ಉಳವಿಯಲ್ಲಿ ಭಕ್ತಿ, ಶ್ರದ್ಧೆಯಿಂದ ನಡೆದ ಏಳನೇ ಶರಣ ಗಣಮೇಳ

ಬಸವ ಮೀಡಿಯಾ
ಬಸವ ಮೀಡಿಯಾ

ಉಳವಿ

ಶರಣ ಚನ್ನಬಸವಣ್ಣನವರ ತಪೋಭೂಮಿ ಉಳವಿಯಲ್ಲಿ ರವಿವಾರ ಏಳನೇ ಶರಣ ಗಣಮೇಳ ಬಸವ ಧರ್ಮಪೀಠದ ಪೂಜ್ಯ ಡಾ. ಮಾತೆ ಗಂಗಾದೇವಿಯವರ ನೇತೃತ್ವದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಶರಣಾಗತಿಯಿಂದ, ನೆರವೇರಿತು.

ಗುರುಬಸವ ಧ್ವಜಾರೋಹಣದ ಮೂಲಕ ಪ್ರಾರಂಭವಾಗಿ, ಧರ್ಮಗುರು ಬಸವಣ್ಣನವರ ವಿಶೇಷ ಪೂಜೆ, ಸಾಮೂಹಿಕ ಇಷ್ಟಲಿಂಗಾರ್ಚನೆಯಲ್ಲಿ ನೂರಾರು ಬಸವಭಕ್ತರು ಭಾಗವಹಿಸಿದರು.

ಬೆಳಿಗ್ಗೆ 10:30 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭಗೊಂಡು ಪೂಜ್ಯ ಗಂಗಾ ಮಾತಾಜಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಲ್ಯಾಣ ಕ್ರಾಂತಿಯಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರವಹಿಸಿದ, ಅಕ್ಕನಾಗಮ್ಮ ತಾಯಿಯವರ ಜೀವನ, ಸಾಧನೆ, ಸಂದೇಶಗಳ ಬಗ್ಗೆ ಚಿಂತನೆ ಮಾಡಿದರು.

ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿ ಮಾತಾಜಿಯವರು, 6 ನೇ ಪೀಠವಾದ ಅಕ್ಕ ನಾಗಲಾಂಬಿಕ ಪೀಠವನ್ನು, 2019ರಿಂದ ಪ್ರಾರಂಭಗೊಳಿಸಿದರು, ಅಂದಿನಿಂದ ನಿರಂತರವಾಗಿ, ಶರಣ ಗಣಮೇಳ, ಯಶಸ್ವಿಯಾಗಿ ನಡೆಯುತ್ತಿದ್ದು, ವಚನ ಸಾಹಿತ್ಯದ ಅನುಷ್ಠಾನ, ಪ್ರಚಾರ ಮತ್ತು ಸಂಘಟನೆಯಲ್ಲಿ ಮಹತ್ವಪೂರ್ಣ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಉಳವಿ ಶಿವಪುರದ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಅವರು, ಕಾಲಜ್ಞಾನದ ವಚನಗಳ ಬಗ್ಗೆ ಚಿಂತನೆ ಮಾಡಿದರು. ಬಸವ ಧರ್ಮಪೀಠದ ಪೂಜ್ಯ ಬಸವಕುಮಾರ ಸ್ವಾಮೀಜಿ, ಪೂಜ್ಯ ದಾನೇಶ್ವರಿ ಮಾತಾಜಿ, ಅವರಿಂದ ವಚನ ಚಿಂತನೆಗಳು ನಡೆದವು.

ಪೀಠಾರೋಹಣದ ಪೂಜ್ಯ ದಾನೇಶ್ವರಿ ಮಾತಾಜಿ ಅವರು ಅಕ್ಕ ನಾಗಲಾಂಬಿಕ ಪೀಠದ ಅಭಿವೃದ್ಧಿ ಕಾರ್ಯದ ಬಗ್ಗೆ ಚಿಂತನೆ ಮಾಡಿದರು.

ಪೀಠದ ವ್ಯವಸ್ಥಾಪಕರಾದ ಶರಣ ಸುಧೀರ ವಾಲಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಶರಣ ಎಸ್.ಬಿ. ಜೋಡಳ್ಳಿ. ಅಧ್ಯಕ್ಷರು ರಾಷ್ಟ್ರೀಯ ಬಸವದಳ, ಹುಬ್ಬಳ್ಳಿ ಇವರು ಶರಣು ಸಮರ್ಪಣೆ ಮಾಡಿದರು. ನೂರಾರು ಬಸವಭಕ್ತರ ಪ್ರಸಾದ ದಾಸೋಹದೊಂದಿಗೆ ಶರಣ ಗಣಮೇಳ ಮಹಾಮಂಗಲಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *