ಬಸವ ಕಲ್ಯಾಣ ಬಸವ ಜಯಂತೋತ್ಸವದಲ್ಲಿ ಮಕ್ಕಳ ಕೂಟ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಸೃತಿಯ ಕುರಿತು ಮಾರ್ಗದರ್ಶನದ ಇಂದಿನ ದಿನಮಾನಗಳಲ್ಲಿ ಅತ್ಯಂತ ಅವಶ್ಯಕವಾಗಿದ್ದು, ಉತ್ತಮ ಸಶಕ್ತ ಸಂಸ್ಕಾರ ಭರಿತ ಜನಾಂಗವೇ ದೇಶದ ಆಸ್ತಿ ಎಂದು ಹರಳಯ್ಯ ಗವಿಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ನಡೆದ ಬಸವ ಜಯಂತೋತ್ಸವ ಶರಣು ಶರಣಾರ್ಥಿ ಸಮಾವೇಶ ಮಕ್ಕಳ ಕೂಟ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ, ಮಕ್ಕಳಿಗೆ ಹೇಳಿ ಕಲಿಸುವ ಮಾತುಗಳಿಗಿಂತ ತಾವೇ ನೋಡಿ ಕಲಿಯುವ ವಿಚಾರಗಳು ಹೆಚ್ಚಾಗಿರುತ್ತವೆ. ಮಕ್ಕಳಲ್ಲಿ ಭಯ ಮೂಡಿಸಿ ಶಿಸ್ತನ್ನು ಕಲಿಸದೆ ಭಯಮುಕ್ತರಾಗಿ ಕಲಿಸಬೇಕು.

ಮನೆಯೇ ಮೊದಲ ಪಾಠಶಾಲೆ ಜನನಿ ಮೊದಲ ಗುರು ಹಾಗಾಗಿ ತಾಯಂದಿರು ತಮ್ಮ ಮಕ್ಕಳಿಗೆ ಸ್ನೇಹ, ಹೊಂದಾಣಿಕೆ ಪ್ರಾಮಾಣಿಕತೆಯನ್ನು ಚಿಕ್ಕಂದಿನಿಂದಲೇ ಕಲಿಸಬೇಕು. ಬಾಲ್ಯದಲ್ಲಿ ಪಡೆದ ಸಂಸ್ಕಾರ ಜೀವನ ಪರ್ಯಂತ ಉಳಿಯುತ್ತದೆ. ಮುಂದೆ ಉತ್ತಮ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ. ದೇಶದ ಭಾವಿ ಪ್ರಜೆಗಳಾದ ಮಕ್ಕಳಲ್ಲಿ ಸಂಸ್ಕಾರ ಮೈಗೂಡಿಸುವುದು ಅವಶ್ಯಕವಾಗಿದೆ ಎಂದರು.

ಸಾತ್ವಿಕ ಸಲಗರ ಕಾರ್ಯಕ್ರಮ ಉದ್ಘಾಟಿಸಿ ವಚನ ಗಾಯನ ಮಾಡಿದರು. ಮಕ್ಕಳಾದ ಆರಾಧ್ಯ ಕೌಡಾಳೆ, ಶ್ರೀಶೈಲಾ ವಡ್ಡೆ, ವಿವೇಕ ಗಡ್ಡೆ, ಶರಣ ಶೇರಿಕಾರ, ದೀಕ್ಷಾ ಮಠಪತಿ, ವಿನಾಯಕ ಪ್ರಭು, ವಚನಾ ಗಡ್ಡೆ, ಪ್ರೀತಿ ಶೇರಿಕಾರ, ಬಸವತೀರ್ಥ ಚಿಟ್ಟೆ, ಸಾಕ್ಷಿ ರಗಟೆ, ಗಂಗೋತ್ರಿ ಬೇಲೂರೆ ಬಸವಣ್ಣ, ಪರುಷ ಕಟ್ಟೆ, ಸಂಸ್ಕೃತಿ, ವಚನ ಮುಂತಾದ ವಿಷಯಗಳ ಕುರಿತು ಕನ್ನಡ ಮತ್ತು ಇಂಗ್ಲಿಷನಲ್ಲಿ ಮಾತಾನಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.

