ಶನಿವಾರ ಬೆಳಿಗ್ಗೆ 9.00 ಗಂಟೆಗೆ ಬೀದರಿನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ರ್ಯಾಲಿ
ಬೀದರ್
ಬಸವ ಜಯಂತಿಯ ದಿನದಂದು ರೇಣುಕಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಂಡ ಅಖಿಲ ಭಾರತ ವೀರಶೈವ ಮಹಾಸಭೆಯ ಕ್ರಮವನ್ನು ಖಂಡಿಸಿ ಬಸವ ಪರ ಸಂಘಟನೆಗಳಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಲಿದೆ.
ಗುರುವಾರ ಇಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭೆಯ ವಚನ ಮಂಥನ ಮಾಸಿಕ ಚಿಂತನ ಕಾರ್ಯಕ್ರಮದಲ್ಲಿ ಸರ್ವಾನುಮತದಿಂದ ಪ್ರತಿಭಟಿಸಲು ತಿರ್ಮಾನಿಸಲಾಯಿತು ಎಂದು ಜೆಎಲ್ಎಂ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.

ಎಪ್ರಿಲ್ 26 ಬೆಳಿಗ್ಗೆ 9.00 ಗಂಟೆಗೆ ಬೀದರ ಬಸವೇಶ್ವರ ವೃತ್ತದಲ್ಲಿ ಹಲವಾರು ಪೂಜ್ಯರ ಹಾಗು ಬಸವಪರ ಸಂಘಟನೆಗಳ ಪ್ರಮುಖರ ನೆತೃತ್ವದಲ್ಲಿ ಪ್ರತಿಭಟನಾ ರ್ಯಾಲಿಯ ಮುಖಾಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿಪತ್ರ ಸಲ್ಲಿಸಲು ತಿರ್ಮಾನಿಸಲಾಯಿತು.
ಈ ರ್ಯಾಲಿಯ ನಂತರ ಪತ್ರಿಕಾ ಗೋಷ್ಠಿಯನ್ನು ನಡೆಸಿ ಹೇಳಿಕೆ ನೀಡಲು ತಿರ್ಮಾನಿಸಲಾಯಿತು.
ಉತ್ತಮವಾದ ಕಾರ್ಯಕ್ರಮ ಶರಣು ಶರಣಾರ್ಥಿಗಳು 🙏🙏