ಆಳಂದ
ಸಾಮಾಜಿಕ ಸಮಾನತೆ ಹಾಗೂ ದೇಶದ ಪ್ರಗತಿಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ಧುತ್ತರಗಾಂವ-ಆಳಂದ ತೋಂಟದಾರ್ಯ ಅನುಭವ ಮಂಟಪದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾಡು, ದೇಶಕ್ಕಾಗಿ ಶ್ರಮಿಸಿದ ಮಹಾಪುರುಷರನ್ನು ಯಾವುದೇ ಒಂದು ಜಾತಿ, ಕುಲಕ್ಕೆ ಸೀಮಿತ ಮಾಡದೆ ಅವರ ಆದರ್ಶ ವಿಚಾರಗಳು ಜೀವನದಲ್ಲಿ ಮುನ್ನಡೆಸಿಕೊಂಡು ಹೋಗಬೇಕು, ಆಗ ಮಾತ್ರ ಜಯಂತಿ ಆಚರಣೆಗಳು ಸಾರ್ಥಕತೆ ಆಗುತ್ತವೆ ಎಂದರು.

ರಾಜ್ಯ ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ. ಆರ್. ಪಾಟೀಲ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ ಆಶಯಗಳು ಈಡೇರಿದಾಗ ಮಾತ್ರ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪಲು ಸಾಧ್ಯ. ಅಂಬೇಡ್ಕರ ದೇಶ ವಿದೇಶದಲ್ಲಿಯೂ ಅವರ ಹೆಸರು ಅಜರಾಮರವಾಗಿದೆ, ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಜಿಲ್ಲಾ ಪಂ. ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಉಪಾಧ್ಯಕ್ಷೆ ಕವಿತಾ ಸಂಜಯ ನಾಯಕ, ಸದಸ್ಯ ಲಕ್ಷ್ಮಣ ಝಳಕಿ, ಶಿವಪುತ್ರ ನಡಗೇರಿ, ದೋಂಡಿಬಾ ಸಾಳುಂಕೆ, ಅಧಿಕಾರಗಳಾದ ಮಾನಪ್ಪ ಕಟ್ಟಿಮನಿ, ಸಂಗಮೇಶ ಪನಶೆಟ್ಟಿ, ಗೋಪಿ ಬಿ.ಆರ್, ಶ್ರೀಕಾಂತ ಮೇಂಗಜಿ, ಶರಣಗೌಡ ಪಾಟೀಲ, ಶರಣಬಸಪ್ಪ ಪರಮೇಶ್ವರ, ಪ್ರಭು ಮಡ್ಡಿತೋಟ, ಹೃಷಿಕೇಶದಂತಕಾಳೆ, ಡಾ. ಯಲ್ಲಪ್ಪ ಇಂಗಳೆ, ಅಣ್ಣಪ್ಪ ಹಾದಿಮನಿ, ಮುಖಂಡ ದಯಾನಂದ ಶೇರಿಕಾರ, ಪಾಂಡುರಂಗ ಮೊದಲೆ, ಬಸಲಿಂಗಪ್ಪ ಗಾಯಕವಾಡ, ಬಾಬುರಾವ ಮಡ್ಡೆ, ಅಂಬಾರಾಯ ಚಲಗೇರಿ, ಮಹದೇವ ಮೋಘಾ, ಮಲ್ಲಿಕಾರ್ಜುನ ಬೋಳನಿ, ಚನ್ನವೀರ ಕಾಳಶಿಂಗೆ, ಶರಣು ಕವಲಗಾ, ಮಹಾದೇವ ಜಿಡ್ಡೆ ಇದ್ದರು.
ತಹಸೀಲ್ದಾರ್ ಅಣ್ಣಾರಾವ ಪಾಟೀಲ ಸ್ವಾಗತಿಸಿದರು. ಚಂದ್ರಕಾಂತ ಬಬಲಾದಕರ್ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕಿ ವಿಜಯಲಕ್ಷ್ಮಿ ಹೋಳ್ಕರ್ ವಂದಿಸಿದರು.