ಬಸವ ಜಯಂತಿ: ಸೊಲ್ಲಾಪುರದಲ್ಲಿ ಉಪನ್ಯಾಸ, ರೂಪಕ, ಗೌರವ ಸಮಾರಂಭ

ಸೊಲ್ಲಾಪುರ

ಬಸವಣ್ಣನವರ ೮೯೨ನೇ ಜಯಂತ್ಯುತ್ಸವದ ನಿಮಿತ್ತ ಬಸವೇಶ್ವರ ಮಹಾಮಂಡಳ ಸವೇರಾ ನಗರ ಸೈಫುಲ್, ಸೊಲ್ಲಾಪುರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸೊಲ್ಲಾಪುರ ಇವುಗಳ ಸಂಯುಕ್ತಾಶ್ರಯದಲ್ಲಿ ೨೦೨೫ರ ಮಂಗಳವಾರ, ಎಪ್ರಿಲ್೨೯ ಸಂಜೆ ೫.೩೦ಕ್ಕೆ ಬಸವೇಶ್ವರ ಹೊಟೆಲ್ ಪರಿಸರದಲ್ಲಿ ಉಪನ್ಯಾಸ, ರೂಪಕ ಹಾಗೂ ಜೀವಮಾನ ಗೌರವ ಸಮಾರಂಭ ನಡೆಯಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಸೊಲ್ಲಾಪುರ ಅಧ್ಯಕ್ಷ ಶಿವಾನಂದ ಗೋಗಾವ ಮತ್ತು ಬವೇಶ್ವರ ಮಂಡಳದ ಮುಖ್ಯಸ್ಥ ಚನ್ನಬಸವ ಗುರುಭೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೊಲ್ಲಾಪುರ ಶಿವಯೋಗಿ ಆಶ್ರಮದ ಪೂಜ್ಯ ಡಾ. ಶರಣಬಸವಲಿಂಗ ಶಿವಯೋಗಿಗಳ ದಿವ್ಯ ಸಾನ್ನಿಧ್ಯದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮಹಾರಾಷ್ಟ್ರ ರಾಜ್ಯ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತೂರೆ ಅಧ್ಯಕ್ಷತೆಯಲ್ಲಿ ಸೊಲ್ಲಾಪುರ ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಪ್ರೀತಮಕುಮಾರ ಯಾವಲ್ಕರ ಉದ್ಘಾಟಿಸುವರು.

ಡಾ. ಬಿ.ಬಿ. ಪೂಜಾರಿ ಕನ್ನಡದಲ್ಲಿ “ಸಾಂಸ್ಕೃತಿಕ ನಾಯಕ ಮಹಾತ್ಮ ಬಸವಣ್ಣ”, ಡಾ. ಭೀಮರಾವ ಪಾಟೀಲ ಲಾತೂರ ಮರಾಠಿಯಲ್ಲಿ ‘ಬಸವಣ್ಣಾಂಚ್ಯಾ ವಿಚಾರಾತೂನ ಸಾಮಾಜಿಕ ಏಕತಾ’ (ಬಸವಣ್ಣನವರ ಚಿಂತನೆಗಳಿಂದ ಸಾಮಾಜಿಕ ಐಕ್ಯತೆ) ವಿಷಯದ ಕುರಿತು ಉಪನ್ಯಾಸ ನೀಡುವರು.

ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಶಿವಶರಣಣ್ಣಾ ಪಾಟೀಲ, ಸೊಲ್ಲಾಪುರ ಎಂ.ಕೆ. ಫೌಂಡೇಶನ್ ಸಂಸ್ಥಾಪಕ ಮಹಾದೇವ ಕೋಗನೂರೆ, ಸೊಲ್ಲಾಪುರದ ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ. ಶರಣಬಸವ ಹಿರೇಮಠ, ಡಾ. ಬಸವರಾಜ ಬಗಲೆ, ಬಸವೇಶ್ವರ ಹೋಟೆಲ್ ಮಾಲೀಕ ಚನಬಸಪ್ಪ ಗುರುಭೆಟ್ಟಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರ ಯಾದವಾಡ, ಭೀಮ ಪ್ರತಿಷ್ಠಾನದ ಅಧ್ಯಕ್ಷ ವೀರೇಂದ್ರ ಹಿಂಗಮಿರೆ, ಸತೀಶ ಸ್ವಾಮಿ, ಮುಖ್ಯ ಅತಿಥಿಗಳಾಗಿರುವರು.

ಜೀವನಮಾನ ಗೌರವಕ್ಕೆ ಪಾತ್ರರಾದ ಈ ಕೆಳಗಿನ ಮಹನೀಯರಿಗೆ ಸತ್ಕಾರ ನಡೆಯಲಿದೆ.

