ಬೀದರ
ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಹಾಗೂ ಬಸವ ಜಯಂತಿ ಕಾರ್ಯಕ್ರಮವು ಬೀದರ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಮೇ 18 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ತಿಳಿಸಿದೆ.
ಗ್ರಾಮದ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಮೇ 10 ರಿಂದ 17ರವರೆಗೆ ಪ್ರತಿದಿನ ಸಾಯಂಕಾಲ 7 ರಿಂದ 8:30 ಗಂಟೆವರೆಗೆ ರಾಮದುರ್ಗ ತಾಲ್ಲೂಕಿನ ನಾಗನೂರ ಗುರುಬಸವ ಮಠದ ಪ್ರವಚನಕಾರರಾದ ಪೂಜ್ಯ ಬಸವಗೀತಾ ತಾಯಿ ಅವರಿಂದ ‘ಬಸವ ದರ್ಶನ’ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.
ಮೇ18 ರ ಸಾಯಂಕಾಲ 5 ಗಂಟೆಗೆ ಬಸವ ಜಯಂತಿ ಉತ್ಸವ ಹಾಗೂ ಬಸವಣ್ಣನವರ ಮೂರ್ತಿ ಅನಾವರಣವಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಿತಿ ಮನವಿ ಮಾಡಿದೆ.
‘ಬಸವ ದರ್ಶನ’ ಪ್ರವಚನದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಬಸವಪ್ರಕಾಶ ಸ್ವಾಮಿಜಿ ಗುರುಬಸವ ಮಠ ನಾಗನೂರ ವಹಿಸಿದ್ದರು. ಪ್ರವಚನಕಾರರಾದ ಪೂಜ್ಯ ಬಸವಗೀತಾ ಮಾತಾಜಿ ಪ್ರವಚನ ನಡೆಸಿಕೊಟ್ಟರು.
ಶರಣ, ವೀರಶೆಟ್ಟಿ ಮಾಲಿಪಾಟೀಲ, ಚಂದ್ರಶೇಖರ ಪನಶೆಟ್ಟಿ, ಸುನಿತಾ ದಾಡಗಿ
ಅಕ್ಕಮಹಾದೇವಿ ಮಹಿಳಾ ಮಂಡಳ ಬೀದರ, ಶಿವಲಿಂಗ ಹೆಡೆ, ಬಾಬುರಾವ್ ಮಾಳೆಗಾರ, ವಿಜಯಕುಮಾರ್ ಮುಂಡಗಿ, ವಿಶ್ವನಾಥ ಮುಸ್ತರಿ, ಚಂದ್ರಕಾಂತ ಜಮಾದಾರ, ಲಕ್ಷ್ಮಣ ಅಲ್ಲೂರ, ಸಿದ್ದಪ್ಪ ಕಟಗಿ, ಭೀಮಣ್ಣ ಗುತ್ತಿ, ಜಬ್ಬರಮಯಾ ಮಾಸುಲ್ದಾರ, ನಂದಕುಮಾರ ಕೋಳಾರ, ಸಂಗೀತಗಾರರಾಗಿ ಸಂಜುಕುಮಾರ ಕಪಲಾಪುರೆ,
ಚನ್ನಬಸವ ಶಿಖಾರಖಾನ್ ಉಪಸ್ಥಿತರಿದ್ದರು.

