ಶಿವಾನಂದ ಪಟ್ಟಣ ಶೆಟ್ಟರ್ ಅವರಿಗೆ ಅವ್ವ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಅಥಣಿಯ ಮೋಟಗಿ ಶ್ರೀಮಠದಿಂದ ಸಾಧಕರಿಗೆ ಕೊಡ ಮಾಡುವ ಸಮಾಜ ಸೇವಾ ಭೂಷಣ ಪ್ರಶಸ್ತಿಗೆ ಪಾತ್ರರಾದ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶಿಕ್ಷಣತಜ್ಞ ನಿವೃತ್ತ ಪ್ರಾಚಾರ್ಯ ಶಿವಾನಂದ ಪಟ್ಟಣ ಶೆಟ್ಟರ ಅವರಿಗೆ ದೊರೆತಿರುವುದು ಗದಗ ಪರಿಸರದ ಅವರ ಹಿತೈಷಿಗಳಿಗೆ ಸ್ನೇಹಿತರಿಗೆ ಅಪಾರ ಸಂತಸ ತಂದಿದೆ ಎಂದು ಡಾ. ಬಸವರಾಜ ಧಾರವಾಡ ಅಭಿಪ್ರಾಯಪಟ್ಟರು.

ಅವ್ವ ಸೇವಾ ಟ್ರಸ್ಟ್ ಪರವಾಗಿ ಸರ್ಕಾರಿ ಪ್ರೌಢಶಾಲೆಯ ರಂಗಮಂದಿರ ಸಭಾಭವನದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿವಾನಂದ ಪಟ್ಟಣಶೆಟ್ಟರ ಅವರು ಒಬ್ಬ ಶ್ರಮಜೀವಿ. ಕಾಯಕವೇ ಕೈಲಾಸ ಎಂಬ ತತ್ವದ ಅಡಿ ನಂಬಿಕೆ ಇಟ್ಟವರು. ಸದಾ ಶ್ರೀ ತೋಂಟದಾರ್ಯ ಮಠದ ಅಭಿವೃದ್ಧಿಗಾಗಿ ಚಿಂತಿಸುವ ಮೂಲಕ ಅವರ ನಾಲ್ಕು ದಶಕಗಳ ಸೇವೆಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ೪೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು, ವಸತಿ ಗ್ರಹಗಳನ್ನು, ಸಮುದಾಯ ಭವನಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ಅಲ್ಲದೆ ಸಾವಿರಾರು ಕುಟುಂಬಗಳಿಗೆ ಉದ್ಯೋಗದ ನೆರವು ನೀಡುವ ಮೂಲಕ ಬದುಕನ್ನು ಕಟ್ಟಿಕೊಟ್ಟಿದ್ದಾರೆ.

ತೋಂಟದಾರ್ಯ ಶ್ರೀ ಮಠದ ಎಲ್ಲಾ ಶಾಖಾ ಮಠಗಳನ್ನು ಜೀರ್ಣೋದ್ಧಾರ ಮಾಡಿ, ಶ್ರೀಮಠದಿಂದ ಸಮಾಜ ಸೇವೆ ಜೊತೆಗೆ ಅನ್ನದಾಸೋಹ, ಅಕ್ಷರ ದಾಸೋಹ ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸುವ ಕೆಲಸಕ್ಕೆ ಪಟ್ಟಣ ಶೆಟ್ಟರ ಅವರ ಸೇವೆ ಸದಾಕಾಲ ಸ್ಮರಣೀಯ. ಎಲ್ಲ ಸಮುದಾಯದವರಿಗೆ ಶ್ರೀಮಠವನ್ನ ಮುಕ್ತವಾಗಿ ತೆರೆದಿಡುವ ಮೂಲಕ ಸೌಹಾರ್ದತೆಯ ಕೇಂದ್ರವನ್ನಾಗಿಸಿದವರು ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಶ್ರೀಗಳ ಆಶಯದಂತೆ ಜನಸಾಮಾನ್ಯರಿಗೆ ಶ್ರೀಮಠವನ್ನ ಮುಕ್ತಗೊಳಿಸಿ ನೂರಾರು ಬರಹಗಾರರಿಗೆ ಪ್ರೋತ್ಸಾಹ ನೀಡಿ, ಸಾವಿರಾರು ಪುಸ್ತಕಗಳು ಪ್ರಕಟಗೊಳ್ಳುವಂತೆ ಮಾಡಿದ ಶ್ರೇಯಸ್ಸು ಶೆಟ್ಟರ ಅವರಿಗೆ ಸಲ್ಲುತ್ತದೆ.

ತಮ್ಮ ಖಾಸಗಿ ಬದುಕನ್ನು ಬದಿಗೊತ್ತಿ ನಿತ್ಯ ಶ್ರೀ ಮಠ ಹಾಗೂ ವಿದ್ಯಾಪೀಠಗಳ ಬಗ್ಗೆ ಸದಾ ಆಲೋಚಿಸುತ್ತಿರುವುದು ಅವರ ನಿತ್ಯ ಕಾಯಕವಾಗಿದೆ. ಹೀಗಾಗಿ ಇಂತಹ ಸಾಧಕರಿಗೆ ಇನ್ನೂ ಹಲವಾರು ಪ್ರಶಸ್ತಿಗಳು ಸಿಗಬೇಕು ಹೀಗಾಗಿ ಅವರಿಂದ ಇನ್ನೂ ಹೆಚ್ಚೆಚ್ಚು ಸಮಾಜಮುಖಿ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಡಾ. ಧಾರವಾಡ ಹೇಳಿದರು.

ಈ ಸಂದರ್ಭದಲ್ಲಿ ಗದಗ ಪರಿಸರದ ಅವರೆಲ್ಲ ಹಿತೈಷಿ ಸ್ನೇಹಿತರ ಪರವಾಗಿ ಅಭಿನಂದಿಸಿ ಸತ್ಕರಿಸಲಾಯಿತು.

ಸನ್ಮಾನ ಸ್ವೀಕರಿಸಿದ ಪಟ್ಟಣ ಶೆಟ್ಟರ ಅವರು ಮಾತನಾಡಿ, ನಾಡಿನ ಅಪರೂಪದ ಜನನಾಯಕರಾದ ಸಭಾಪತಿ ಬಸವರಾಜ ಹೊರಟ್ಟಿ ಅವರು ಸ್ಥಾಪಿಸಿದ ಅವ್ವ ಸೇವಾ ಟ್ರಸ್ಟ್ ನಿಂದ ನನಗಿಂದು ಸನ್ಮಾನ ಸಿಕ್ಕಿದ್ದು ಸಾಕಷ್ಟು ಖುಷಿ ತಂದಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಹಾರೈಕೆ ಮಾರ್ಗದರ್ಶನ, ನಿಮ್ಮಂತ ಎಲ್ಲ ಹಿತೈಷಿ ಬಳಗದವರ ಪ್ರೀತಿ ವಿಶ್ವಾಸದಿಂದ ಒಂದಿಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ, ಅದು ಇಷ್ಟೊಂದು ಸಮಾಜಕ್ಕೆ ಉಪಯೋಗವಾಗಿದೆ ಎಂಬ ಖುಷಿಯು ನನಗಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹಾರೈಕೆಗೆ ನಾನು ಸದಾ ಚಿರಋಣಿಯಾಗಿರುವೆ ಎಂದರು.

ತಮ್ಮ ಮನದಾಳದ ಮಾತುಗಳನ್ನು ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟೆಪ್ಪನವರ, ಶಿಕ್ಷಣ ಇಲಾಖೆಯ ಶಂಕರ ಹಡಗಲಿ, ಪ್ರಭಾರಿ ಮುಖ್ಯೋಪಾಧ್ಯಾಯ ಶ್ರೀಮತಿ ಜಯಲಕ್ಷ್ಮಿ ಅಣ್ಣಿಗೇರಿ, ಶಾಮ ಲಾಂಡೆ, ಆಯ್.ಬಿ. ಮಡಿವಾಳರ, ಶ್ರೀಮತಿ ಶಂಕ್ರಮ್ಮ. ಆರ್. ಹಣಮಗೌಡ್ರು, ಎಂ.ಐ ಶಿವನಗೌಡ್ರು, ಶ್ರೀಮತಿ ಮಂಜುಳಾಪಿ. ಸಾಮ್ರಾಣಿ, ಸುಮಂಗಲ. ಎಂ. ಪತ್ತಾರ, ಶಾರದಾ ಬಾಣದ, ಶೋಭಾ ಎಸ್. ಗಾಳಿ, ರಮೇಶ ಬಸರಿ, ಸಾವಿತ್ರಿ ಎ. ಗದ್ದನಕೇರಿ, ಎನ್ .ಆರ್. ಶಿರೋಳ, ಸಬಿಯಾ ಯು. ಕುಷ್ಟಗಿ, ಗಂಗಾ ಎಂ. ಅಳವಂಡಿ, ಮಂಜುಳಾ ಟಿ, ಪದ್ಮಾ ವಿ. ದಾಸರ, ಲಕ್ಷ್ಮಮ್ಮ ಮಾಳೋತ್ತರ, ಶಶಿಕಲಾ ಬಿ. ಗುಳೇದವರ, ಸಂಜೀವಿನಿ ಕುಲಗುಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಾರದಾ ಬಾಣದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *