ಕನಿಷ್ಠ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ
ಬಸವಕಲ್ಯಾಣ
ಬಸವಣ್ಣನವರ ಕಾಯಕ ಭೂಮಿಯಲ್ಲಿ ಆರೆಸ್ಸೆಸ್ ನಾಯಕ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಐದು ದಿನಗಳ ಬಸವ ಭಾರತ ಉತ್ಸವ ಆಯೋಜಿಸಾಗುತ್ತಿದೆ.
2027ರ ಡಿಸೆಂಬರ್ 23ರಿಂದ 27ರವರೆಗೆ ನಡೆಯುವ ಉತ್ಸವದಲ್ಲಿ ಕನಿಷ್ಠ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆಂದು ಸೇಡಂ ಹೇಳಿದರು.
ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಬಸವ ಭಾರತ ಉತ್ಸವ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವ ಭಾರತ ಉತ್ಸವ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವ ಪ್ರಜ್ಞೆ ಬಿತ್ತಲಿದೆ ಎಂದು ಹೇಳಿದರು.
ಬಸವ ಕಲ್ಯಾಣ ಕ್ಷೇತ್ರ ಸಮಿತಿಯ ಕಾರ್ಯ ಯೋಜನೆಗೆ 2027ರಲ್ಲಿ ಐದು ವರ್ಷ ತುಂಬಲಿದೆ. ಹೀಗಾಗಿ ಐದು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕ್ಷೇತ್ರ ಸಮಿತಿಯ ಸಂಚಾಲಕರಾಗಿಯೂ ಸೇಡಂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು, ಹರಳಯ್ಯನವರ ಗವಿಯ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿದರು. ಬಸವ ಭಾರತ ಉತ್ಸವದಲ್ಲಿ ಮೊದಲ ದಿನದ ದಾಸೋಹ ವ್ಯವಸ್ಥೆಯನ್ನು ತಾವು ವಹಿಸಿಕೊಳ್ಳುವದಾಗಿ ಹುಲಸೂರ ಶ್ರೀ ಹೇಳಿದರು. ಕಲ್ಯಾಣಕ್ಕೆ ಪ್ರತಿ ದಿನ ಐದು ಸಾವಿರ ಜನ ಯಾತ್ರಾರ್ಥಿಗಳು ಬರಬೇಕು ಎನ್ನುವುದು ಸೇಡಂ ಅವರ ಆಶಯವಾಗಿದೆ. ಅವರ ಕನಸು ನನಸಾಗಿಸಲು ನಾವೆಲ್ಲರೂ ಕೈಜೋಡಿಸೋಣ ಎಂದರು.
ಬೇಲೂರನ ಶ್ರೀ ಪಂಚಾಕ್ಷರಿ ಸ್ವಾಮಿ, ಸಾಯಗಾಂವನ ಶ್ರೀ ಶಿವಾನಂದ ಸ್ವಾಮಿ ಸಮ್ಮುಖ ವಹಿಸಿದ್ದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಡಾ.ಅಮರನಾಥ ಸೋಲಪುರೆ, ಶಂಕ್ರೆಪ್ಪ ಪಾಟೀಲ್, ಡಾ.ದೇವಿಕಾ ನಾಗೂರೆ, ಸೂರ್ಯಕಾಂತ ಮಠ, ಪಂಡಿತ ಬಸವರಾಜ, ಮಲ್ಲಿಕಾರ್ಜುನ ಆಲಗೂಡೆ ಇತರರಿದ್ದರು.
