ಸಾಣೇಹಳ್ಳಿ,
ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದಿರುವ ಶ್ರೀ ಶಿವಕುಮಾರ ರಂಗಪ್ರಯೋಗಶಾಲೆಯ ೨೦೨೫-೨೬ನೆಯ ಸಾಲಿನ ರಂಗಶಿಕ್ಷಣಕ್ಕೆ (ಡಿಪ್ಲೋಮಾ ಇನ್ ಡ್ರಾಮಾ ಆರ್ಟ್ಸ್)ಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಪದವೀಧರರಿಗೆ ಆದ್ಯತೆ ಕೊಡಲಾಗಿದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು ಸ್ವಲ್ಪಮಟ್ಟಿನ ಅನುಭವ ಇರಬೇಕಾದದ್ದು ಅಗತ್ಯ.
ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಊಟ, ವಸತಿ ಸೌಲಭ್ಯವಿದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರಿಂದ ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ.
ಗ್ರಂಥ ಭಂಡಾರ ಹಾಗೂ ದೃಶ್ಯ, ಶ್ರವ್ಯ ಪರಿಕರಗಳ ಅನುಕೂಲತೆ ಇದೆ. ರಂಗಶಾಲೆಯ ವಿದ್ಯಾರ್ಥಿಗಳಿಗೆ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ.
ಅರ್ಜಿಗಾಗಿ ರಂಗಶಾಲೆಯ ವೆಬ್‌ಸೈಟ್ www.theatreschoolsanehalli.org ನಲ್ಲಿ ಪ್ರವೇಶ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಜೂನ್ ೨೫ರೊಳಗಾಗಿ ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳಿಸುವುದು. ಸಂದರ್ಶನವನ್ನು ದಿನಾಂಕ: ೨೦೨೫ ಜೂನ್ ೨೭-೨೮ ರಂದು ನಡೆಸಲಾಗುವುದು ಎಂದು ಪ್ರಾಚಾರ್ಯರು,
ಶ್ರೀ ಶಿವಕುಮಾರ ರಂಗಪ್ರಯೋಗಶಾಲೆ
ಸಾಣೇಹಳ್ಳಿ – ೫೭೭೫೧೫
ಹೊಸದುರ್ಗ – ತಾ, ಚಿತ್ರದುರ್ಗ – ಜಿಲ್ಲೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ೯೪೪೮೩೯೮೧೪೪/೮೮೬೧೦೪೩೫೫೩ ಈ ಮೊ. ಸಂಖ್ಯೆಗೆ ಸಂಪರ್ಕಿಸಬಹುದು.