ಬೆಂಗಳೂರು
ಪೂಜ್ಯ ಡಾ. ಬೆಲ್ದಾಳ ಸಿದ್ದರಾಮ ಶರಣರು ರಚಿಸಿದ “ಸತ್ಯ ಶರಣರು ಸತ್ಯ ಶೋಧ” ಸಂಶೋಧನಾ ಗ್ರಂಥ, ಮಾರ್ಚ್ 9ರಂದು, ಬೆಳಿಗ್ಗೆ 11 ಗಂಟೆಗೆ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ, ಬೆಂಗಳೂರು ಬಸವ ಸಮಿತಿ ಹಾಗೂ ಬಸವಕಲ್ಯಾಣ ಬಸವ ಮಹಾಮನೆ ಟ್ರಸ್ಟ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸಮಾರಂಭದ ಸಾನಿಧ್ಯವನ್ನು ಮೈಸೂರು ಕುಂದೂರು ಮಠದ ಪೂಜ್ಯ ಡಾ. ಶರಶ್ಚಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಗ್ರಂಥ ಲೋಕಾರ್ಪಣೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವಹಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಭಾಗವಹಿಸುತ್ತಾರೆ.
ಬಸವ ಮಹಾಮನೆ ಟ್ರಸ್ಟ್, ಬಸವ ಸಮಿತಿ ಸರ್ವರಿಗೂ ಸ್ವಾಗತ ಕೋರಿವೆ.