ಕೆಲವು ತಿಂಗಳುಗಳ ಹಿಂದೆ ಸೇಡಂನಲ್ಲಿ ಬಸವರಾಜ ಪಾಟೀಲ ಸೇಡಂ ಸಂಘ ಪರಿವಾರ ಪ್ರಾಯೋಜಿತ ಭಾರತ ವಿಕಾಸ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಇದು ಲಿಂಗಾಯತ ಸಂಘಟನೆಗಳಿಗೆ ಎಚ್ಚರಿಕೆಯ ಕರೆ. ಈ ಕಾರ್ಯಕ್ರಮದ ಉದ್ದೇಶ ಮತ್ರು ಸಂಘ ಪರಿವಾರದವರ ಪಾತ್ರ ಏನು ಎನ್ನುವುದರ ಕುರಿತು ಸ್ಪಷ್ಟತೆ ಬೇಕು . ಸಂಘ ಪರಿವಾರದವರು ಒಂದು ವರ್ಷದಲ್ಲಿ ವಚನ ದರ್ಶನ ಪುಸ್ತಕದ ಮೂಲಕ ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿಯೇ ಅಲ್ಲ ಎಂದು ಸಾರಿಸಿದ್ದರು, ಈಗ ಎರಡುವರೆ ವರ್ಷ ಮೊದಲೇ ಇಂತಹ ಯೋಜನೆ ರೂಪಿಸಿದ್ದಾರೆ ಅಂದರೆ ಅಷ್ಟರೊಳಗೆ ಲಿಂಗಾಯತ ಅಸ್ಮಿತೆಯನ್ನು ಸಂಪೂರ್ಣ ವೈದಿಕಮಯ ಮಾಡುವ ಪಣ ತೊಟ್ಟಿರಬೇಕು ಅನಿಸುತ್ತಿದೆ
ನಿಮ್ಮ ಊಹೆ ಸರಿಯಾಗಿದೆ. ಭಾಗವಹಿಸಲಿರುವ ಮಠಾಧೀಶರು ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಜಗಜ್ಯೋತಿ ಬಸವಣ್ಣನವರು ಕೇವಲ ಒಂದು ಜಾತಿ ಒಂದು ಧರ್ಮ ಒಂದು ಸಂಘ ಸಂಸ್ಥೆಗೆ ಸೀಮಿತವಾಗಿಲ್ಲ. ಇಡೀ ವಿಶ್ವವನ್ನೇ ಬಸವಣ್ಣನವರನ್ನು ಒಪ್ಪಿಕೊಂಡಿದೆ. ವಚನ ಸಾಹಿತ್ಯವನ್ನು ಇಡೀ ವಿಶ್ವವೇ ನೆಚ್ಚಿಕೊಂಡಿದೆ.
ಕ್ರಿಶ್ಚನ್ ಧರ್ಮದ ಇಂಗ್ಲೆಂಡ್ ಸಂಸತ್ ಭವನದಲ್ಲಿ ಬಸವಣ್ಣನವರ ಮೂರ್ತಿ ಕೂಡಿಸಿರುವುದನ್ನು ತಾವು ಖಂಡಿತ ಇಲ್ಲ ತಾನೇ ಅದೇ ರೀತಿ ಅರಬ್ ಕಂಟ್ರಿಯಲ್ಲಿ ಇಸ್ಲಾಂ ಧರ್ಮದವರು ಬಸವಣ್ಣನ ಮೂರ್ತಿಯನ್ನು ಸ್ಥಾಪನೆ ಮಾಡಿದ್ದಾರೆ ಇದನ್ನು ತಾವು ಖಂಡಿತ ಇಲ್ಲ ತಾನೇ ಹಾಗೆ ಇವನಾರವ ಇವನಾರವ ಇವನಾರವ ನಂದೇನಿಸಯ್ಯಾ. ಇವ ನಮ್ಮವ ಇವ ನಮ್ಮವ ಇವ ನಮ್ಮವನೆ ನಂದೆನಿಸಯ್ಯಾ. ನಿಮ್ಮ ಮನೆಯ ಮಗ ನಂದೆನಿಸಯ್ಯಾ
ಅಂತ ಬಸವಣ್ಣನವರು ಹೇಳಿಲ್ಲವೇ…??
ಈ ಕಾರ್ಯಕ್ರಮದ ಹಿನ್ನೆಲೆ ರೂವಾರಿಯ ಉದ್ದೇಶ ಏನೆಂಬುದನ್ನು ಲಿಂಗಾಯಿತ ಧರ್ಮದ ಚಿಂತಕರು ಬಸವ ತತ್ವದ ಅನುಯಾಯಿಗಳು ಬಸವ ಧರ್ಮದ ಸಾಮಾನ್ಯ ಪ್ರಜೆಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಮೊದಲಿಗೆ ಅವರ ಕಾರ್ಯಕ್ರಮದ ಧ್ಯೇಯ ಉದ್ದೇಶಗಳ ಬಗ್ಗೆ ಸ್ಪಷ್ಟತೆಯನ್ನು ಪಡೆಯಬೇಕಾಗಿದೆ. ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಅವರು ಮಾಡುವ ಕಾರ್ಯಕ್ರಮದಿಂದ ತೊಂದರೆ ಅಥವಾ ಬಸವ ತತ್ವಕ್ಕೆ ತದ್ವಿರುದ್ಧವಾಗಿ ಅವರ ವಿಚಾರ ಚಿಂತನೆಗಳು ಇದ್ದರೆ ಲಿಂಗಾಯತರು ತಕ್ಷಣ ಎಚ್ಚರವಾಗಬೇಕು.