ಶ್ರೀಶಾಂತ ಪಂಚಾಳ, ಚನ್ನವೀರ ಪಾಟೀಲ, ಕಾವ್ಯಶ್ರೀ ಮಹಾಲಿಂಗ, ಆರೋಹಿ, ಪೂರ್ವಿ, ಅಬೂಲಿ ಬಿರಾದಾರ, ಪೂರ್ವಿಕಾ ಸಂಗಮೇಶ ಇವರಿಂದ ಜರುಗಿದ ವಚನ ನೃತ್ಯ ಹಾಗೂ ಕೋಲಾಟ ಮನಸೂರೆಗೊಂಡವು.

ಶ್ರಾವಣಿ, ಶರಣ, ಚನ್ನವೀರ, ಸಂಗಮೇಶ ಇವರಿಂದ ಶರಣು ಶರಣಾರ್ಥಿ ರೂಪಕ ನಡೆಯಿತು. ಸಿದ್ಧಾರ್ಥ, ಶ್ರೀಪ್ರಸಾದ ಯೋಗಾಸನ ಹಾಗೂ ಶೃದ್ಧಾ ಚವ್ಹಾಣ, ಪ್ರಿಯದರ್ಶಿನಿ ರೆಡ್ಡಿ ಕರಾಟೆ ಪ್ರದರ್ಶಿಸಿದರು.

ವಿಸ್ವಿತ, ಸಕಲೇಶ ರಾಜೇಶ್ವರ, ತನ್ಮಯ ವಕಾರೆ ಶುಭಂ ಕಿರಣಗಿ ಅಂಕಿತ ಬಿರಾದಾರ ಮುಂತಾದ ಮಕ್ಕಳು ಗುರುಪೂಜೆ ನಡೆಸಿಕೊಟ್ಟರು. ಗಂಗಾಂಬಿಕಾ ಮಡಿವಾಳ ವಚನ ಪ್ರಾರ್ಥನೆ, ಶೃದ್ಧಾ ರಾಚೆಟ್ಟಿ ವಚನ ಗಾಯನ ರಂಜನಾ ಭುಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಾತ್ವಿಕ, ಪ್ರತೀಕ್ಷಾ, ಭಾಗ್ಯಲಕ್ಷ್ಮೀ, ದೀಕ್ಷಾ ವಚನ ಸಂಗೀತ ನಡೆಸಿಕೊಟ್ಟರು.

ಸಾತ್ವಿಕ, ಆರತಿ, ಮಾನ್ವಿ, ಶೃದ್ಧಾ ವಿವೇಕ ಮುಂತಾದವರು ಧ್ವಜಾರೋಹಣ ನೇರವೆರಿಸಿದರು. ಸಕಲೇಶ ಹೂಗಾರ ಧ್ವಜಗೀತೆ ಹಾಡಿದರೆ, ಖುಷಿ ಶೇರಿಕಾರ ಸ್ವಾಗತಿಸಿದರು. ಆರಾಧ್ಯ ಬಿರಾದಾರ ನಿರೂಪಿಸಿದರು. ಲಕ್ಷ್ಮೀಬಾಯಿ ಮಹಾದೇವಪ್ಪ ಇಜಾರೆ ಪ್ರಸಾದ ದಾಸೋಹಗೈದರು.

ಕಾರ್ಯಕ್ರಮದಲ್ಲಿ ಸಾವಿತ್ರಿ ಸಲಗರ, ಡಾ. ಅಕ್ಕಮಹಾದೇವಿ ಗಡ್ಡೆ, ಕವಿತಾ ರಾಜೊಳೆ, ರಾಜಶ್ರೀ ಪಂಚಾಳ, ವಿದ್ಯಾವತಿ ಶೇರಿಕಾರ, ಜಯಶ್ರೀ ಬಿರಾದಾರ, ರಾಣಿ ವಡ್ಡೆ, ಸಂತೋಷ ಮಡಿವಾಳ, ರೇಣುಕಾ ಹೋಗ್ತಾಪೂರೆ ಸೇರಿದಂತೆ ನೂರಾರು ಜನರು ಭಾಗವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *