“ನೀಚ ಐಎಎಸ್ ಅಧಿಕಾರಿ”, “ಕುಡುಕ ರಾಜಕಾರಣಿ”, “ಕುರಾನ್ ಸ್ವಾಮೀಜಿ”: ಕನ್ನೇರಿ ಸ್ವಾಮಿ ಮಾತು 2

ಬಸವ ಮೀಡಿಯಾ
ಬಸವ ಮೀಡಿಯಾ

ಕುಡುಕರು ತಿನುಕರು ಸಿದ್ದೇಶ್ವರ ಅಪ್ಪರ ಶಿಷ್ಯರು ಅಂದ್ರೆ ನಡೀತದ

ರಬಕವಿ-ಬನಹಟ್ಟಿ

ಕಳೆದ ಶುಕ್ರವಾರ ಬನಹಟ್ಟಿಯಲ್ಲಿ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಕನ್ನೇರಿ ಸ್ವಾಮಿ ಒಂದು ಗಂಟೆ ಮಾತನಾಡಿದರು.

ಎಲ್ಲಾ ಲಿಂಗಾಯತರು ತಾವು ಹಿಂದೂಗಳು ಎಂದು ಒಪ್ಪಿಕೊಳ್ಳುವವರೆಗೂ ತಮ್ಮ ಬೈಗುಳ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿ, ಲಿಂಗಾಯತ ಧರ್ಮದ ಪ್ರಮುಖರ ಮೇಲೆ ಏಕ ವಚನದಲ್ಲಿಯೇ ನಾಲಿಗೆ ಹರಿಬಿಟ್ಟರು.

“ಇವರ ಹೆಸರು ಹೇಳುವುದಿಲ್ಲ, ಯಾಕಂದರೆ ನಾನು ಹೆಸರು ಹೇಳಿದರೆ ಅವರು ದೊಡ್ಡವರಾಗುತ್ತಾರೆ,” ಎಂದು ಪೀಠಿಕೆಯೂ ಹಾಕಿದರು.

ನೀಚ ಐಎಎಸ್ ಅಧಿಕಾರಿ

ಮೊದಲು ಕನ್ನೇರಿ ಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದು ಅವರು ಹೇಳಿದಂತೆ “ಒಬ್ಬ ನೀಚ ಮಾಜಿ ಐಎಎಸ್ ಅಧಿಕಾರಿ”ಯ ಮೇಲೆ.

“ಸಂಘಟಿತ ಲಿಂಗಾಯತ ಸಮಾಜವನ್ನು ಒಡೆಯಲು ಇವ ವೀರಶೈವ ಮತ್ತು ಲಿಂಗಾಯತರನ್ನು ಭಾಗ ಮಾಡಲು ಹೊರಟಿದ್ದಾನೆ. ಆ ಗೆಜೆಟ್, ಈ ಗೆಜೆಟ್ ಅಂತ ಹೇಳಿ ಜನರ ತಲೆ ಕೆಡಿಸುತ್ತಿದ್ದಾನೆ,” ಎಂದು ಹೇಳಿದರು.

ಕುಡುಕ, ತಿನುಕ ರಾಜಕಾರಣಿ

ನಂತರ ಕನ್ನೇರಿ ಸ್ವಾಮಿಯ ಸಿಟ್ಟು ತಿರುಗಿದ್ದು ಒಬ್ಬ ಪ್ರಮುಖ ರಾಜಕಾರಣಿಯ ಮೇಲೆ.

“ಕುಡುಕರು ತಿನುಕರು ಲಿಂಗಾಯತ ಧರ್ಮ ಕಟ್ಟೋದಿಕ್ಕೆ ಹೊರಟಿದ್ದಾರೆ,” ಎಂದು ಭಾಷಣದಲ್ಲಿ ಹೇಳಿದರು.

