ಗುಂಡ್ಲುಪೇಟೆಯ ಪ್ರಾಣೇಶ ಮತ್ತು ಧಾರವಾಡದ ರಶ್ಮಿ ಅವರ ಸರಳ ವಚನ ಕಲ್ಯಾಣದಲ್ಲಿ ಪೂಜ್ಯ ಉದ್ಧಾನಸ್ವಾಮಿಗಳ ಘೋಷಣೆ
ಮೂಡಗೂರು
ಗುಂಡ್ಲುಪೇಟೆ ತಾಲೂಕಿನ ಮೂಡಗೂರು ಶ್ರೀಗುರು ಉದ್ದಾನೇಶ್ವರ ವಿರಕ್ತಮಠದಲ್ಲಿ ಗುರುವಾರ ಸರಳ ನಿಜಾಚರಣೆಯ ವಚನ ಕಲ್ಯಾಣ ಮಹೋತ್ಸವ ಜರುಗಿತು.

ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಹೆಚ್.ಎಂ. ಶಿವಮೂರ್ತಿ, ಮಂಜುಳ ಅವರ ಪುತ್ರ ‘ಪ್ರಾಣೇಶ’ ಮತ್ತು ಧಾರವಾಡದ ನರೇಂದ್ರ ಗ್ರಾಮದ ಸಂಗಪ್ಪ, ಮಂಜುಳ ಅವರ ಪುತ್ರಿ ‘ರಶ್ಮಿ’ ಅವರುಗಳು ನೂತನ ದಂಪತಿಗಳಾದರು.

ಆಶೀರ್ವಚನ ನೀಡಿದ ಪೂಜ್ಯ ಉದ್ಧಾನಸ್ವಾಮಿಗಳು ವಚನ ಮಾಂಗಲ್ಯವನ್ನು 900 ವರ್ಷಗಳ ಹಿಂದೆ ನಮ್ಮ ಬಸವಾದಿ ಶರಣರು ಲಿಂಗಾಯತ ಧರ್ಮದಲ್ಲಿ ನಡೆಸಿಕೊಟ್ಟರು. ಪ್ರತಿಯೊಬ್ಬ ಲಿಂಗಾಯತರು ಇದೇ ರೀತಿ ಸರಳರೀತಿಯ ವಚನಕಲ್ಯಾಣ ಮಾಡಿಕೊಳ್ಳಬೇಕೆಂದು ಎಂದು ನುಡಿದರು.
ನೂರು ಅತಿಥಿಗಳ ಒಳಗಿರುವ ಸರಳ ವಚನಕಲ್ಯಾಣಕ್ಕೆ ನಮ್ಮ ಮಠದ ಸಭಾಂಗಣವನ್ನು ಉಚಿತವಾಗಿ ನೀಡುತ್ತೇವೆಂದು ಹೇಳಿದರು.

ಪೂಜ್ಯ ಇಮ್ಮಡಿ ಉದ್ದಾನ ಶ್ರೀಗಳ ನೇತೃತ್ವದಲ್ಲಿ, ಮೊದಲಿಗೆ ವಧು ವರರು ಇಷ್ಟಲಿಂಗ ಪೂಜೆಯನ್ನು ಮಾಡಿಕೊಂಡರು, ಹಿರಿಯರ ಸಮ್ಮುಖದಲ್ಲಿ ಷಟ್ಸ್ಥಲ ಬಸವ ಧ್ವಜಾರೋಹಣವನ್ನು ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನು ನಂದೀಶ್ ಶಿಕ್ಷಕರು ಆಡಿದರು. ನಂಜೇದೇವನಪುರದ ಮಾದಪ್ಪ ತಂಡದವರು ವಚನಗೀತೆ ಹಾಡಿದರು. ವಚನಮಾಂಗಲ್ಯ ಮೂರ್ತಿಗಳಾದ ಮೇಲಾಜಿಪುರದ ಪೂಜ್ಯ ಶಿವಬಸವ ಸ್ವಾಮೀಜಿ ಮತ್ತು ಪೂಜ್ಯ ಕಾಳನಹುಂಡಿಯ ಕುಮಾರಸ್ವಾಮೀಜಿ ಬಸವಾದಿ ಶರಣರ ಆಶಯದಂತೆ ಮಾಂಗಲ್ಯಧಾರಣೆ ಮತ್ತು ರುದ್ರಾಕ್ಷಿ ಧಾರಣೆಯನ್ನು ಮಾಡಿಸುವ ಮೂಲಕ ವಚನ ಕಲ್ಯಾಣವನ್ನು ನಡೆಸಿಕೊಟ್ಟರು.
ನವದಂಪತಿಗಳಿಗೆ ನೆರೆದಿರುವ ಎಲ್ಲರೂ ಪುಷ್ಪಾರ್ಚನೆ ಮಾಡಿದರು.
ಅಷ್ಟಾವರಣದ ಅಂಗಗಳಾಗಿರುವ ಶ್ರೀ ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗವನ್ನು ಪ್ರತಿಯೊಬ್ಬ ಲಿಂಗಾಯತರು ಕಡ್ಡಾಯವಾಗಿ ಧರಿಸಬೇಕೆಂದು ಮೇಲಾಜಿಪುರದ ಪೂಜ್ಯ ಶ್ರೀ ಶಿವಬಸವಸ್ವಾಮಿಗಳು ನುಡಿದರು.

ವಿಶ್ವ ಬಸವಸೇನೆ ಸದಸ್ಯರು ಹಾಜರಿದ್ದರು. ವಿಶ್ವಬಸವ ಸೇನೆಯ ಅಧ್ಯಕ್ಷ ಬಸವ ಯೋಗೇಶ್ ಅವರು ಸ್ವಾಗತ ಕೋರಿದರು. ಹಂಗಳಪುರದ ಸುರೇಶ ನಿರೂಪಣೆ ಮಾಡಿದರು. ಮಹೇಶ್ ಮಡಳ್ಳಿ ದಂಪತಿಗಳು, ಸೋಮಣ್ಣ ದಂಪತಿಗಳು ಕೀಳಲಿಪುರ, ರೂಪ ಕುಮಾರ ದಂಪತಿಗಳು ದೊಡ್ಡಹುಂಡಿ, ರೂಪ ಮಂಜುನಾಥ, ಜ್ಯೋತಿ ಸುರೇಶ, ಬಸವೇಶ ಹಂಗಳ, ನಾಗೇಂದ್ರ ಮೂಡ್ನಾಕೂಡು , ಬೊಮ್ಮಲಾಪುರದ ಬಸವಣ್ಣ, ನಂದೀಶ ದೇವಿರಮ್ಮನಹಳ್ಳಿ, ಗೌಡಿಕೆ ಸಿದ್ದೇಶ ಹೆಗ್ಗಡಹಳ್ಳಿ, ಮಾದೇವಣ್ಣ ಮಡಳ್ಳಿ, ಮರಳಪುರದ ಸಿದ್ದೇಶ, ಮೂಡಗೂರು, ಹೆಗ್ಗಡಹಳ್ಳಿ ಗ್ರಾಮಸ್ಥರು, ಎರಡೂ ಮನೆತನದ ಬಂಧು-ಮಿತ್ರರು ವಚನ ಕಲ್ಯಾಣ ಸಮಾರಂಭದಲ್ಲಿ ಹಾಜರಿದ್ದು ನೂತನ ದಂಪತಿಗಳಿಗೆ ಶುಭಕೋರಿದರು.
ನಾವು ವಧುವರರಿಗೆ ಗುರು ಬಸವಣ್ಣನವರ ಕೃಪಾಶೀರ್ವಾದ ಸದಾ ಇರಲಿ.
ಬಸವ ತತ್ವಕ್ಕೆ ಜಯವಾಗಲಿ ಎಲ್ಲೆಡೆ ಪಸರಿಸಲಿ
ಜೈ ಬಸವ
ಇದೊಂದು ಅಪರೂಪದ *ವಚನ ಕಲ್ಯಾಣ* ಲಿಂಗಾಯತರು ಈ ರೀತಿಯ ಸರಳ, ಸುಂದರ ವಚನಾಧಾರಿತ ವಚನ ಕಲ್ಯಾಣ ಮಾಡಿಕೊಳ್ಳಲು ಮುಂದಾಗಬೇಕು. ನವ ವಧು-ವರರಿಗೆ ಧರ್ಮಗುರು ಬಸವೇಶ್ವರರ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ಇರಲಿ.ಎರಡೂ ಕುಟುಂಬದ ಸದಸ್ಯರಿಗೆ ಧನ್ಯವಾದಗಳು. ಶರಣು, ಶರಣಾರ್ಥಿಗಳು.