ಶಂಕರ್ ಬಿದರಿಯವರೇ,
ಈ ಜಗತ್ತಿನಲ್ಲಿ ಮೊದಲು ಲಿಂಗಾಯತ ಎಂದು ಮಾತ್ರ ಇತ್ತು. ಆಗ ಎಲ್ಲರೂ ಒಗ್ಗಟ್ಟಾಗಿಯೇ ಇದ್ದರು.
ಯಾವತ್ತು ಹಾನಗಲ್ಲ ಕುಮಾರಸ್ವಾಮಿಯವರು ಪಟ್ಟಾಧಿಕಾರ ಸ್ವೀಕಾರ ಮಾಡಿ ಶಿವಯೋಗ ಮಂದಿರ ಸ್ಥಾಪನೆ ಆಯಿತೋ ಅಂದು ವೀರಶೈವ ಪದ ಈ ಜಗತ್ತಿನಲ್ಲಿ ಹುಟ್ಟಿತು. ಹಾನಗಲ್ಲ ಕುಮಾರ ಸ್ವಾಮಿಯವರು ಒಂದುಗೂಡಿಸಿದವರಲ್ಲ ಒಡೆದುಹಾಕಿದವರು, ನಿಮಗೆ ಚಿಂತನೆ ಮಾಡುವ ಶಕ್ತಿ ಇದ್ದರೆ ದಯವಿಟ್ಟು ಚಿಂತನೆ ಮಾಡಿ.
ಸಮಾಜದ ಒಳಿತು ನಿಮಗೆ ನಿಜವಾಗಿಯೂ ಬೇಕಾಗಿದ್ದರೆ ನೀವು ಲಿಂಗಾಯತ ಎಂದು ಒಪ್ಪಿಕೊಂಡು, ಗುರು ಬಸವಣ್ಣನವರನ್ನು ಧರ್ಮಗುರು ಎಂದು ಹೇಳಿಕೊಂಡು ಧರ್ಮದ ಒಗ್ಗಟ್ಟನ್ನು ಕಾಪಾಡಬೇಕಿತ್ತು. ಅದಿಲ್ಲದ ಕಾರಣ ಹೊಸ ಹೊಸ ಗೊಂದಲಗಳನ್ನು ಸೃಷ್ಟಿ ಮಾಡುತ್ತ ಹೋಗುತ್ತಿದ್ದೀರಿ.
ಬಿದರಿಯವರೇ ಒಂದಾನೊಂದು ದಿನ ಬಸವಣ್ಣನವರ ಕಮಾನು ಕೆಳಗೆ ನಾವು ಹಾಯುವುದಿಲ್ಲ. ಬಸವಣ್ಣನವರು ಭಕ್ತ, ನಾವು ಜಗದ್ಗುರುಗಳು ಎಂದು ಮೆರೆದವರು ನಿಮ್ಮ ಪಂಚಾಚಾರ್ಯರು. ಇಂದು ಲಿಂಗಾಯತದ ಜೊತೆಯಲ್ಲಿ ವೀರಶೈವ ತಳಕು ಹಾಕುವುದಲ್ಲದೆ ಈಗ ಗುರು ಬಸವಣ್ಣನವರ ಜೊತೆಯಲ್ಲಿ ರೇಣುಕನ ಜಯಂತಿಯನ್ನು ಮಾಡಬೇಕೆಂದು ಹೊರಟಿರುವುದು ಸರಿಯೇ? ಇದು ಸಾಧ್ಯವಿಲ್ಲ.
ನಿಮ್ಮ ರೇಣುಕರ ತಂದೆ – ತಾಯಿ ಯಾರು ಹೇಳಿ? ನಿಮ್ಮ ರೇಣುಕರು ಹುಟ್ಟಿದ ಸ್ಥಾನ ಯಾವುದು ಹೇಳಿ? ನಿಮ್ಮ ರೇಣುಕರು ಹುಟ್ಟಿದ ದಿನಾಂಕ ಹೇಳಿ? ರೇಣುಕರ ಇತಿಹಾಸ ಹೇಳಿ? ಅವರು ಈ ಜಗತ್ತಿಗೆ ಕೊಟ್ಟಿರುವ ಸಂದೇಶ ಹೇಳಿ?
ರೇಣುಕರು ಈ ಜಗತ್ತಿಗೆ ಸಮಾನತೆ ಕೊಟ್ಟಿದ್ದಾರೆ ಎಂದು ಹೇಳಿದ್ದಿರಾ, ಅದು ಹೇಗೆ ಸಮಾನತೆ ಕೊಟ್ಟರು? ಇಂದಿನವರೆಗೂ ಸಮಾನತೆಯ ಕುರುಹಾಗಿ ಬೇರೆ ಜಾತಿಯವರನ್ನು ಪಂಚಪೀಠಗಳಲ್ಲಿ ಒಂದು ಪೀಠಕ್ಕಾದರೂ ಪೀಠಾಧಿಕಾರಿ ಮಾಡಿದ್ದೀರಾ? ಹೇಳಿ?
ಯಾವ ರೀತಿಯಿಂದ ನೀವು ಬಸವಣ್ಣನವರಿಗೆ ಹತ್ತಿರದವರು ಹೇಳಿ? ಬಸವಣ್ಣನವರು ಧರ್ಮಗುರುವೇ ಅಲ್ಲ ಎಂದವರ ಜೊತೆಯಲ್ಲಿ ನೀವು ಜಯಂತಿಯನ್ನು ಆಚರಿಸಲು ನಿಮಗೇನು ಯೋಗ್ಯತೆ ಇದೆ?
ನಿಮಗೆ ಶರಣು ಶರಣಾರ್ಥಿ.
ಸತ್ಯದೇವಿ ಮಾತಾಜಿ ನಿಜವಾಗಲೂ ತಮ್ಮ ಸರಳವಾದ ಭಾಷೆಯಲ್ಲಿ ಸಮಾನತೆ ಬಗ್ಗೆ, ಹಾಗೂ ಒಮ್ಮತದ ಬಗ್ಗೆ ಯಾವ ಭೇದವಿಲ್ಲದೆ ಎಲ್ಲರೂ ಒಂದೇ ಎಂದು ಪರಿಗಣಿಸಿದ್ದಾರೆ. ಆದರೆ ವೀರಶೈವರು ಯಾವುದಾದ್ರೂ ಒಂದು ಕ್ಯಾತೆ ತೆಗೆಯುತ್ತಿದ್ದಾರೆ. ಬಸವ ಗುರುವನ್ನು ಒಪ್ಪಿಕೊಂಡು, ಅಪ್ಪಿಕೊಂಡು, ಐದು ಪೀಠದವರು. ವಿಲೀನವಾಗಬೇಕು. ಗ್ರಾಮೀಣ ಬ್ಯಾಂಕುಗಳು, ಹೇಗೆ ಕಾಲಕಾಲಕ್ಕೆ ವಿಲೀನ ವಾಗುತ್ತಿವೆ. ನೋಡಿ ಕಲಿತುಕೊಳ್ಳಲಿ.ದೇವರು ಅವರಿಗೆ ಒಳ್ಳೆಯ ಬುದ್ದಿ ಕಲಿಸಲು ಮುಂದಾಗಲಿ.