ಮೈಸೂರು: ಬಸವ ಸಂಘಟನೆಗಳಿಂದ ‘ವಚನ ದರ್ಶನ ಮಿಥ್ಯ ಸತ್ಯ’ ಲೋಕಾರ್ಪಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಅವರ ಉದಾಹರಣೆಗಳನ್ನು ನೋಡಿ… ಯಾಕಪ್ಪ ಬೇಕು, ಯಾವಾಗ ಬಂದು ಗುಂಡು ಹೊಡೆಯುತ್ತಾರೋ ಎಂದು ಯೋಚನೆ ಮಾಡುವಂತಾಗಿದೆ: ರೇಣುಕಾ ಪ್ರಸನ್ನ

ಮೈಸೂರು

ಸಂಘ ಪರಿವಾರದ ವಚನ ದರ್ಶನ ಪುಸ್ತಕಕ್ಕೆ ಉತ್ತರವಾಗಿ ಬಂದಿರುವ ‘ವಚನ ದರ್ಶನ ಮಿಥ್ಯ ಸತ್ಯ’ ಪುಸ್ತಕ ಜಿಲ್ಲೆಯ ಬಸವ ಸಂಘಟನೆಗಳ ಸಹಯೋಗದಲ್ಲಿ ರವಿವಾರ ಲೋಕಾರ್ಪಣೆಯಾಯಿತು.

ನಟರಾಜ ಸಭಾ ಭವನದಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್, ಲಿಂಗಾಯತ ಸಾಂಸ್ಕೃತಿಕ ಸಮಿತಿ ಮತ್ತು ಇತರ ಬಸವ ಸಂಘಟನೆಗಳು ಭಾಗವಹಿಸಿದ್ದವು.

ಮುಖ್ಯ ಅತಿಥಿಗಳಾಗಿ ಬಂದಿದ್ದ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ‘ವಚನ ದರ್ಶನ ಮಿಥ್ಯ ಸತ್ಯ’ ಒಂದು ಉಪಯುಕ್ತ ಪುಸ್ತಕ, ಅದನ್ನು ಮನೆಯಲ್ಲಿ ಇಟ್ಟುಕೊಂಡು ಅದರಲ್ಲಿರುವ ಅಂಶಗಳನ್ನು ಗಮನಿಸಿದರೆ ಇತರರಿಗೂ ತಿಳುವಳಿಕೆ ಮೂಡಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಬಸವಾದಿ ಹರಣರ ವಚನಗಳನ್ನು ತಿರುಚಲು ಪ್ರಕಟವಾದ ‘ವಚನ ದರ್ಶನ’ ಪುಸ್ತಕದ ಬಗ್ಗೆ ಮಾತನಾಡುತ್ತ “ನಮ್ಮ ಮುಂದೆ ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಅವರ ಉದಾಹರಣೆಗಳನ್ನು ನೋಡಿ, ಅವರು ಯಾವ ಮಟ್ಟಕ್ಕೆ ಹೋಗಿದ್ದಾರೆ ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವರ ಬಗ್ಗೆ ಮಾತನಾಡಬೇಕಾದರೆ – ಯಾಕಪ್ಪ ಬೇಕು, ಯಾವಾಗ ಬಂದು ಗುಂಡು ಹೊಡೆಯುತ್ತಾರೋ ಎಂದು ಯೋಚನೆ ಮಾಡುವಂತಾಗಿದೆ,” ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಇಷ್ಟೆಲ್ಲಾ ಸವಲತ್ತು, ಸಂಪನ್ಮೂಲಗಳು ಇದ್ದರೂ ನಮ್ಮ ಸಮಾಜ ಯಾವ ಕಡೆ ಸಾಗುತ್ತಿದೆ ಇದೆ ಎಂದು ಚಿಂತಿಸಬೇಕು. ಸಮಾಜದ ಸ್ಥಿತಿ ಅಷ್ಟು ಬದಲಾಗಿಲ್ಲ, ಆದರೆ ಸ್ವಲ್ಪ ಸುಧಾರಣೆ ಎಂದರೆ ಈಗ ಎಲ್ಲರೂ ಬಸವಣ್ಣನವರನ್ನ, ಬಸವಾದಿ ಶರಣರನ್ನ ಒಪ್ಪಿಕೊಳ್ಳುವ ಹಂತಕ್ಕೆ ಬಂದಿದ್ದಾರೆ, ಎಂದು ಹೇಳಿದರು.

ಬಸವ ಪರ ಸಂಘಟನೆಗಳು ವೈಯಕ್ತಿಕ ವಿಚಾರಗಳಿಗೆ ಹೋಗದೆ ಒಟ್ಟಾಗಿ ಯುವಕರಲ್ಲಿ ಜಾಗೃತಿ ಮೂಡಿಸುವ, ವಚನಗಳನ್ನು ಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ರೂಪಿಸಬೇಕು.

ಜನರಿಗೆ ಯಾವುದು ಇಷ್ಟವಾಗತ್ತೆ ಅದನ್ನು ಪಾಲಿಸಲಿ, ಯಾವುದು ಶಕ್ತಿಯುತವಾಗಿರುತ್ತದೆ ಅದು ಉಳಿಯುತ್ತದೆ ಎಂದು ಹೇಳಿದರು.

