ಸಾಣೇಹಳ್ಳಿ
‘ನಾಲ್ಕು ವರ್ಷಗಳಿಂದ ದೇವನಹಳ್ಳಿ ಮತ್ತು ಚನ್ನಪಟ್ಟಣದ 13 ಹಳ್ಳಿಯ ಕೃಷಿಕರು ತಮ್ಮ ಜಮೀನನ್ನು ವಶಪಡಿಸಿಕೊಳ್ಳದಂತೆ ಹೋರಾಟ ಮಾಡಿದ್ದು ಕೊನೆಗೂ ಫಲ ಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನ ಸ್ವಾಗತಾರ್ಹ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಮತ್ತು ಹೋರಾಟಗಾರರ ಕಾಳಜಿ, ನೋವು ಅರ್ಥ ಮಾಡಿಕೊಂಡು ರೈತರ ಭೂಮಿಯನ್ನು ರೈತರಿಗೆ ನೀಡುವ ನಿರ್ಣಯ ತೆಗೆದುಕೊಂಡಿರುವುದು ಅಭಿನಂದನಾರ್ಹ. ಮುಖ್ಯಮಂತ್ರಿ ಕೃಷಿಕರಾಗಿ ಮತ್ತು ಬಸವತತ್ವದ ಅನುಯಾಯಿಗಳಾಗಿ ಯೋಗ್ಯ ತೀರ್ಮಾನ ತೆಗೆದುಕೊಂಡಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ಒಕ್ಕಲಿಬ್ಬಿಸಬಾರದು ಎನ್ನುವ ಅರಿವು ಅವರಿಗೆ ಮೂಡಿರುವುದು ಸ್ವಾಗತಾರ್ಹ’ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.