ಬೆಳಗಾವಿ
ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಜೇಡರ ದಾಸಿಮಯ್ಯ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.
ಶರಣ ಮಲ್ಲಿಕಾಜ೯ನ ಕೋಳಿ ಅವರು ಉಪನ್ಯಾಸ ನೀಡುತ್ತಾ, ವಚನಗಳು ವೈಜ್ಞಾನಿಕವಾಗಿ ಇರುತ್ತವೆ. ಮುಚ್ಚಿಟ್ಟ ಜ್ಞಾನ ಕೊಳ್ಳೆಯುತ್ತದೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ದೃಡ ಸಂಕಲ್ಪ ಇರಬೇಕು. ನಡೆ ನುಡಿ ಒಂದೇ ಇರಬೇಕು. ದುಗ್ಗಳೆ ದಾಸಿಮಯ್ಯ ಸತಿಪತಿ ಆದಶ೯ವಾಗಿದ್ದರು. ಅವರು ನಡೆ ನುಡಿ ಒಂದಾಗಿದ್ದವು. ತವನಿಧಿ ಎಂದರೆ ಅಕ್ಷಯಪಾತ್ರೆ, ದುಗ್ಗಳೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು ಎಂದರು.
ಪ್ರಾರಂಭದಲ್ಲಿ ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು, ಸುರೇಶ ನರಗುಂದ, ಬಿ.ಪಿ. ಜೇವಣಿ, ಶ್ರೀದೇವಿ ನರಗುಂದ, ವಿ ಕೆ ಪಾಟೀಲ, ಆನಂದ ಕಕಿ೯, ಸುನೀಲ ಸಾಣಿಕೊಪ್ಪ, ಮಹಾದೇವಿ ಅರಳಿ, ಜಯಶ್ರೀ ಚಾವಲಗಿ, ಶಂಕರ ಗುಡಸ ವಚನ ವಿಶ್ಲೇಷಣೆ ಮಾಡಿದರು.
ಬಸವರಾಜ ಬಿಜ್ಜರಗಿ ದಾಸೋಹ ಸೇವೆಗೈದರು, ಸಂಗಮೇಶ ಅರಳಿ ನಿರೂಪಿಸಿದರು.
ಅನೀಲ ರಘುಶೆಟ್ಟಿ, ಮಹದೇವ ಕೆ೦ಪಿಗೌಡರ, ಬಸವರಾಜ ಗುರನಗೌಡರ, ಶೇಖರ ವಾಲಿಇಟಗಿ, ವಿರೂಪಾಕ್ಷಿ ದೊಡಮನಿ, ಸದಾಶಿವ ದೇವರಮನಿ, ಮಹಾಂತೇಶ ಮೆಣಸಿನಕಾಯಿ, ಲಲಿತಾ ವಾಲಿ ಇಟಗಿ, ವಿದ್ಯಾ ಕಕಿ೯, ಶಾಂತಾ ಕ೦ಬಿ, ಸುನ೦ದಾ ಕೆ೦ಪಿಗೌಡರ, ಪ್ರಸಾದ ಹೀರೇಮಠ, ಸೋಮಶೇಖರ ಕತ್ತಿ ಉಪಸ್ಥಿತರಿದ್ದರು.
ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ನಿಜವಾದ ಅನುಭವ ಮಂಟಪ ಇದಾಗಿದೆ ಚಚೆ೯ಗೆ ಅವಕಾಶ ಉಂಟು ಎಂದು ಹೇಳಿದರು. ಉಪ್ಪಿನಬೇಟಗೇರಿ ಮಕ್ಕಳು ಮಲ್ಲಕಂಭ ಹಗ್ಗದ ಜೊತೆ ಮಾಡಿ ತೋರಿಸಿದರು. ಸುರೇಶ ನರಗುಂದ ವಂದಿಸಿದರು.