçದ, ಎ.ಜಿ. ಪಾಟೀಲ, ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ನಂದಿ, ಗುರುಲಿಂಗಯ್ಯ ಕಟಗಿಮಠ, ಚಂದ್ರಶೇಖರ ಪಾಟೀಲ, ಸುರೇಶ ಸ್ವಾಮಿ, ವೀರಣ್ಣ ಶೀಲವಂತ, ಪ್ರೊ.ದಯಾನಂದ ಶೀಲವಂತ, ರೇವಣಸಿದ್ಧಯ್ಯ ಮಠಪತಿ, ಪ್ರೊ.ಸೂರ್ಯಕಾಂತ ಶೀಲವಂತ, ಡಾ.ಬಸವರಾಜ ಸ್ವಾಮಿ, ರಾಕೇಶ ಪುರವಂತ, ರಮೇಶ ರಾಜೋಳೆ, ಬಸಲಿಂಗಯ್ಯ ಶಂಕರಗುಡಿ, ಡಾ.ರಾಚಯ್ಯ ಮಠಪತಿ, ಪ್ರೊ.ರುದ್ರೇಶ್ವರ ಗೋರ್ಟಾ, ಕಲ್ಪನಾ ಶೀಲವಂತ, ಅಂಜನಾ ಮೂಲಗೆ, ಸರೋಜನಿ ಹಿರೇಮಠ, ಶ್ರೀದೇವಿ ಚಿರಡೆ, ಸಿದ್ದಮ್ಮ ರಾಜೋಳೆ ಇದ್ದರು.
ಕಳೆದ ವಾರ ದಸರಾ ದರ್ಬಾರಿನ ಪೂರ್ವಭಾವಿ ಸಭೆ ಸಚಿವ ಈಶ್ವರ ಖಂಡ್ರೆ ಅವರ ಭಾಲ್ಕಿ ಪಟ್ಟಣದ ನಿವಾಸದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಿತು.
ಸಭೆಯಲ್ಲಿ ಖಂಡ್ರೆ ಅವರನ್ನು ದಸರಾ ದರ್ಬಾರ್ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.