ರಾಯಚೂರು
ಸಂಸದ ಬಿವೈ ರಾಘವೇಂದ್ರ ಅವರ ಮಗನ ಮದುವೆ ಆಮಂತ್ರಣ ನೀಡಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬ ಸಮೇತರಾಗಿ ಬುಧವಾರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದರು.
ರಾಯರ ದರ್ಶನ ಪಡೆದು, ವೃಂದಾವನ, ಮಂಚಾಲಮ್ಮ ದೇವಿಗೆ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರನ್ನು ಭೇಟಿಯಾಗಿ ಮೊಮ್ಮಗನ ಮದುವೆ ಆಹ್ವಾನಿಸಿದರು. ಈ ವೇಳೆ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಈ ಹಿಂದೆಯೂ ಯಡಿಯೂರಪ್ಪ ಅವರ ಸುಪುತ್ರ ಬಿವೈ ರಾಘವೇಂದ್ರ ಮಂತ್ರಾಲಯ ಮಠದ ಮೇಲಿರುವ ತಮ್ಮ ಕುಟುಂಬದ ಅಪಾರ ಭಕ್ತಿಯ ಬಗ್ಗೆ ಮಾತನಾಡಿದ್ದಾರೆ.