ಬಸವ ಸಂಸ್ಕೃತಿ ಅಭಿಯಾನದ ಸಿದ್ದತೆಯ ಬಗ್ಗೆ ಹಳಿಯಾಳದ ಶರಣ ಸಾಹಿತಿ, ಪತ್ರಕರ್ತೆ ಸುಮಂಗಲಾ ಅಂಗಡಿ ಅವರ ಪ್ರತಿಕ್ರಿಯೆ.
1) ನಿಮ್ಮ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿ ಬೆಂಬಲ ದೊರೆಯುತ್ತದೆ?
ಉತ್ತರ ಕನ್ನಡ (ಕಾರವಾರ) ಜಿಲ್ಲೆಯಲ್ಲಿ ಹಳಿಯಾಳ, ಮುಂಡಗೋಡ, ಶಿರ್ಸಿ, ಬನವಾಸಿ, ಜೋಯಿಡಾ ಮತ್ತು ಯಲ್ಲಾಪುರ ತಾಲೂಕಿನಲ್ಲಿ ಲಿಂಗಾಯತರ ಜನಸಂಖ್ಯೆಯಿದೆ. ಜಿಲ್ಲೆಯ ಅತ್ತಿವೇರಿಯ ಮಾತೆ ಬಸವೇಶ್ವರಿ, ಉಳವಿಯ ಶ್ರೀ ಚನ್ನಬಸವ ಸ್ವಾಮೀಜಿ ಮತ್ತು ಬನವಾಸಿ ಶ್ರೀಗಳಿಂದ ಬೆಂಬಲ ದೊರೆಯುವುದು.
2) ಅಭಿಯಾನದ ಸ್ವರೂಪ ಮತ್ತು ಕಾರ್ಯಕ್ರಮಗಳು ನಿಮ್ಮ ಜಿಲ್ಲೆಗೆ ಸೂಕ್ತವೇ…
ಆಯೋಜಕರು ಅಭಿಯಾನದ ಸ್ವರೂಪ ಮತ್ತು ಕಾರ್ಯಕ್ರಮಗಳನ್ನು ಅವರು ಘೋಷಿಸಿದಂತೆ ಪರಿಣಾಮಕಾರಿಯಾಗಿ ನಡೆಸಬಹುದು. ಅದಕ್ಕಾಗಿ ಪೂರ್ವಭಾವಿ ಸಭೆಯನ್ನು ಕರೆಯಬಹುದು.
3) ನಿಮ್ಮ ಜಿಲ್ಲೆಯಲ್ಲಿ ಅಭಿಯಾನ ಸಫಲವಾಗಿ ನಡೆಯಲು ಯಾವ ರೀತಿಯ ಪೂರ್ವಸಿದ್ಧತೆಯ ಅಗತ್ಯವಿದೆ?
ನಮ್ಮ ಜಿಲ್ಲೆಯಲ್ಲಿ ಅಭಿಯಾನ ಸಫಲವಾಗಿ ನಡೆಸಲು ಪೂರ್ವಭಾವಿ ಸಭೆ ಕರೆದು, ಆಯೋಜಕರು ಸೂಚಿಸಿದರೆ ಪೂರ್ವಸಿದ್ಧತೆಯನ್ನು ನಾವು ಮಾಡಿಕೊಳ್ಳುತ್ತೇವೆ.
4) ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾಗಿರುವ ಸಂಘಟನೆಗಳು, ಮಠ, ಗುರುಗಳನ್ನು ಹೆಸರಿಸುತ್ತೀರಾ? ಅವರಿಂದ ಯಾವ ರೀತಿಯ ಬೆಂಬಲ ನಿರೀಕ್ಷಿಸಬಹುದು?
ಅಭಿಯಾನದಲ್ಲಿ ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು ಅಷ್ಟೇ ನಮ್ಮ ಜಿಲ್ಲೆಯಲ್ಲಿರುವುದು. ಅತ್ತೀವೇರಿಯ ಪೂಜ್ಯ ಮಾತೆ ಬಸವೇಶ್ವರಿ ತಾಯಿಯವರು, ಲಿಂಗಾಯತ ಮಠಾಧೀಶರ ಒಕ್ಕೂಟದ ಪದಾಧಿಕಾರಿಗಳೂ ಆಗಿದ್ದಾರೆ. ಅವರ ಮುಂದಾಳತ್ವದಲ್ಲಿ ಪ್ರಾರಂಭಿಸಬಹುದು. ಉಳವಿಯ ಚನ್ನಬಸವ ಶ್ರೀಗಳು, ಬನವಾಸಿ ಶ್ರೀಗಳು, ಶಿರಸಿಯ ಶ್ರೀಗಳ ಬೆಂಬಲ ಸಿಗುವ ನಿರೀಕ್ಷೆಯಿದೆ.
5) ಅಭಿಯಾನವನ್ನು ಸಫಲವಾಗಿ ನಡೆಸುವಲ್ಲಿ ಏನಾದರು ಸಮಸ್ಯೆಯಾಗಬಹುದೇ?
ಅಭಿಯಾನ ಸಫಲವಾಗಿ ನಡೆಯಲು ಯಾವುದೇ ಸಮಸ್ಯೆಯಾಗದು.