ಮಿಥ್ಯ ಸತ್ಯ ಗ್ರಂಥ ಪರಿಚಯ ಮಾಡಿಕೊಟ್ಟ ಸಂಪಾದಕ ಟಿ ಆರ್ ಚಂದ್ರಶೇಖರ್ ವಚನ ದರ್ಶನ ಪುಸ್ತಕದ ಹಿಂದೆ ಶರಣ ತತ್ವ ತುಳಿಯುತ್ತ ಬಂದಿರುವ ಒಂದು ದೊಡ್ಡ ಸಂಘಟನೆಯಿದೆ. ವಚನಗಳು ವೇದ ಉಪನಿಷತ್ತುಗಳ ಕನ್ನಡ ಅನುವಾದ ಎನ್ನುವುದು ಅವರ ಮುಖ್ಯ ವಾದ ಎಂದು ಹೇಳಿದರು. ಇದಕ್ಕೆ ವಿರುದ್ಧವಾಗಿ ಲಿಂಗಾಯತರಲ್ಲಿ ಜಾಗೃತಿ ಬೆಳೆಯುತ್ತಿದೆ, ಇತ್ತೀಚೆಗೆ ನಗರದಲ್ಲಿ ಶಾಸಕ ಶ್ರೀವತ್ಸ ಅವರ ಸಂಸ್ಕೃತ ಪರ ಭಾಷಣಕ್ಕೆ ಬಂದ ಪ್ರತಿರೋಧ ಇದಕ್ಕೆ ಉದಾಹರಣೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಅವರು ಲಿಂಗಾಯತ ಧರ್ಮದಲ್ಲಿ ಮೈಸೂರಿನ ಪಾತ್ರದ ವಿಷಯದ ಬಗ್ಗೆ ಮಾತಂದಿದರು.

ಹೊಸ ಮಠದ ಪೂಜ್ಯ ಶ್ರೀ ಚಿದಾನಂದ ಸ್ವಾಮಿಗಳು, ಅಲ್ಲಮ ಪ್ರಭು ಶೂನ್ಯ ಪೀಠದ ಪೂಜ್ಯ ಶ್ರೀ ಗೌರಿ ಶಂಕರ ಸ್ವಾಮಿಗಳು ಇವರುಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಜೆಎಲ್ಎಂ ಜಿಲ್ಲಾಧ್ಯಕ್ಷ ಮಹದೇವಪ್ಪ ಅವರಿಂದ ಸ್ವಾಗತ ಭಾಷಣ, ಕಾರ್ಯದರ್ಶಿ ಎಂ ಮಾರಪ್ಪ ಅವರಿಂದ ಶರಣು ಸಮರ್ಪಣೆ ನಡೆಯಿತು. ಶ್ರೀಮತಿ ಜಿ ಕೆ ನಾಗರತ್ನ ಅವರಿಂದ ವಚನ ಪ್ರಾರ್ಥನೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
3 Comments
  • ಮೈಸೂರು ಇತಿಹಾಸ ಮತ್ತು ಲಿಂಗಾಯತ ಧರ್ಮ ಹೋರಾಟದ. ಬಗ್ಗೆ ತಿಳಿಸಿರುವ ವಿಚಾರವನ್ನು ಹಾಕಬೇಕಿತ್ತು ಮತ್ತು ಅವರು ಮಾತನಾಡಿರುವ ವಿಡಿಯೋ ಹಾಕಿ ಲಿಂಗಾಯತ ಇತಿಹಾಸದ ಬಗ್ಗೆ ಮಾತನಾಡಿದ್ದಾರೆ ಹಾಗೂ. ಮೀಡಿಯಾ ಯಾವಾಗಲೂ ಸಾಕ್ಷಿ ಸಮೇತ ವಿಚಾರಗಳನ್ನು ಇಟ್ಟು ಕೊಂಡು ಮಾತನಾಡಿರುವುದನ್ನು ತಿಳಿಸಿದೆ ಸಭೆಗೆ ಬಾರಧವರಿಗೆ ವಿಚಾರ ಗೊತ್ತಾಗುತ್ತದೆ ಮತ್ತು ಮುಂದಿನ ಸಭೆಯಲ್ಲಿ ಭಾಗವಹಿಸಬೇಕೆಂಬ ನಿಲುವು ಬರುತ್ತದೆ ಶರಣುಶರಣಾಥಿ೯ಗಳು

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ says:

    ಲಿಂಗಾಯತ ಸಮುದಾಯವನ್ನು ಒಡೆಯಲು ಆರ್ ಎಸ್ ಎಸ್ ಮನುವಾದಿಗಳು ಹಲವು ಕುತಂತ್ರಗಳನು ನಡೆಸುತ್ತಲೇಯಿರುತ್ತಾರೆ. ನಮ್ಮ ಪ್ರಹಾರ ಬಲವಾಗಿ ಇದ್ದರೆ, ಅವರ ಈ ಬೂಟಾಟೀಕೆಯನ್ನು ನಿಲ್ಲಿಸಿ ಬುದ್ದಿ ಕಲಿಸುವುದೇನು ತಡವಾಗದು

Leave a Reply

Your email address will not be published. Required fields are marked *