ಗಜೇಂದ್ರಗಡ
ವೈರಾಗ್ಯನಿಧಿ, ಮಹಾಶರಣೆ ಅಕ್ಕಮಹಾದೇವಿಯವರ ಜಯಂತಿಯನ್ನು ಕುಷ್ಟಗಿ ರಸ್ತೆಯಲ್ಲಿರುವ ಅಕ್ಕಮಹಾದೇವಿಯವರ ವೃತ್ತದಲ್ಲಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮತ್ತು ಬಸವಾದಿ ಶರಣರ ವಚನಗಳನ್ನು ಹೇಳಿ, ಸಾಮೂಹಿಕವಾಗಿ ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಜಯಘೋಷ ಹಾಕಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಡಾ. ಬಿ.ವಿ. ಕಂಬಳ್ಯಾಳ, ಉಪಾಧ್ಯಕ್ಷರಾದ ದೊಡ್ಡಬಸವರಾಜ ಅಂಗಡಿ, ಕಾರ್ಯದರ್ಶಿ ಬಿ.ಎಸ್. ಶೀಲವಂತರ, ಪ್ರಮುಖರಾದ ಮಹಾಂತೇಶ ಅರಳಿ, ಎಸ್. ಎಸ್. ವಾಲಿ, ಬಸವರಾಜ ವಾಲಿ, ಬಾಬಣ್ಣ ಕೋಟಿ, ಬಸವರಾಜ ಕೊಟಗಿ, ಮುತ್ತಣ್ಣ ಮೆಣಸಿನಕಾಯಿ, ಅಪ್ಪು ಮತ್ತಿಕಟ್ಟಿ, ಸೋಮಶೇಖರ ಹೊನವಾಡ, ಮಂಜುನಾಥ ಅಂಗಡಿ, ವಿಜಯಕುಮಾರ ನೂಲ್ವಿ, ಮಹಾಂತೇಶ ಮಳಗಿ, ಬಸವರಾಜ ಅಂಗಡಿ, ನಾಗರಾಜ ಹೊಸಂಗಡಿ, ವೀರೇಶ ನೀಡಶೇಶಿ, ಬಸೆಟ್ಟೆಪ್ಪ ಶಿರೂರು, ಶೇಖಪ್ಪ ಅಂಗಡಿ, ಶರಣಪ್ಪ ಪಟ್ಟೇದ, ಬಸವರಾಜ ಚೋಳಿನ, ಹುಚ್ಚಪ್ಪ ಹಾವೇರಿ, ಪ್ರಕಾಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.