“ಕೆಲವರು ಮುಂಜಾನೆ ಕುಡಿದೇ ಎದ್ದು ನಿಲ್ಲಕ್ ಬರೋದಿಲ್ಲ, ರಾತ್ರಿ ಕುಡೀಲಾರ್ದೆ ಮಲಕೊಳ್ಳಾಕ್ ಬರೋದಿಲ್ಲ. ಇಂತ ರಾಜಕಾರಣಿಗಳು ಬಸವ ಧರ್ಮ ಕಟ್ಟಾಕ್ ಹೊರಟಿದ್ದಾರೆ., ಮತ್ ಮ್ಯಾಲೆ ಹೇಳ್ತಾರೆ ನಾವು ಸಿದ್ದೇಶ್ವರಪ್ಪ ಅವರ ಶಿಷ್ಯರು ಅಂತ. ಕುಡುಕರು ತಿನುಕರು ಸಿದ್ದೇಶ್ವರ ಅಪ್ಪರ ಶಿಷ್ಯರು ಅಂದ್ರೆ ನಡೀತದ,” ಎಂದು ಕನ್ನೇರಿ ಸ್ವಾಮಿ ಕೇಳಿದರು.

ಕಳೆದ ಚುನಾವಣೆಯ ಸಮಯದಲ್ಲಿ ಈ ಹಿರಿಯ ರಾಜಕಾರಣಿ ಊಟ ಮಾಡುತ್ತಿರುವ ಫೋಟೋ ತಿದ್ದಿ ಒಂದು ಪಕ್ಷದ ಐಟಿ ಸೆಲ್ ಹಂಚಿಕೊಂಡಿತ್ತು. ಅವರ ತಟ್ಟೆಯಲ್ಲಿ ಹಾಕಿದ್ದ ಮಾಂಸಾಹಾರ ಫೇಕ್ ಎಂದು ಮೂಲ ಫೋಟೋ ಸಿಕ್ಕ ಮೇಲೆ ಸಾಬೀತಾಗಿತ್ತು.

ಇದೇ ರಾಜಕಾರಣಿಯ ವಿಷಯಕ್ಕೆ ಕನ್ನೇರಿ ಸ್ವಾಮಿ ಮತ್ತೆ ಬಂದರು. ನಿಷೇದದ ನಂತರ ಕನ್ನೇರಿ ಸ್ವಾಮಿ ಕ್ಷಮಾಪಣೆ ಕೇಳಿದರೆ ತಾವೇ ವಿಜಯಪುರ ಜಿಲ್ಲೆಗೆ ಕರೆತರುವುದಾಗಿ ಈ ರಾಜಕಾರಣಿ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯೆಯಾಗಿ “ವಿಜಯಪುರ ಜಿಲ್ಲೆ ಮಾಲೀಕ ನೀನೆ ಏನಪ್ಪಾ,” ಎಂದು ಕನ್ನೇರಿ ಸ್ವಾಮಿ ಭಾಷಣದಲ್ಲಿ ಕೇಳಿದರು.

“ಈ ಮಾತ ಜನ ಎಲೆಕ್ಷನ್ ತನಕ ನೆನಪಿನಲ್ಲಿ ಇಟ್ಟುಕೊಂಡರೆ ನೀ ಹೊರಳಿ ಬರೋದಿಲ್ಲ. ಇಲ್ಲಾಂದ್ರೆ ಎಲೆಕ್ಷನ್ ಬಂದಾಗ ನಾನು ಹೋಗಿ ನೆನಪು ಮಾಡಿ ಬಂದ್ರೆ ನೀ ಉಳಿಯೋದಿಲ್ಲ,” ಎಂದು ಎಚ್ಚರಿಕೆ ನೀಡಿದರು.

ಕುರಾನ್ ಅನುವಾದಕ ಸ್ವಾಮೀಜಿ

ಕನ್ನೇರಿ ಸ್ವಾಮಿಯ ಕಾಕದೃಷ್ಟಿ ಪ್ರಮುಖ ಲಿಂಗಾಯತ ಸ್ವಾಮೀಜಿಯವರೊಬ್ಬರ ಮೇಲೆ ತಿರುಗಿತು.

“ಈಗ ಗದಗದ ತೋಂಟದಾರ್ಯ ಮಠದ ಪೀಠದಲ್ಲಿರುವ ಸ್ವಾಮೀಜಿ ಮುಂಚೆ ಬೆಳಗಾವಿಯ ನಾಗನೂರು ಮಠದಲ್ಲಿದ್ದಾಗ ಮರಾಠಿ ಭಾಷೆಯಿಂದ ಕುರಾನ್ ಗ್ರಂಥವನ್ನು ಅನುವಾದ ಮಾಡಿ ತಮ್ಮ ಮಠದ ವತಿಯಿಂದಲೇ ಪ್ರಕಟಿಸಿದ್ದರು,” ಎಂದು ಕನ್ನೇರಿ ಸ್ವಾಮಿ ಹೇಳಿದರು.

ಬನಹಟ್ಟಿ ಭಾಷಣದಲ್ಲಿ ಕನ್ನೇರಿ ಸ್ವಾಮಿ ಕಂಬಿ ಇಲ್ಲದ ಬಿಟ್ಟ ಹಲವಾರು ರೈಲುಗಳಲ್ಲಿ ಇದೂ ಒಂದು.

ನಾಗನೂರು ಸ್ವಾಮೀಜಿ ಅನುವಾದ ಮಾಡಿದ್ದು ಕುರಾನ್ ಅಲ್ಲ ಸಂತ ವಿನೋಬಾ ಭಾವೆ ಅವರ ಕೃತಿಗಳನ್ನು. ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತೇವೆ.

ಕನ್ನೇರಿ ಸ್ವಾಮಿ ತಮ್ಮ ಭಾಷಣದಲ್ಲಿ ಲಿಂಗಾಯತ ಧರ್ಮದ ಹೋರಾಟದಲ್ಲಿರುವ ಅನೇಕರ ಮೇಲೆ ಇದೇ ದಾಟಿಯಲ್ಲಿ ಮಾತನಾಡಿದರು.

ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಒಬ್ಬ ಮುಸ್ಲಿಂ ಪ್ರಚಾರಕ ಮಸೀದಿಗೆ ಹೋಗಿ ಪ್ರಚಾರ ಮಾಡಲಿ, ಲಿಂಗ ಕಟ್ಟಿಕೊಳ್ಳಲಿ, ಎಂದು ಹೇಳಿದರು.

ಬಾಲ ಯೇಸು ಪ್ರಶಸ್ತಿ ಪಡೆದ ಒಬ್ಬ ಸ್ವಾಮೀಜಿ ಮತಾಂತರದ ಬಗ್ಗೆ ಯಾಕೆ ಮಾತನಾಡುವುದಿಲ್ಲ, ಎಂದು ಕೇಳಿದರು.

ಕನ್ನೇರಿ ಸ್ವಾಮಿ ಮುಂಚಿನ ಕುಚೇಷ್ಟೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಮತ್ತೊಬ್ಬರನ್ನು ನಾಯಿಗಳಿಗೂ ಹೋಲಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
16 Comments
  • ಶರಣ ಕ್ಷೇತ್ರಗಳನ್ನು ಉಳಿಸುವಲ್ಲಿ ಜಾಮದಾರ್ ಅವರ ಕೊಡುಗೆ ಸಂಘ ಪರಿವಾರ ಎಸೆಯುವ ತುಣುಕುಗಳಿಗಾಗಿ ಬಾಯಿ ಬಿಡುವ ಇಂತಹ ಮೂಷಂಡಿಗಳಿಗೇನು ಗೊತ್ತು.

