ಬಸವ ಸಂಸ್ಕೃತಿ ಅಭಿಯಾನ: ಇಂದು ಚರ್ಚೆಗೆ ಡಾ. ಸಂಗಮೇಶ ಕಲಹಾಳ, ಮಡಿವಾಳಪ್ಪ ಸಂಗೊಳ್ಳಿ

ಬಸವ ಮೀಡಿಯಾ
ಬಸವ ಮೀಡಿಯಾ

ಸೆಪ್ಟೆಂಬರ್ ಅಭಿಯಾನ ಪ್ರತಿಯೊಬ್ಬ ಬಸವ ಅನುಯಾಯಿಯ ವೈಯಕ್ತಿಕ ಮತ್ತು ಸಾಮೂಹಿಕ ಚಳುವಳಿಯಾಗಲಿ.

ಬೆಂಗಳೂರು

ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಮನೆ-ಮನಗಳಿಗೆ ಮುಟ್ಟಿಸಲು ಬಸವ ರೇಡಿಯೋ ಸರಣಿ ಚರ್ಚೆಗಳನ್ನು ನಡೆಸುತ್ತಿದೆ.

ಅಭಿಯಾನದ ಪೂರ್ವಸಿದ್ಧತೆ, ಚಟುವಟಿಕೆಗಳು, ಒಟ್ಟಾರೆ ರೂಪುರೇಷೆಯ ಮೇಲೆ ಬಸವ ತತ್ವದ ಸ್ವಾಮೀಜಿಗಳ, ಹೋರಾಟಗಾರರ, ಚಿಂತಕರ ಮತ್ತು ಸಂಘಟನೆಗಳ ಕಾರ್ಯಕರ್ತರ ಅಭಿಪ್ರಾಯವನ್ನು ಮುನ್ನೆಲೆಗೆ ತರುವ ಪ್ರಯತ್ನವಿದು.

ಇತ್ತೀಚಿನ ವರ್ಷಗಳಲ್ಲಿ ನಾಡಿನಲ್ಲಿ ಬಸವ ಚಳುವಳಿ ಮತ್ತು ಪಟ್ಟಭದ್ರ ಶಕ್ತಿಗಳಿಂದ ಅದಕ್ಕೆ ವಿರೋಧ ಕೂಡ ತೀವ್ರವಾಗುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಬಸವ ಸಂಘಟನೆಗಳೂ ಸೇರಿ ಅಭಿಯಾನವನ್ನು ಒಂದು ತಿಂಗಳು ಪೂರ್ತಿ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಸಲು ಮುಂದಾಗಿರುವುದು ಮಹತ್ವದ ಬೆಳವಣಿಗೆ.

ಬಸವಾದಿ ಶರಣರ ವಿಶಿಷ್ಟ ತತ್ವ-ಸಿದ್ದಾಂತ, ಇತಿಹಾಸ, ಪರಂಪರೆ, ಅಧ್ಯಾತ್ಮ, ವೈಚಾರಿಕತೆ, ಸಾಮಾಜಿಕ ಕಳಕಳಿಗಳನ್ನು ಸಮಾಜದಲ್ಲಿ ಹರಡಲು ಇದೊಂದು ಅಪರೂಪದ ಅವಕಾಶ.

ಆದರೆ ಪ್ರತಿಯೊಬ್ಬರೂ ಹೆಗಲು ಕೊಟ್ಟರೆ ಮಾತ್ರ ಅಭಿಯಾನ ಗುರಿ ಮುಟ್ಟಲು ಸಾಧ್ಯ. ಇದು ಕೆಲವು ಸಂಘಟನೆಗಳಿಗೆ ಸೀಮಿತವಾದ ಕಾರ್ಯಕ್ರಮವಾಗದೆ ಎಲ್ಲಾ ಬಸವ ಅನುಯಾಯಿಗಳ ವೈಯಕ್ತಿಕ ಮತ್ತು ಸಾಮೂಹಿಕ ಚಳುವಳಿಯಾಗಬೇಕು.

900 ವರ್ಷಗಳಿಂದ ಬಸವ ತತ್ವವನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನವನ್ನು ಸಂಪೂರ್ಣವಾಗಿ ನಿಲ್ಲಿಸಿ, ಮತ್ತಾರು ಇಂತಹ ಆಲೋಚನೆಗಳನ್ನೂ ಮಾಡದಂತೆ ನೋಡಿಕೊಳ್ಳುವ ಅವಕಾಶ, ಸಾಮರ್ಥ್ಯ, ಜವಾಬ್ದಾರಿ ನಮ್ಮ ಪೀಳಿಗೆಗಿದೆ.

ಇಂದು ರಾತ್ರಿ ಬಸವ ರೇಡಿಯೋ ಚರ್ಚೆ:

ವಿಷಯ: ಬಸವ ಸಂಸ್ಕೃತಿ ಅಭಿಯಾನ

ಸೆಪ್ಟೆಂಬರ್ ಅಭಿಯಾನವನ್ನು ಮನೆ-ಮನ ಮುಟ್ಟಿಸಲು ನಮ್ಮ ಸಲಹೆ

ಇಂದಿನ ಅತಿಥಿಗಳು

೧) ಡಾ. ಸಂಗಮೇಶ ಕಲಹಾಳ, ಕೊಪ್ಪಳ
ಶರಣ ತತ್ವ ಚಿಂತಕರು

೨) ಮಡಿವಾಳಪ್ಪ ಎಂ. ಸಂಗೊಳ್ಳಿ, ಸವದತ್ತಿ, ಬೆಳಗಾವಿ
ವಚನ ಮೂರ್ತಿಗಳು, ಶರಣ ತತ್ವ ಚಿಂತಕರು

ದಿನಾಂಕ : ಎಪ್ರಿಲ್ 07, 2025

ಸಮಯ : ರಾತ್ರಿ 8:30 – 9:30

ಪ್ರಾಸ್ತಾವಿಕ ಹಾಗೂ ಸಮಾರೋಪ ನುಡಿ,
ಡಾ. ಹೆಚ್. ಎಂ. ಸೋಮಶೇಖರಪ್ಪ.

ಕಾರ್ಯಕ್ರಮ ನಿರ್ವಹಣೆ: ಕುಮಾರಣ್ಣ ಪಾಟೀಲ.

ಶರಣು ಸಮರ್ಪಣೆ : ಜಿ. ಎಮ್. ನಾಗರತ್ನ

ದಯವಿಟ್ಟು ಗಮನಿಸಿ:

ಅತಿಥಿಗಳು 20+ 20 ನಿಮಿಷ ಮಾತನಾಡಲಿದ್ದಾರೆ.

ನಂತರ 15 ನಿಮಿಷ ಮುಕ್ತ ವೇದಿಕೆ

(ಆಸಕ್ತರಿಗೆ ಮಾತನಾಡಲು ಅವಕಾಶ)

ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದಯವಿಟ್ಟು ಎಲ್ಲರೂ 8:30 ಕ್ಕೆ ಈ ಕೆಳಗಿನ ಲಿಂಕ್‌ಗೆ ಜಾಯಿನ್ ಆಗಿ.
https://meet.google.com/trh-uvxh-efx

ಶರಣು ಶರಣಾರ್ಥಿಗಳು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *