(ಬಸವ ಜಯಂತಿಯನ್ನು ರೇಣುಕಾ ಜಯಂತಿಯ ಜೊತೆ ಆಚರಿಸಬೇಕೆಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಕಳಿಸಿರುವ ಸುತ್ತೋಲೆಗೆ ಪಾಂಡೋಮಟ್ಟಿಯ ಪೂಜ್ಯ ಗುರುಬಸವ ಸ್ವಾಮೀಜಿಯವರ ಪ್ರತಿಕ್ರಿಯೆ.)
ಪಾಂಡೋಮಟ್ಟಿ
ಸಮಾಜ ಸುಧಾರಕರು, ಲಿಂಗವಂತ ಧರ್ಮದ ಸ್ಥಾಪಕರು ಆಗಿರುವ, ಜಗಜ್ಯೋತಿ, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯ ದಿನ ಬೇರೆ ಯಾವುದೇ ಜಯಂತಿಯನ್ನು ಆಚರಿಸಬಾರದು.
ಜೊತೆಗೆ ಬಸವಣ್ಣನವರ ಮತ್ತು ಶರಣರ ಫೋಟೋಗಳನ್ನು ಬಿಟ್ಟರೆ ಯಾವ ಭಾವಚಿತ್ರವೂ ಸಹ ಇರಬಾರದು. ಇತ್ತೀಚಿಗೆ ರೇಣುಕ ಜಯಂತಿ, ಆಚರಣೆ ಮಾಡಲಿಕ್ಕೆ ಸರಕಾರ ಬೇರೆ ದಿನಾಂಕವನ್ನು ನಿಗದಿಪಡಿಸಿದೆ, ಹಾಗಾಗಿ ಅಂದು ಆ ಜಯಂತಿಯನ್ನು ಮಾಡಲಿ ನಮ್ಮ ಅಭ್ಯಂತರವಿಲ್ಲ.
ಬಸವ ಜಯಂತಿಯ ಜೊತೆಗೆ ರೇಣುಕರ ಜಯಂತಿ ಮತ್ತು ಅವರ ಫೋಟೋ ಇದರಲ್ಲಿ ಬಳಸಿದರೆ ಧರ್ಮಬಾಹಿರವಾಗುವದು.
ಹೀಗಾಗಿ ಬಸವ ಜಯಂತಿ ಇಡೀ ನಾಡಿನ ಮಾನವ ಜನಾಂಗದ ಪ್ರತೀಕವಾಗಿರುವ ಹಿನ್ನೆಲೆಯಾಗಿ, ಜಾತ್ಯತೀತವಾಗಿ ಬದುಕಿ ನಂತರ ಅದೇ ರೀತಿ ಸುಧಾರಣೆಯನ್ನು ಮಾಡಿದ ಮಹಾನ್ ಮಾನವತಾವಾದಿ, ಅಸ್ಪೃಶ್ಯರ ಆಶಾಕಿರಣ, ದಲಿತರ ಧ್ವನಿ, ಮಹಿಳೆಯರಿಗೆ ಮನ್ನಣೆಯನ್ನು ಕೊಟ್ಟಂತ ಮಹಾನುಭಾವರು. ಅಂಥವರಿಗೆ ಗೌರವ ಕೊಡುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ.
ಈ ವರ್ಷದ ಬಸವ ಜಯಂತಿಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯದ ಅಧ್ಯಕ್ಷರಾದ ಶರಣ ಶಂಕರ್ ಬಿದರಿ ಅವರು ರೇಣುಕಾಚಾರ್ಯರ ಜಯಂತಿ ಸೇರಿಸಿ ಆಚರಣೆ ಮಾಡಬೇಕೆಂದು ಸುತ್ತೋಲೆ ಹೊರಡಿಸಿರುವುದನ್ನು ಪಾಂಡೋಮಟ್ಟಿ ಶ್ರೀಗಳು ಖಂಡನೆ ಮಾಡಿರುವುದು ಬಸವ ತತ್ವದ ಅನುಯಾಯಿಗಳಿಗೆ ಸಂತೋಷ್ ತಂದಿದೆ.
ಪಾಂಡೋಮಟ್ಟಿ ಶ್ರೀ ಗಳು ಏಳಿರುವ ಹಾಗೆ ಬಸವ ಜಯಂತಿ ದಿನ ಬಸವ ಪುತ್ತಳಿ ಒಂದನು ಬಿಟ್ಟು ಬೇರೆ ಯಾರ ಜಯಂತಿಯ ಆಚರಣೆ ಆಗಲಿ ಪುತ್ತಳಿ ಆಗಲಿ ಇಡುವ ಆಚರಣೆ ಮಾಡಬಾರದು ಎನ್ನುವುದು ನನ್ನ ಅಭಿಪ್ರಾಯ .. ಶರಣು ಬಂದುಗಳೇ…
ಬಸವ ಜಯಂತಿ ಅಂದ್ರೆ ಅದು ಆ ದಿನದ ಶುಭ ಮುಹೂರ್ತ ಮತ್ತು ಆ ದಿನದಿಂದಲೆ ನಮ್ಮ ರೈತಾಪಿ ಜನರು ಕಾಯಕದೊಂದಿಗೆ ಕೃಷಿ ಆರಂಬಿಸುವರು. ಬಸವಣ್ಣನವರು ಹಾಕಿದ ಹೆಜ್ಜೆಯಲಿ ನಡೆಯೋಣ ಅವರ ಆದರ್ಶಗಳನ್ನು ಪಾಲಿಸೋಣ.
ಜೈ ಬಸವ ಜಯಂತಿ. ಯಾವುದೇ ಕಾರಣಕ್ಕೂ ಬಸವ ಜಯಂತಿಯೊಂದಿಗೆ ಬೇರೆಯವರ ಫೋಟೋಗಳನ್ನಾಗಲಿ, ಆಚರಣೆಗಳಾಗಲಿ ಹೋಲಿಕೆ ಮಾಡಬೇಡಿ ಬಸವಣ್ಣನವರಿಗೆ ಸರಿ ಸಮಾನರಾದವರು ಯಾರೂ ಇಲ್ಲ. ಇದು ನನ್ನ ಮನವಿ.
ಪಾಂಡೋಮಟ್ಟಿಡಾ 11 ಗುರು ಬಸವ ಶ್ರೀಗಳ ಹೇಳಿಕೆ ಸಮರ್ಪಕವಾಗಿದೆ ನಮ್ಮ ಮನೆಯಲ್ಲಿ ನಡೆಯವ ನಮ್ಮ ಹಿರಿಯರ ಜಯಂತಿಯಲ್ಲಿ ಅನ್ಯರ ನೇಕೆ ಸೇರಿಸಬೇಕು ಶಂಕರ ಬಿದರಿಯವರ ಹೇಳಿಕ ಅಸಮರ್ಪಕವಾಗಿದೆ