ಕಾರ್ಯಕ್ರಮದ ಉಸ್ತುವಾರಿಯನ್ನು ಬಸವ ಅನುಯಾಯಿ ಎಂದು ಹೇಳಿಕೊಳ್ಳುವ ಬಸವೋದ್ಯಮಿಗಳು ವಹಿಸಿಕೊಂಡಿದ್ದಾರೆ.
ಹೆಸರು ಬಸವಣ್ಣನದು ವಿಚಾರಗಳು ವೈದಿಕರದು.
ಲಿಂಗಾಯತ ಮಠಗಳು ಒಂದೊಂದಾಗಿ RSS ತೆಕ್ಕೆಗೆ ಬೀಳುತ್ತಿವೆ.
S too correct 💯
ಬಸವ ಭಾರತ ಕಾರ್ಯಕ್ರಮಕ್ಕೆ ಇನ್ನೂ ಎರಡು ವರ್ಷವಿದೆ ಅಷ್ಟರೊಳಗೆ ಕೇಂದ್ರ ಸರ್ಕಾರ ಲಿಂಗಾಯತ ಧರ್ಮ ಮಾನ್ಯತೆ ಬಗ್ಗೆ 2018ರಲ್ಲಿ ತಳೆದ ನಿಲುವನ್ನು ಮರುಪರಿಶೀಲಿಸಿ ತಡಮಾಡದೆ ಸಾಂವಿಧಾನಿಕ ಮಾನ್ಯತೆ ಘೋಷಿಸಲೇಬೇಕು. ಇಲ್ಲದಿದ್ದಲ್ಲಿ ಬಸವಾಭಿಮಾನಿಗಳು ಸೇಡಂ ನೇತೃತ್ವದ ಕಾರ್ಯಕ್ರಮ ನಡೆಸಲು ಬಿಡಬಾರದು .. ರಾಜ್ಯದೆಲ್ಲೆಡೆಯಿಂದ ಬರುವ ಆರ್ ಎಸ್ ಎಸ್ ಹಿಂದೂಪರ ಸಂಘಟನೆಗಳವರು ತೊಟ್ಟ ಚೆಡ್ಡಿಯೊಳಗಿನದನ್ನು ಉದುರಿಸುವ ಬಗ್ಗೆ ಸಿದ್ಧರಾಗಬೇಕು!
ಬಸವ ಭಾರತಿ ಆಯೋಜಿಸಿದ ಈ ಮನುಷನ ಹಿಂದೆ ಇದರ ರೂಪರೇಷಗಳನ್ನು ಹಾಕಿಕೊಟ್ಟವರು ಚೆಡ್ಡಿಮುಖಂಡರು.ಮನುವಾದಿಗಳು ಹಿದುತ್ವದ ಗೋಮುಖವ್ಯಾಘ್ರಗಳು. ಈ ಕುತ್ಸಿತ ಕಾರ್ಯತಂತ್ರವನ್ನು ಬಸವ ಮೀಡಿಯಾದವರು ಪ್ರತಿಭಾಟಿಸಬೇಕು. ಜಾಗ್ರತರಾಗಿರಿ ಜಾಣರಾಗಿರಿ. RSS ನವರ ಕುತಂತ್ರವನ್ನು ಬಹಿರಂಗಗೊಳಿಸಿ!ಈ ಲಿಂಗಾಯತರ ಸೇವಕನಂತೆ ಕಾಣುವ ಮಾರುವೇಶದ ಬಸವರಾಜ ಪಾಟೀಲ ಸೇಡಂ ಎನ್ನುವ ಬಾಳಬಾಡುಕ ಸಂಘಿಗೆ ಬತ್ತಲೆಗೊಳಿಸಿ.