ಬೆಂಗಳೂರು
ಹಾಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಜನಗಣತಿಯಲ್ಲಿ ಬೇಡ ಜಂಗಮ, ಬುಡುಗ ಜಂಗಮ ಎಂದು ನಮೂದಿಸುವಂತೆ ವೀರಶೈವ-ಲಿಂಗಾಯತ ಸಮಾಜದವರು ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ, ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ (ಎಐಬಿಎಸ್ಪಿ) ಆರೋಪಿಸಿದೆ.
ಬೇಡ ಜಂಗಮ, ಬುಡುಗ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ತಡೆಗಟ್ಟಲು ಸರ್ಕಾರವು ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ, ಅಂಥವರಿಗೆ ಶಿಕ್ಷೆ ನೀಡಬೇಕು ಎಂದು ಪಕ್ಷದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.
ಹೊನ್ನಾಳಿಯ ರೇಣುಕಾಚಾರ್ಯರ ಅಣ್ಣ ದಾರುಕೇಶ್ವರಯ್ಯ ಮತ್ತು ಅವರ ಮಕ್ಕಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತು ಕಬಳಿಸಿದ್ದಾರೆ. ಪರಿಶಿಷ್ಟ ಜಾತಿಗೆ ಲಭ್ಯ ಇರುವ ಮೀಸಲಾತಿಯನ್ನು ಬೇಡ ಜಂಗಮ, ಬುಡುಗ ಜಂಗಮ ಹೆಸರಲ್ಲಿ ಕಬಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ,’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ತೆಲಂಗಾಣ, ಆಂಧ್ರ, ಮಹಾರಾಷ್ಟ್ರದ ಗಡಿಭಾಗದಲ್ಲಿ ಇರುವ ಬೇಡ ಜಂಗಮರು ಮತ್ತು ಬುಡುಗ ಜಂಗಮರು ಮಾಂಸಾಹಾರಿಗಳಾಗಿದ್ದು, ಕಣಿ ಹೇಳುವ, ಬೇಟೆಯಾಡುವ, ಭಿಕ್ಷಾಟನೆ ಕಾಯಕದಲ್ಲಿ ತೊಡಗಿದ್ದಾರೆ.
ಅವರ ಜನಸಂಖ್ಯೆ 2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ 54,873 ಇತ್ತು. ಆದರೆ, ವೀರಶೈವ ಲಿಂಗಾಯತರು ಈ ಸಮುದಾಯದ ಹೆಸರಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಆರಂಭಿಸಿದ ಮೇಲೆ ಜನಸಂಖ್ಯೆ ಏರಿಕೆಯಾಗಿದೆ. 2011ರ ಜನಗಣತಿಯಲ್ಲಿ 1.17 ಲಕ್ಷಕ್ಕೆ, 2014ರ ಕಾಂತರಾಜ ಆಯೋಗದ ವರದಿಯಲ್ಲಿ 4.10 ಲಕ್ಷಕ್ಕೆ ಜನಸಂಖ್ಯೆ ಏರಿದೆ ಎಂದು ಹೇಳಿದ್ದಾರೆ.
ಹಾಗೆ ಬರೆಸುತ್ತಿರುವವರು
.
ಹಿಂದೂ
ವೀರಶೈವ ಜಂಗಮರು
ಜಾತಿ ಗಣತಿ ವೇಳೆಯಲ್ಲಿ ತಮ್ಮದು ಬೇಡ / ಬುಡಗ ಜಂಗಮ ಜಾತಿ ಅಂತ ಹೇಳಿದರೆ, ಅವರ ಹತ್ತಿರ ಆ ಜಾತಿ ಪ್ರಮಾಣ ಪತ್ರ ಇದ್ದರೆ ಮಾತ್ರ SC ಅಂತ ಬರೆಯಲು ಸರಕಾರ ನೋಟಿಸ್ ಹೊರಡಿಸಿದೆ