    • ಅಬ್ಬಾ ಲಿಂಗಾಯತ ಸಮಾಜ ಇನ್ನು ಎಂಥತಾದ್ದವರನ್ನ ನೋಡಿ, ಕೇಳಿ ಅರಗಿಸ್ಕೋಬೇಕೋ ಕಾಣೆ. ಅಂತೂ ಲಿಂಗಾಯತರ ತಾಳ್ಮೆ, ಸಹನೆ, ಸಂಯಮಕ್ಲೊಂದು ದೊಡ್ಡ ಸಲಾಂ
      ಜೈ ಬಸವೇಶ

  • ಈಶ್ವರಪ್ಪ, ಕನ್ನೇರಿ, ಯತ್ನಾಳ ಒಳ್ಳೆ ತಂಡ ರೆಡಿ ಮಾಡಿದ್ದಾರೆ. ಒಂದಕ್ಕಿಂತ ಒಂದು ಮೇಧಾವಿಗಳು

    • ಹೌದು ಶರಣರೇ ಸನಾತನಿಗಳು ಈ ಮುಟ್ಟಾಳರನ್ನು ಬಿಟ್ಟು ಲಿಂಗಾಯತರನ್ನು ಬೆದರಿಸಲು ನೋಡುತ್ತಿದ್ದಾರೆ.

  • ಬಸವಣ್ಣನವರು ಶತ ಶತಮಾನಗಳಿಂದ ಬ್ರಾಹ್ಮಣರ ಜಾತಿ ಪದ್ದತಿಯ ಕರಾಳ ಕೆಸರಿನಲ್ಲಿ ದಬ್ಬಿಸಿಕೊಂಡು ನರಳಾಡುತ್ತಿದ್ದ ಎಲ್ಲ ಸಮೂದಾಯದ ಜನರನ್ನು ಮುಕ್ತಗೊಳಿಸಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಕನೇರಿ ಸ್ವಾಮಿ ವೈದಿಕರ ಚೇಲಾ ಆ ಕರಾಳ ಜಾತಿ ಪದ್ಧತಿಯ ಹಾಳು ಬಾವಿಗೆ ಮತ್ತೊಮ್ಮೆ ನಮ್ಮ ಸಮಾಜವನ್ನೇ ತಳ್ಳಲು, RSS ಪ್ರಾಯೋಜಿತ, ಬಸವಾದಿ ಶರಣರನ್ನು ಮುಂದೆ ಮಾಡುತ್ತಾ, ಕುತಂತ್ರ ಹುನ್ನಾರ ಸಂಚಕಾರದ ಸಾಮಾವೇಶ ಮಾಡುತ್ತಿದ್ದಾನೆ ಎಂಬುದು ಸತ್ಯ. ಇದು RSS ನ ಪರದೆ ಹಿಂದೆ ಇರುವ ಸಂಚಕಾರ ಎಂಬುದನ್ನು ಮರೆಯಬಾರದು. ಮರೆತರೆ ರಾತ್ರಿ ಕಂಡ ಹಾಳು ಬಾವಿಗೆ, ಹಗಲು ಬಿದ್ದಂತೆ.
    ಈ ಕನೇರಿ ಆಕಾಶದ ಮಾವಿನ ಹಣ್ಣಿನ ಆಸೆಯಿಂದ ಬಸವಣ್ಣನ ತತ್ವಗಳನ್ನು ಮತ್ತು ಲಿಂಗಾಯತ ಸಮಾಜವನ್ನೇ ಬಲಿಕೊಡಲು ಮುಂದಾಗಿದ್ದಾನೆ, ಅಂದರೆ ಈತನಿಗೆ ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಿ CM ಆಗುವ ಆಸೆ ತೋರಿಸಿದ್ದಾರೆ, ಈಗಾಗಲೇ ಇಂಥ ಆಸೆಗೆ ಎಡೆಯೂರಪ್ಪ ಅವರ ವಿರುದ್ಧ ಎತ್ತಿ ಕಟ್ಟಿ ಬಲಿ ಪಶುವನ್ನಾಗಿ ಮಾಡಿ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಬಿಜೆಪಿ ಇಂದ ಹೊರ ದೂಡಿರುವದನ್ನು ನಾವೆಲ್ಲರೂ ಕಾಣುತ್ತಿರುವ ನಿಜ ಸಂಗತಿ. ಎಡೆಯೂರಪ್ಪ ಅವರನ್ನೇ ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹಿಂದಿರುವ ಸಂಚಕಾರ RSS ಪಟಾಲಂ ನ ಹೀನ ಕೃತ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
    ಕನೇರಿ ಸ್ವಾಮಿ ಕುತಂತ್ರ ಅರಿಯದ ಆತನ ಅಮಾಯಕ ಅನುಯಾಯಿಗಳು ಆತನ ಮೋಸದ ಬಲೆಗೆ ಬಿದ್ದಿರುವುದು ವಿಷಾದನೀಯ. ಅಟ್ಟ ಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬಂತು, ಅನ್ನುವಷ್ಟರಲ್ಲಿ ಎದ್ದೇಳಲು ಅಸಾಧ್ಯವಾದ ಖೆಡ್ಡಾಕ್ಕೆ ಬಿದ್ದು ಬಿಟ್ಟಿರುತ್ತಾರೆ,
    ಆ ಸ್ವಾಮಿಯ ಹಿಂಬಾಲಕರು ಬಹು ಎಚ್ಚರಿಕೆಯಿಂದ ಹೆಜ್ಜೆ ಹಾಕಿ, ಇಲ್ಲ ಅಂದ್ರೆ ಎಡವಟ್ಟು ಗ್ಯಾರೆಂಟಿ.

  • ಇವರ ಹತಾಶೆ ನೋಡಿ ಎನಗೆ ನಗು ಬರುತ್ತಿದೆ.

  • ಸನಾತನಿಗಳೇ ನಿಮಗಿದು ತಿಳಿದಿರಲಿ ನೀವು ಏನೇ ಮಾಡಿದರೂ ಕೊಡ ಬಸವಣ್ಣನವರನ್ನ ಮತ್ತು ಶರಣರ ವಿಚಾರಗಳನ್ನು ಮಟ್ಟ ಹಾಕಲು ಸಾಧ್ಯವಿಲ್ಲ ನಿಮ್ಮ ಎದೆಯಲ್ಲಿ ಬಸವಣ್ಣ ಎಂಬ ನಾಲ್ಕು ಅಕ್ಷರ ನಿದ್ದೆಗೆಡಿಸಿದೆ ಅನಿಸುತ್ತದೆ

  • Ondu ಮಾನ್ಯತೆಪಡೆದ ಧರ್ಮ ವಾಗಬೇಕಾದರೆ, ಅದಕ್ಕೆ: ೧) ಒಂದು ಲಾಂಛನ ವಿರಬೇಕು, ಅವರ ಭಗವಾ, ಶಿಖೆ, ನಾಮ ಇವು ಉಪಸಕ ವಸ್ತುಗಳಲ್ಲ. ೨) ಒಂದು ಸರಳವಾದ ಭಾಷೆ ಇರಬೇಕು. ೩) ಒಬ್ಬ ಗುರು ವಿರಬೇಕು founder. ೪) ಒಂದು ದೇವರ ಅಥವಾ ಮೂರ್ತಿ, ಏಕದೇವೋಪಾಸನೆ ಇರಬೇಕು. ೫) ಸದಾಚಾರದ ನೀತಿ ಸಂಹಿತೆ ಮುಂದುವರೆಸಲು, ಪಾಲಿಸಲು ಸರಳವಾದ, ಮೂಢ ನಂಬಿಕೆ ರಹಿತ, ತತ್ವ ಚಿoತನೆಗಳಿರಬೇಕು. ಸ್ಪಷ್ಟ ಮಾನವೀಯ ಮೌಲ್ಯಗಳಿರಬೇಕು. ಕಂದಾಚಾರ ರಹಿತ ಆಚರಣೆಗಳಿರಬೇಕು. ಇವೆಲ್ಲ ಲಕ್ಷಣಗಳು ಅವರು ಹೇಳುವ ಹಿಂದೂ ಧರ್ಮದಲ್ಲಿ ಇರುವಂತೆ ಕಾಣುವದಿಲ್ಲ. What are the essential features/characteristics of valid dharma?? ಅದಕ್ಕೆ Hindu is not a religion, it is the way of life as per supreme court. ಈ ವಾಕ್ಯ ಸತ್ಯವೆನಿಸುತ್ತದೆ. ಆದರೆ ಲಿಂಗಾಯತರಲ್ಲಿ ಈ ಎಲ್ಲ ಲಕ್ಷಣಗಳಿವೆ. ಅದಕ್ಕೆ ಇದೊಂದು swatantra ಧರ್ಮ ವಾಗಿದೆ. ಅದು ೧೨ ನೇ ಶತಮಾನದ ಅಪ್ಪಬಸವಣ್ಣನವರ ಶಾಸ್ತ್ರಕ್ಕೆ ಸಮ್ಮತವಾದ ಧರ್ಮ ರಚಿಸಿ, ಆಚರಿಸಿ, ಅನುಭವಿಸಿ, ಶಿವಯೋಗದಿಂದ ಮನದ ಕೊನೆಯ ಮೊನೆಯ ಮೇಲೆ ಪ್ರಕಾಶ/ಬೆಳಕು ಕಂಡು ಯೈಕ್ಯ ಸ್ಥಳಕ್ಕೆ ಏರಿ ೧ ಲಕ್ಷ ತೊಂಬತ್ತಾರು ಸಾವಿರ ಜಗಂಮರನ್ನು, ೭೭೦ ಅಮರ ಗಣಂಗಳನ್ನು ಶಿವ ಪ್ರಕಾಶ್ ತೋರಿ, ತೊಳಗಿ, ಬೆಳಗಿ ಕೃತಾರ್ಥರಾದರು. ಇಷ್ಟು ಸರಳ, ನೇರ, ಖಚಿತ ಶಿವ ಸಾಧನ ಮತ್ತಾರು ಹೇಳಲಿಲ್ಲುವಲ್ಲ. ತಮಗೆ ಏಕೆ ಹೊಟ್ಟೆ ಉರಿ ಸ್ವಾಮಿ, ಲಿಂಗಾಯತರು ಸ್ವಾತಂತ್ರ ಹೋರಾಟಗಾರರ ಬಗ್ಗೆ? ಭಾರತದಲ್ಲಿ ಇರುವವರು ಭಾರತೀಯರು. ಹಿಂದೂಸ್ತಾನದಲ್ಲಿರುವವರು ಹಿಂದೂಗಳು. ಇಲ್ಲಿ ಧರ್ಮ ಏನು ಬಂತು ಸ್ವಾಮಿ? ಇತ್ಯಾದಿ., ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.

  • ಕನ್ನೇರಿ ಸ್ವಾಮಿ ಯತ್ನಾಳ್ ಈಶ್ವರಪ್ಪ ಇವ್ರಿಗೆ ಯಾರೋ ಬರೋಬ್ಬರಿ ಹಣ ಅಧಿಕಾರದ ಆಸೆ ತೋರಿಸಿದ್ದಾರೆ.. ಉಂಡ ಮನೆ ಜಂತಿ ಎಣಿಸೋ ಮಕ್ಕಳು…

    • ಯಾರೋ ಏನೂ ಕೊಟ್ಟಿಲ್ಲ RSS ಸಂಬಳಕ್ಕೆ ಇಟ್ಟುಕೊಂಡಿದ್ದಾರೆ

  • ಸಂಬಳ ಇಲ್ವಂತೆ, ಬರಿ ಗ್ಲುಕೋಸ್ ಬಿಸ್ಕತ್ ಅಂತೆ

Leave a Reply

Your email address will not be published. Required fields are marked *