ವಾರ ಪೂರ್ತಿ ಬಸವ ರೇಡಿಯೋದಲ್ಲಿ ಮಹಿಳೆಯರ ಮಾತು
ಬೆಂಗಳೂರು
ಲಿಂಗಾಯತ ಮಠಾಧೀಶರ ಒಕ್ಕೊಟದ ನೇತೃತ್ವದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದೆ.
ಸಮಾಜದಲ್ಲಿ ಚಿಗುರುತ್ತಿರುವ ಬಸವ ತತ್ವದ ಬೇರುಗಳನ್ನು ಗಟ್ಟಿಗೊಳಿಸಲು ವಿವಿಧ ಬಸವ ಸಂಘಟನೆಗಳು ಸಿದ್ದವಾಗುತ್ತಿವೆ. ಮಹಿಳೆಯರು ಮುನ್ನೆಲೆಗೆ ಬಂದರೆ ಮಾತ್ರ ಅಭಿಯಾನ ಸಫಲವಾಗಲು ಸಾಧ್ಯ. ಮಹಿಳೆಯರ ವಿಷಯಗಳು, ಕಾರ್ಯಕ್ರಮಗಳು, ನಾಯಕತ್ವ ಅಭಿಯಾನದ ಕೇಂದ್ರಬಿಂದುವಾಗಬೇಕು.
ಈ ನಿಟ್ಟಿನಲ್ಲಿ ವಾರ ಪೂರ್ತಿ ಬಸವ ರೇಡಿಯೋ ನಾಡಿನ ಚಿಂತಕಿಯರೊಂದಿಗೆ ಸಂವಾದ ನಡೆಸಲಿದೆ. ಹಿರಿಯ ಲೇಖಕಿ ಡಾ ಸರ್ವಮಂಗಳ ಸಕ್ರಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಹಿಳೆಯರ ಪಾತ್ರ
ದಿನಾಂಕ : ಜೂನ್ 3
ರಾತ್ರಿ: 9-10
ಉಪನ್ಯಾಸಕರು
- ಪೂಜ್ಯ ಓಂಕರೇಶ್ಟರಿ ಮಾತಾಜಿ, ಬಸವ ಬೆಟ್ಟ, ಕಪ್ಪತಗಿರಿ
- ಸವಿತಾ ಮಾಟೂರ, ಎಂ. ಎ, ಬಿ. ಎಡ್, ಇಳಕಲ್
ಪ್ರಾಸ್ತಾವಿಕ ಹಾಗೂ ಸಮಾರೋಪ ನುಡಿ,
ಅತಿಥಿ ಸಂಪಾದಕರಾದ: ಡಾ. ಸರ್ವಮಂಗಳ ಸಕ್ರಿ
ದಯವಿಟ್ಟು ಗಮನಿಸಿ:
ಅತಿಥಿಗಳು ಪ್ರತಿಯೊಬ್ಬರು 20 ನಿಮಿಷ ಮಾತನಾಡಲಿದ್ದಾರೆ. ನಂತರ 15 ನಿಮಿಷ ಮುಕ್ತ ವೇದಿಕೆ
(ಆಸಕ್ತರಿಗೆ ಮಾತನಾಡಲು ಅವಕಾಶ)
ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದಯವಿಟ್ಟು ಎಲ್ಲರೂ ರಾತ್ರಿ 9.00 ಕ್ಕೆ ಈ ಕೆಳಗಿನ ಲಿಂಕ್ ಪ್ರೆಸ್ ಮಾಡಿ ಜಾಯಿನ್ ಆಗಿ.
https://meet.google.com/trh-uvxh-efx
ಸರ್ವರಿಗೂ ಸ್ವಾಗತ. ಶರಣು ಶರಣಾರ್ಥಿ.