ಸಾಣೇಹಳ್ಳಿ
ಇಂಗ್ಲೇಡ್ ನ ಲ್ಯಾಂಬೆತ್ತಿನಲ್ಲಿರುವ ಬಸವೇಶ್ವರ ಪ್ರತಿಮೆ ಬಳಿ ಮೇ 12 ಮಧ್ಯಾಹ್ನ 2 ಗಂಟೆಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು “ಅನುಭವ ಮಂಟಪ ಹಾಗೂ ವಚನಗಳ ಜಾಗತಿಕ ಮೌಲ್ಯಗಳು” ಎಂಬ ವಿಷಯ ಕುರಿತು ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಮಾಜಿ ಸಚಿವೆ ಡಾ. ಉಮಾಶ್ರೀ, ವಚನ ಟಿವಿ ಮುಖ್ಯಸ್ಥ ಪ್ರೊ. ಸಿದ್ದು ಯಾಪಲಪರವಿ, ರಾಷ್ಟ್ರೀಯ ಅಧ್ಯಕ್ಷರು ಬಸವ ಪ್ರತಿಷ್ಠಾನದ ಸುರೇಶ್ ಎಸ್ ಎಂ, ಶರಣ ಚಿಂತಕ ಬೆಳಗಾವಿ ವಕೀಲರಾದ ಬಸವರಾಜ ರೊಟ್ಟಿ, ರಾಕೇಶ ಚೆಲುವರಾಜು ಎಂಡಿ ವೇ ಟು ವರ್ಲ್ಡ್, ಡಾ. ನೀರಜ್ ಪಾಟೀಲ ಲಂಡನ್, ಶ್ರೀ ಅಭಿ ಸಾಲಿಮಠ, ಶ್ರೀ ಮಿರ್ಜಿ ರಂಜನನಾಥ್, ಮಿಸ್ ಐಶ್ವರ್ಯಾ ಪಾಟೀಲ್, ಶ್ರೀ ಜೀವನಕುಮಾರ್ ಭಾಗವಹಿಸಲಿದ್ದಾರೆ.