ಹರಿಹರ
ಶರಣರ ವಚನಗಳ ಗಾಯನ ತರಬೇತಿ ಶಿಬಿರ ‘ವಚನೋತ್ಸವ’ ಕಾರ್ಯಕ್ರಮ ಶನಿವಾರ ಮಧ್ಯಾಹ್ನ 1ರಿಂದ 4.30ರವರೆಗೆ ಹರಿಹರ ಪಟ್ಟಣದ ಜೆ.ಸಿ. ಬಡಾವಣೆಯ ಗಿರಿಯಮ್ಮ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆಯಲಿದೆ.
ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆಯುವ ಶಿಬಿರದ ಗಾಯನ ತರಬೇತಿಯನ್ನು ಯಶಾ ದಿನೇಶ ನೀಡಲಿದ್ದು, ಉದ್ಘಾಟನೆಯನ್ನು ಪ್ರವಚನಕಾರ ಡಿ. ಸಿದ್ದೇಶ್ ಮಾಡಲಿದ್ದು, ವಚನ ವಿಶ್ಲೇಷಣೆಯನ್ನು ಮಮತಾ ನಾಗರಾಜ ಮಾಡುವರು, ಕೆ.ಬಿ. ಪರಮೇಶ್ವರಪ್ಪ ಗೌರವ ಉಪಸ್ಥಿತರಿರಲಿದ್ದು, ರೂಪಾ ನಾಗರಾಜ ಅಧ್ಯಕ್ಷತೆ ವಹಿಸುವರು.
ಆಸಕ್ತರು 99648 2912 2, 88924 52822, 82174 33595 ಮೊ. ಸಂಖ್ಯೆಗೆ ಸಂಪರ್ಕಿಸಲು ಕದಳಿ ಮಹಿಳಾ ವೇದಿಕೆ ಹರಿಹರ ತಾಲೂಕ ಘಟಕದ ಗೌರವಾಧ್ಯಕ್ಷೆ ಸುನಿತಾ ಮಾರ್ವಳ್ಳಿ ತಿಳಿಸಿದ್ದಾರೆ.