ಸೊಲ್ಲಾಪುರದಲ್ಲಿ ಶಿಕ್ಷಕರಿಗೆ ಆದ್ಯತೆ ಮೇಲೆ ಬಸವ ತತ್ವ ಮುಟ್ಟಿಸಲು ಕರೆ

ಸೊಲ್ಲಾಪುರ

ಸೊಲ್ಲಾಪುರದಲ್ಲಿ ಹೆಚ್ಚಿನ ಲಿಂಗಾಯತ ಬಾಂಧವರಿದ್ದು, ಹೆಚ್ಚಿನವರೂ ಶಿಕ್ಷಕರೂ ಆಗಿದ್ದಾರೆ. ಎಲ್ಲರೂ ಕೂಡಿಕೊಂಡು ಈ ವರ್ಷದ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಿಕ್ಷಕ ಸಂಘದ ನೇತಾರ ಶಿವಾನಂದ ಭರಲೆ ಅಭಿಪ್ರಾಯ ಪಟ್ಟರು.

ಭಾನುವಾರ ಇಲ್ಲಿಯ ದಕ್ಷಿಣ ಸೊಲ್ಲಾಪುರದ ಅತ್ತಾರನಗರ ಶಿಕ್ಷಕ ಸೊಸೈಟಿಯಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಮಹತ್ವದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಜಿಲ್ಲೆಯಲ್ಲಿ ಹೆಚ್ಚಿನ ಶಿಕ್ಷಕರು ಇದ್ದಾರೆ ಅವರಿಗೆ ಬಸವಣ್ಣನವರ ವಿಚಾರಗಳು, ತತ್ವ-ಸಿದ್ದಾಂತಗಳು ಮುಟ್ಟಿಸುವ ಕಾರ್ಯ ಮಾಡಬೇಕು ಶಿಕ್ಷಕರ ಮನಮುಟ್ಟಿದರೆ ಅದೂ ವಿದ್ಯಾರ್ಥಿಗಳಿಗೆ ಇಳಿಯುತ್ತದೆ. ಈ ಬಸವ ಜಯಂತಿಗೆ ಶರಣರ ಹೆಸರಲ್ಲಿ ಸಮಾಜದ ಸಾಧಕರಿಗೆ ಗೌರವ ಮತ್ತು ಮಕ್ಕಳಲ್ಲಿ ವಚನ ಸ್ಪರ್ಧೆಗಳು ಏರ್ಪಡಸಬೇಕು ಬೇಕಾದ ಸಹಕಾರ ತಾವು ನೀಡುವದಾಗಿ ಹೇಳಿದರು.

ಮಹಾರಾಷ್ಟದ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ ಮಹಾಸಭಾ ಮಹಾರಾಷ್ಟ್ರದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಹಾಗೆ ಜಾಗತಿಕ ಲಿಂಗಾಯತ ಮಹಾಸಭಾದ ಶಿಕ್ಷಕರ ಸಂಘ ರಚಿಸಬೇಕು, ಶಿಕ್ಷಕರನ್ನು ಜಾಗೃತ ಗೊಳಿಸುವದು, ಮಹಾಸಭಾಗೆ ಸದಸ್ಯರನ್ನು ಮಾಡುವದು ಸೇರಿದಂತೆ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಹೇಳಿದರು.

ಜೆ.ಎಲ್. ಎಂ. ಕಲಬುರಗಿ ಜಿಲ್ಲೆ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಮಾತನಾಡಿ, ಮಹಾಸಭಾ ಕಳೆದ ಕೆಲ ವರ್ಷಗಳಲ್ಲಿಯೇ ಕರ್ನಾಟಕದಲ್ಲಿ ಉತ್ತಮ ಕಾರ್ಯಮಾಡುತ್ತ ಎಲ್ಲರ ಮನೆಮಾತಾಗಿದ್ದು, ಸೊಲ್ಲಾಪುರ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಎಲ್ಲೆಡೆ ಮಹಾಸಭಾ ಕಾರ್ಯ ವಿಸ್ತರಿಸುವ ಜವಾವ್ದಾರಿ ತಮ್ಮ ಮೇಲಿದ್ದು ಸೊಲ್ಲಾಪುರದ ಶಿಕ್ಷಕ ನೇತಾರ ಶಿವಾನಂದ ಭರಲೆ ಮತ್ತು ವೀರಭದ್ರ ಯಾದವಾಡರು ನೇತೃತ್ವ ವಹಿಸಿ ಇಲ್ಲಿಯ ಲಿಂಗಾಯತ ಬಾಂಧವರನ್ನು ಜಾಗೃತ ಮಾಡುವ ಜವಾಬ್ದಾರಿ ತಗೆದು ಕೊಳ್ಳಬೇಕೆಂದು ಸಲಹೆ ನೀಡಿದರು.

ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ವೀರಭದ್ರ ಯಾದವಾಡ, ಲಾತೂರದ ವಿಜಯಕುಮಾರ ಶೇಠೆ, ಉದಯ ಚೌಂಡೆ, ಸೊಲ್ಲಾಪುರ ಜಿಲ್ಲಾಧ್ಯಕ್ಷ ಶಿವಾನಂದ ಗೋಗಾವ, ಉಪಾಧ್ಯಕ್ಷ ರಾಜೇಂದ್ರ ಖಸಗಿ, ಕೋಶಾಧ್ಯಕ್ಷ ನಾಗೇಂದ್ರ ಕೋಗನೂರೆ, ಶಿವರಾಜ ಕೊಟಗಿ, ಅಕ್ಕಲಕೋಟ ಅಧ್ಯಕ್ಷ ಸಚಿನ ಕಾಲಿಬತ್ತೆ, ಕಲಬುರಗಿ ಪ್ರಾಂಶುಪಾಲ ಮಹಾದೇವ ಬಡಾ, ಶಿಕ್ಷಕ ರೇವಣಸಿದ್ಧ ಹತ್ತುರೆ ಸೇರಿದಂತೆ ಹಲವರು ಸಭೆಯಲ್ಲಿದ್ದರು.


ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *