ಅಭಿಯಾನಕ್ಕೆ ಸಿದ್ಧವಾಗಲು ಜೂನ್ 30 ಲಿಂಗಾಯತ ಮಠಾಧೀಶರ ಸಮಾವೇಶ

ಆಯ್ದ ಮಠಾಧಿಪತಿಗಳಿಗೆ ಅಭಿಯಾನದ ಜಿಲ್ಲಾವಾರು ಜವಾಬ್ದಾರಿ; ವೆಚ್ಚಕ್ಕೆ ಒಕ್ಕೂಟದಿಂದ ಆರ್ಥಿಕ ಸಹಾಯ

ಧಾರವಾಡ

ನಗರದಲ್ಲಿ ಗುರುವಾರ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯಲ್ಲಿ ಜೂನ್ 30 ಮಠಾಧೀಶರ ವಿಸ್ತ್ರೃತ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸೆಪ್ಟೆಂಬರ್ ತಿಂಗಳ ಬಸವ ಸಂಸ್ಕೃತಿ ಅಭಿಯಾನಕ್ಕೆ ಸಿದ್ಧವಾಗುವ ಬಗ್ಗೆ ಬಸವಪರ ಸ್ವಾಮೀಜಿಗಳ ನಡುವೆ ಚರ್ಚೆ, ವಿಚಾರ ವಿನಿಮಯ ನಡೆಯಲಿದೆ ಎಂದು ತಿಳಿದು ಬಂದಿದೆ.

“ಸಮಾವೇಶಕ್ಕೆ 300ರಿಂದ 500ಜನ ಮಠಾಧೀಶರನ್ನು ಆಹ್ವಾನಿಸುತ್ತಿದ್ದೇವೆ. ಪೂಜ್ಯರನ್ನು ಸಂಪರ್ಕ ಮಾಡುವ ಕೆಲಸ ಈಗಾಗಲೇ ಶುರುವಾಗಿದೆ,” ಎಂದು ಒಕ್ಕೊಟದ ಕಾರ್ಯದರ್ಶಿ ಹಂದಿಗುಂದ ಸಿದ್ದೇಶ್ವರ ಮಠದ ಪೂಜ್ಯ ಶಿವಾನಂದ ಸ್ವಾಮೀಜಿ ಹೇಳಿದರು.

ಸಮಾವೇಶದಲ್ಲಿ ಅಭಿಯಾನದ ಜೊತೆಗೆ ಜಾತಿಗಣತಿಗೆ ಸಂಬಂಧಿಸಿದ ಚರ್ಚೆ ಕೂಡ ನಡೆಯುವ ನಿರೀಕ್ಷೆಯಿದೆ.

“ಜನಗಣತಿಯಲ್ಲಿ ಎಲ್ಲ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಲಿಂಗಾಯತ ಮತ್ತು ಜಾತಿ ಕಾಲಂನಲ್ಲಿ ಒಳಪಂಗಡಗಳನ್ನು ಬರೆಸತಕ್ಕದ್ದು ಎಂದು ಎಲ್ಲರಿಗೂ ತಿಳಿಯುವಂತೆ ಪ್ರಚಾರ ಮಾಡುವುದು. ಬಸವ ಸಂಸ್ಕೃತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಮುಂದೆ ಬರುವ ಪ್ರತಿಯೊಂದು ಪ್ರಕಟಣೆಯಲ್ಲೂ ಜಾತಿಗಣತಿ ವಿಷಯವನ್ನು ಒತ್ತುಕೊಟ್ಟು ಪ್ರಕಟಿಸುತ್ತೇವೆ. ಎಲ್ಲರಲ್ಲಿಯೂ ಜಾತಿ ಗಣತಿಯ ಬಗ್ಗೆ ಜಾಗೃತಿ ಮೂಡಿಸಲು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ,” ಎಂದು ಶಿವಾನಂದ ಸ್ವಾಮೀಜಿ ಹೇಳಿದರು.

ಗುರುವಾರ ನಡೆದ ಒಕ್ಕೊಟದ ಸಭೆಯಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ವ್ಯಾಪಕವಾದ ಚರ್ಚೆ ನಡೆದು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

1) ಮಠಾಧಿಪತಿಗಳನ್ನು ಸಂಪರ್ಕಿಸಿ ಅಭಿಯಾನವನ್ನು ಯಶಸ್ವಿಗೊಳಿಸುವ ಜಿಲ್ಲಾವಾರು ಜವಾಬ್ದಾರಿಯನ್ನು ಆಯ್ದ ಮಠಾಧಿಪತಿಗಳಿಗೆ ನೀಡಲಾಗಿದೆ.

2) ಅಭಿಯಾನದ ಸಮಯದಲ್ಲಿ ಅವಶ್ಯವಿರುವ ಬ್ಯಾನರ್, ಧ್ವಜ, ಸ್ಟಿಕರ್ಗಳನ್ನು ಹಾಗೂ ಶರಣ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸುವ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ.

4) ಅಭಿಯಾನದ ವೆಚ್ಚಕ್ಕೆ ಮಠಾಧಿಪತಿಗಳ ಒಕ್ಕೂಟದಿಂದ ಆರ್ಥಿಕ ಸಹಾಯ ನೀಡುವ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.

5) ಈ ಪೂರ್ವದಲ್ಲಿ ನಿಗದಿಯಾಗಿರುವಂತೆ ಬಸವ ಸಂಸ್ಕೃತಿ ಅಭಿಯಾನವನ್ನು ಯಾವುದೇ ಬದಲಾವಣೆಗಳಿಲ್ಲದೆ ನಡೆಸಲು ತೀರ್ಮಾನಿಸಲಾಗಿದೆ.

ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಪೂಜ್ಯ ಶ್ರೀ ಬಸವಲಿಂಗಪಟ್ಟದ್ದೇವರು, ಸಾಣೇಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದುಗಿನ ಜಗದ್ಗುರು ಡಾ. ಸಿದ್ದರಾಮ ಮಹಾಸ್ವಾಮಿಗಳು, ಪೂಜ್ಯ ಡಾ. ಗಂಗಾ ಮಾತಾಜಿ ಕೂಡಲಸಂಗಮ, ಬೈಲೂರ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಭಾಲ್ಕಿಯ ಗುರುಬಸವಲಿಂಗ ಪಟ್ಟದೇವರು, ಶೇಗುಣಸಿಯ ಪೂಜ್ಯ ಶ್ರೀ ಮಹಾಂತಪ್ರಭು ಸ್ವಾಮೀಜಿ, ಮುದಗಲ್ಲದ ಪೂಜ್ಯ ಮಹಾಂತ ಸ್ವಾಮಿಗಳು ಮುಂತಾದವರು ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.

ಶಿವಾನಂದ ಸ್ವಾಮೀಜಿ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿಅಥಣಿಯ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಪ್ರಾಸ್ತಾವಿಕವಾಗಿ ವಿಷಯ ಮಂಡಿಸಿದರು, ಹಾವೇರಿಯ ಸದಾಶಿವ ಪೂಜ್ಯರು ವಂದನಾರ್ಪಣೆ ಸಲ್ಲಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
18 Comments
  • ಗುರು ಬಸವಪರ ಸ್ವಾಮೀಜಿಗಳೆಲ್ಲ ಹೀಗೆ ಒಂದಾಗಿ ಬಸವ ತತ್ವ ಪ್ರಸಾರಕ್ಕೆ ಒಂದಾಗಿ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ನಿಕೊಳ್ಳುವುದನ್ನು ನೋಡಿದರೆ ಡಾ. ಎಂ.ಎಂ. ಕಲಬುರ್ಗಿಯವರ ಆಶಯ ಇಡೇರಿದಂತೆ ಕಾಣುತ್ತೆ.

    ಕ್ರಿಶ್ಚಿಯನ್ ಮಿಶಿನರಿಗಳ ಹಾಗೆ ನಮ್ಮ‌ಲಿಂಗಾಯತ ಸ್ವಾಮೀಜಿಗಳೆಲ್ಲ ಒಂದಾಗಿ ಬಸವ ತತ್ವ ಪ್ರಸಾರ ಮಾಡತೊಡಗಿದರೆ ಲಿಂಗಾಯತ ಧರ್ಮ ಜಾಗತಿಕ ಧರ್ಮ ವಾಗುತ್ತದೆ ಎಂದು ಹೇಳುತ್ತಿದ್ದರು ಡಾ. ಎಂ.ಎಂ. ಕಲಬುರ್ಗಿಯವರು.

    ಹಾಗಾಗಿ ಸಪ್ಟೆಂಬರ್ ತಿಂಗಳಲ್ಲಿ ನಡೆಯುವ ಬಸವ ಸಂಸ್ಕ್ರತಿ ಅಭಿಯಾನ ಯಶಸ್ಸು ಕಾಣಲಿದೆ , ಇದು ಬಸವ ತತ್ವ ಪ್ರಸಾರದಲ್ಲಿ ಒಂದು ಹೊಸ ಯುಗವನ್ನು ಹುಟ್ಟುಹಾಕಲಿದೆ. ಎಲ್ಲ ಪೂಜ್ಯರಿಗೂ ಶರಣು ಶರಣಾರ್ಥಿಗಳು.

  • Good movement.lingayat all come together.some sub sector are un organised should be supported on par with other artisans, like kammar,Kumbar,medar,badiga,agasa etc.Thease communities are poor, don’t get benefits as are treated as Lingayat

    • ಜಯದೇವ ಬಸವರಾಜಪ್ಪ ಕೆರೂಡಿ.. ಹಂಸಬಾವಿ (ವಕೀಲರು) says:

      ಲಿಂಗಾಯತ ಧರ್ಮದ ಅಸ್ತಿತ್ವಕ್ಕಾಗಿ ಹಾಗೂ ಬಸವ ತತ್ವದ ಮತ್ತು ಲಿಂಗಾಯತ ಧರ್ಮದ ಅನುಯಾಯಿಗಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಆಸ್ತಿ ಅಂತಸ್ತು ಅಧಿಕಾರ ಎಲ್ಲವನ್ನೂ ಬದಿಗಿರಿಸಿ ಕಾರ್ಯಕ್ರಮದ ವಿಚಾರಧಾರೆಗಳನ್ನು ಜಾರಿಗೆ ತರುವುದು ಬಹಳ ಅತ್ಯವಶ್ಯವಾಗಿರುತ್ತದೆ.. ಎಲ್ಲ ಪೂಜ್ಯರಿಗೂ ಶರಣು ಶರಣಾರ್ಥಿಗಳು..
      💐💐💐💐💐👏👏👏👏

      • ಎಲ್ಲಾ ಲಿಂಗಾಯತ ಸ್ವಾಮಿಗಳು ಸೇರಿ ಪ್ರತಿ ವರ್ಷಕ್ಕೆ ಒಂದು ಬಾರಿ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಿ ಆಗ ಲಿಂಗಾಯತ ಧರ್ಮ ಏಳಿಗೆಯನ್ನು ಕಾಣಲಿ

  • ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಎಲ್ಲ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಪ್ರಾರಂಭವಾಗುತ್ತಿರುವ ಈ “ಬಸವ ಸಂಸ್ಕೃತಿ ಅಭಿಯಾನ” ವು, ಎಲ್ಲ ಲಿಂಗಾಯತರಿಗೆ ಮತ್ತು ಬಸವಾಭಿಮಾನಿಗಳಿಗೆ ಬಹಳ ಸಂತಸ ತರುವ ವಿಷಯವಾಗಿದೆ. ಜೊತೆಗೆ, ಈ ಅಭಿಯಾನದ ಸಮಯದಲ್ಲಿ, ಜಾತಿ ಜನಗಣತಿಯ ಧರ್ಮ ಕಾಲಂನಲ್ಲಿ “ಲಿಂಗಾಯತ” ಎಂದೂ, ಜಾತಿ ಕಾಲಂ ನಲ್ಲಿ ತಮ್ಮ ತಮ್ಮ ಕಾಯಕ/ವೃತ್ತಿಯ ಹೆಸರನ್ನು ನಮೂದಿಸಬೇಕು ಎನ್ನುವುದನ್ನು ನಿರ್ಧರಿಸಿ, ಅದರಂತೆ ಎಲ್ಲ ಲಿಂಗಾಯತ ಧರ್ಮಿಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಒತ್ತು ಕೊಡುವ ಬಗ್ಗೆ ಈ ಧಾರವಾಡದ ಸಭೆಯಲ್ಲಿ ನಿರ್ಣಯಿಸಿರುವುದು ಇನ್ನೂ ಸಂತೋಷಕರ ವಿಷಯವಾಗಿದೆ.

    ಯಾವುದೇ ರೀತಿಯಿಂದ ನೋಡಿದರೂ, ಈ ಬಸವ ಸಂಸ್ಕೃತಿ ಅಭಿಮಾನವು ಯಾವುದೇ ಅಡೆತಡೆ ಇಲ್ಲದೆ, ಅರ್ಥಪೂರ್ಣವಾಗಿ ನಡೆಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಬಸವಾದಿ ಶರಣರ ಆಶಯವನ್ನು ಪೂರ್ಣಗೊಳಿಸಲು ಸುಮಾರು ಐವತ್ತು ವರ್ಷಗಳ ಕಾಲ, ಪೂಜ್ಯ ಲಿಂಗಾನಂದ ಸ್ವಾಮೀಜಿಯವರು ಮತ್ತು ಜಗದ್ಗುರು ಪೂಜ್ಯ ಮಾತೆ ಮಹಾದೇವಿ ತಾಯಿಯವರು ಪಟ್ಟ ಪರಿಶ್ರಮ ಹಾಗೂ ಡಾ. ಎಂ. ಎಂ. ಕಲ್ಬುರ್ಗಿಯವರ ಪ್ರಯತ್ನ ಸಾರ್ಥಕವಾಗುವ ಕಾಲ ಸನ್ನಿಹಿತವಾಗಿದೆ ಎಂದು ಅನಿಸುತ್ತಿದೆ.
    ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸುತ್ತೇವೆ.

    ನಂದಿಕುಮಾರ ಪಾಟೀಲ್ (ನಂಪಾ) ವಕೀಲರು ಮತ್ತು ಅಧ್ಯಕ್ಷರು, ರಾಷ್ಟ್ರೀಯ ಬಸವದಳ ಚಿಂಚೋಳಿ

  • ನಿಜವಾಗಿಯೂ ಈ ಕಾರ್ಯಕ್ರಮದ ಅವಶ್ಯಕತೆ ಇದೆ…ಸ್ವಾಗತಾರ್ಹ ನಿಲುವು.

    • ಈ ಕಾರ್ಯಕ್ರಮ ದ ಅವಶ್ಯಕತೆ. ಇದೆ ಹಾಗೂ ಈ. ಕಾರ್ಯಕ್ರಮದಲ್ಲಿ ಇನ್ನು ಹೆಚ್ಚಿನ
      ಧರ್ಮದ ಅಭಿವೃದ್ಧಿ ಪರ ನಿಲುವುಗಳು. ಬರಲಿ

  • Om Shri Gurbasavalingay namah .Namaste swamijigalagalu koduvadarinda Kranti yagabahuda all lingayat math swami’s to good result of our lingayat cumminity pls God bless u thanks

  • ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಎಲ್ಲ ಬಸವ ಪರ ಸಂಘಟನೆಗಳು ಜೊತೆಗೂಡಿ ನಡೆಸುತ್ತಿರುವ “ಬಸವ ಸಂಸ್ಕೃತಿ ಅಭಿಯಾನ” ನಿಜಕ್ಕೂ ಒಂದು ಒಳ್ಳೆಯ ಪ್ರಯತ್ನ. ಅನೇಕ ಕಾರಣಗಳಿಂದ ಒಡೆದು ಹಂಚಿ ಹೋಗಿರುವ ಲಿಂಗಾಯತ ಸಮಾಜ ಒಗ್ಗೂಡಲು ಈ ಅಭಿಯಾನ ಮುನ್ನುಡಿ ಬರೆಯಲಿ. ಪೂಜ್ಯ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಪೂಜ್ಯ ಲಿಂ. ಡಾ.ಮಹಾಂತ ಅಪ್ಪಗಳವರು ಕಂಡ ಕನಸು ಸಾಕಾರವಾಗುವ ಲಕ್ಷಣಗಳು ಗೋಚರಿಸುತ್ತಿವೆ.
    ಜಾತಿ ಜನಗಣತಿಯ ಕುರಿತು ನಮ್ಮ ಜನರಲ್ಲಿ ಅರಿವು ಮೂಡಿಸುವ ಕಾರ್ಯದ ಕುರಿತು ನಡೆದ ಚರ್ಚೆಯು ಸ್ತುತ್ಯಾರ್ಹ..

    🙏🙏 ಜೈ ಬಸವೇಶ 🙏🙏

    • Sir am all so lingayat but ….it’s not a religion ..it is a cast…comes under hindu religion…why confusing lingayats

  • Very welcome move to consolidate the Basava Philosophy and Lingayat Religion.

  • ಈಗ ಬಸವ ಕಲ್ಯಾಣದಲ್ಲಿ ರಂಭಾಪುರಿ ಜಗದ್ಗುರುಗಳು ದಸರಾ ದರ್ಬಾರನ್ನು ನಡೆಸಲು ಶಿವಾಚಾರ್ಯ ಮಠಧಿಪತಿಗಳು ನಿರ್ಧಾರಿಸಿ ತಯ್ಯಾರಿ ನಡೆಸಿರುತ್ತಾರೆ.ಬಸವನ ಭೂಮಿಯಲ್ಲಿ ತಮ್ಮ ರೇಣುಕರ ಪ್ರಭಾವನ್ನು ಹರಡಿ ಸಮಾಜದಲ್ಲಿ ರಾಡಿ ಎಬ್ಬಿಸಲು ಕೆಲ ಸ್ಥಾಪಿತ ಮಠದ ಸ್ವಾಮಿಗಳು ತಾರಾತುರಿ ನಡೆಸಿದ್ದಾರೆ. ಇದಕ್ಕೆ ನಾವು ಕೆಲವು ಪ್ರಶ್ನೆ ಗಳನ್ನು ಎತ್ತಿ ಅವರನ್ನು ಬಸವ ತತ್ವದ ಮಾರ್ಗಕ್ಕೆ ಬರುವಂತೆ, ಅಡ್ಡ ಪಲ್ಲಕಿ ತ್ಯಜಿಸುವ ಹಾಗೆ ಮನ ವೊಲಿಸಬೇಕು.ಇದಕ್ಕೆ ಎಲ್ಲ ಬಸವ ಭಕ್ತರು ಒಟ್ಟಾಗಿ ಕಾರ್ಯಕ್ರಮ ಕೈಕೊಳ್ಳಬೇಕು. ಇದಕ್ಕಾಗಿ ನಾವು ಸಿದ್ದರಾಗಬೇಕು.

Leave a Reply

Your email address will not be published. Required fields are marked *