ಸಾವಿರಾರು ಬಸವ ಭಕ್ತರು ಆಂಬುಲೆನ್ಸಿಗೆ ದಾರಿ ಬಿಡುತ್ತಿರುವ ವಿಡಿಯೋ ವೈರಲ್

ಬಸವ ಮೀಡಿಯಾ
ಬಸವ ಮೀಡಿಯಾ

ಗುಂಡ್ಲುಪೇಟೆ

ಮೇ 19 ಗುಂಡ್ಲುಪೇಟೆಯಲ್ಲಿ ನಡೆದ ಬಸವ ಜಯಂತಿ ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿ ಸಾವಿರಾರು ಜನ ಸೇರಿದ್ದರು.

ಮೈಸೂರು ಊಟಿ ಹೆದ್ದಾರಿಗೆ ಮೆರವಣಿಗೆ ಬಂದಾಗ ಪೊಲೀಸರು ವಾಹನಗಳನ್ನು ಹೆದ್ದಾರಿಯ ಒಂದು ಭಾಗಕ್ಕೆ ಸೀಮಿತಗೊಳಿಸಿದರು. ಆದ್ದರಿಂದ ತಮಿಳುನಾಡು, ಕೇರಳಗಳಿಗೆ ಹೋಗುವ ವಾಹನಗಳು ಬಹಳ ದೂರದವರೆಗೆ ತೆವಳಿಕೊಂಡು ಹೋಗಬೇಕಾಯಿತು.

ಹೆದ್ದಾರಿಯ ಮತ್ತೊಂದು ಭಾಗದಲ್ಲಿ ಮೆರವಣಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರಿಂದ ಅಲ್ಲಿ ಕಾಲಿಡಲೂ ಸ್ಥಳವಿರಲಿಲ್ಲ.

ಆ ಸಮಯದಲ್ಲಿ ತುರ್ತು ಚಿಕಿತ್ಸೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಮೈಸೂರಿಗೆ ಹೊರಟ್ಟಿದ್ದ ಆಂಬುಲೆನ್ಸ್ ಚಾಲಕ ಬೇರೆ ವಿಧಿಯಿಲ್ಲದೆ ಮೆರವಣಿಗೆ ಹೊರಟಿದ್ದ ರಸ್ತೆಯನ್ನೇ ಪ್ರವೇಶಿಸಿದ.

ಅವನ ಪರಿಸ್ಥಿತಿಯ ಗಂಭೀರತೆ ಅರಿತು ಸಂಭ್ರಮದಲ್ಲಿದ್ದ ಬಸವ ಭಕ್ತರು ತಕ್ಷಣ ರಸ್ತೆಯ ಮಧ್ಯೆ ಜಾಗ ಬಿಟ್ಟು ಆಂಬುಲೆನ್ಸ್ ನಿರಾಳವಾಗಿ ಚಲಿಸುವಂತೆ ಅವಕಾಶ ಮಾಡಿಕೊಟ್ಟರು. ಆಂಬುಲೆನ್ಸ್ ಮುಂದೆ ಹೋಗುವ ಅಬ್ಬರದ ತನಕ ಡಿಜೆ ಸಂಗೀತವನ್ನೂ ನಿಲ್ಲಿಸಲಾಯಿತು. ಸಂಘಟಕರೂ ದಾರಿ ಬಿಡುವಂತೆ ವಿನಂತಿಸಿಕೊಂಡರು.

ಈ ವಿಡಿಯೋ ಈಗ ವೈರಲ್ ಆಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
6 Comments
  • ಬಸವಣ್ಣನವರ ಅಂತ:ಕರಣ ಈ ಭೂಮಿ ಮೇಲೆ ಜೀವಂತ ಎನ್ನುವುದಕ್ಕೆ ಇದುವೇ ಸಾಕ್ಷಿ…ಬಸವನ ಕರುನಾಡು ಕರುಣೆಯ ಬೀಡು..ಇಂತಹ ಒಳ್ಳೆಯ ವಿಷಯ ಗಮನಿಸಿ ಪ್ರಸಾರ ಮಾಡಿದ ಬಸವ ಮೀಡಿಯಾಕ್ಕೆ ಧನ್ಯವಾದ

  • ಬಸವ ಲಿಂಗಾಯತ ಧರ್ಮದ ಶರಣರಲಿ ಯಲ್ಲದರಲ್ಲಿ ಕೃತಘ್ನತೆ ದಯಾ ಬಾವನೆ ಇರುತ್ತದೆ.

  • ಬಸವ ಭಕ್ತರು ನಿಜ ಧರ್ಮದ ಭಕ್ತರು,ದಯೆಯೇ ಧರ್ಮದ ಮೂಲ ಎನ್ನುವ ಅವರ ಜವಾಬ್ದಾರಿ ನಡೆ , ಬಸವಣ್ಣನವರ ಕೀರ್ತಿ ಹೆಚ್ಚಿಸಿ ಗೌರವಕ್ಕೆ ಪಾತ್ರರಾದರು. ಈ ಯುವಕರಿಗೆ ಲಿಂಗಾಯತ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಹೊದಗಿಸಿದರೆ ಸಮುದಾಯದಲ್ಲಿರುವ ಕೊಳೆ ಹಾಗೂ ಕಳೆಗಳೆಲ್ಲವನ್ನು ಕಿತ್ತು ಧರ್ಮ ಶುದ್ದಿಮಾಡುವ ಸಹಾಸಕ್ಕೆ ಕೈಹಾಕುವರು.

  • ಬಸವಣ್ಣನವರ ದಯವೇ ಧರ್ಮದ ಮೂಲವಯ್ಯ ಎನ್ನುವ
    ನುಡಿ ನಡೆಯಲ್ಲಿ ತಂದ ಗುಂಡ್ಲುಪೇಟೆಯ ಬಸವ ಭಕ್ತರು
    ಸಾಕ್ಷಿಯಾಗಿದ್ದಾರೆ. ಇಂಥ ನಡೆಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ನಡೆದಾಗ ಬಸವಣ್ಣನವರ ತತ್ವಗಳು ಗಟ್ಟಿಯಾಗುತ್ತ
    ಜನಪ್ರಿಯವಾಗುತ್ತಿವೆ. ಗುಂಡ್ಲುಪೇಟೆಯ ಎಲ್ಲಾ ಬಸವ
    ಭಕ್ತರಿಗೆ ಹ್ರೃದಯ ಪೂರ್ವಕ ಅಭಿನಂದನೆಗಳು 🙏🙏

  • ಗುರುಲಿಂಗಪ್ಪ ಹೋಗ್ತಾಪುರ ಬೀದರ್ ಜಿಲ್ಲೆ, ಬೀದರ್ says:

    ನಾವು ಬಸವಜಯಂತಿ ಆಚರಿಸಿದಂತೆ ಸಮಾನತೆಯ ಮಾರ್ಗದಿಂದ ನಡೆಯುವವರಾಗಬೇಕು. ಆಗ ನಮ್ಮ ಶರಣಧರ್ಮ ವಿಶ್ವಾಧರ್ಮಾವಾಗುತ್ತದೆ. ಇಂಥಮೆರವಣಿಗೆಗಳು ಸಾರ್ಥಕವಾಗುತ್ತವೆ. ಶರಣುಷರಣಾರ್ಥಿಗಳು

Leave a Reply

Your email address will not be published. Required fields are marked *