ಐಟಿ ಇಂಜಿನಿಯರ್ ಸಿದ್ಧರಾಮ ಗುರಭೆಟ್ಟಿ, ಸರ್ಕಾರಿ ಪ್ರಥಮ ದರ್ಜೆ ಗುತ್ತಿಗೆದಾರ ಪರಮಾನಂದ ಅಲಗೊಂಡ ಪಾಟೀಲ, ನಿವೃತ್ತ ಶಿಕ್ಷಕರ ಅಧ್ಯಕ್ಷ ಶಿವಾನಂದ ಭರ್ಲೆ, ದಕ್ಷಿಣ ಸೊಲ್ಲಾಪುರದ ಯುವ ಮುಖಂಡ ಅಮರ ಪಾಟೀಲ, ಡ್ರೀಮ್ ಐಎಎಸ್ ಕೇಂದ್ರದ ಕಾಶಿನಾಥ ಭತಕುಣಕಿ, ಮಂಗಳವೇಡೆಯ ಸಮಾಜಸೇವಕ ತುಕಾರಾಮ ಕುದಳೆ, ಮಹಿಳಾ ಉದ್ಯಮಿ ಶಿವಲೀಲಾ ಗುಡ್ಡೋಡಗಿ, ವೈದ್ಯಕೀಯ ಪದವಿ ಪಡೆದ ಡಾ. ಭಾಗ್ಯಶ್ರೀ ಸೊಡ್ಡಗಿ, ಇಂದುಮತಿ ಹಿರೇಮಠ, ವಾಗದರಿಯ ಯುವ ಉದ್ಯಮಿ ಸಂತೋಷ ಹರಕಾರೆ ಮತ್ತು ಬಸವತತ್ವ ಪ್ರಸಾರಕರು ಗುರುಬಾಳ ಬಗಲೆ.

ಸಂಜೆ ೭:೩೦ಕ್ಕೆ ಜಾಲಿಮದ ಮಹಿಳಾ ಅಧ್ಯಕ್ಷೆ ರಾಜಶ್ರೀ ಥಳಂಗೆ ನೇತೃತ್ವದಲ್ಲಿ ಶಂಕರಲಿಂಗ ಮಹಿಳಾ ಮಂಡಳ ಹಾಗೂ ಜಾಲಿಮದ ಮಹಿಳಾ ಘಟಕದ ಮಹಿಳಾ ಸದಸ್ಯೆಯರಿಂದ ‘ಅನುಭವ ಮಂಟಪದಲ್ಲಿ ಅಕ್ಕ-ಅಲ್ಲಮರ ಸಂವಾದ’ ರೂಪಕದ ೧೦೦ನೇ ಪ್ರಯೋಗ ನಡೆಯಲಿದೆ. ರಾತ್ರಿ ೮ ಗಂಟೆಗೆ ಬಸವೇಶ್ವರ ಹೋಟೆಲ್ ವತಿಯಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಹಾಪ್ರಸಾದ ದಾಸೋಹ ಏರ್ಪಡಿಸಲಾಗಿದೆ.

ಏಪ್ರಿಲ್ ೩೦ ರಂದು ಬಸವ ಜಯಂತಿ ನಿಮಿತ್ತ ವಿಜಯಪುರ ರಸ್ತೆಯ ಇಂಚಗೇರಿ ಮಠದಿಂದ ಸವೇರನಗರದವರೆಗೆ ವಾದ್ಯಮೇಳದೊಂದಿಗೆ ಬಸವೇಶ್ವರರ ಭವ್ಯ ಮೆರವಣಿಗೆ ನಡೆಯಲಿದೆ. ಸೊಲ್ಲಾಪುರ ಬಸವ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶೈಲಮಾಮ ಹತ್ತೂರೆ ಮೆರವಣಿಗೆ ಉದ್ಘಾಟಿಸುವರು. ಶ್ರಿಶೈಲ ಪಾಟೀಲ, ಲಕ್ಷ್ಮಣ ಚಲಗೇರಿ ಮುಖ್ಯ ಅತಿಥಿಗಳಾಗಿರುವರು.
ಬಸವ ಭಕ್ತರು ಹಾಗೂ ಲಿಂಗಾಯತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಬಸವೇಶ್ವರ ಹೋಟೆಲ್ ಮಾಲೀಕ ಚನ್ನಬಸಪ್ಪ ಗುರುಭೆಟ್ಟಿ ಕೋರಿದ್ದಾರೆ.

ಜಾಲಿಮದ ಯುವಾಧ್ಯಕ್ಷ ಶಿವರಾಜ ಕೊಟಗಿ, ಮಲ್ಲಿನಾಥ ಥಳಂಗೆ, ಮೀನಾಕ್ಷಿ ಬಾಗಲಕೋಟೆ, ಮೀನಾಕ್ಷಿ ಥಳಂಗೆ, ಕವಿತಾ ಹಾಲಕುಡೆ ಸುದ್ದಿಗೋಷ್ಠಿಯಲ್ಲಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *