ಬಸವಕಲ್ಯಾಣ
ನಗರದ ಅನುಭವ ಮಂಟಪ ಪರಿಸರದಲ್ಲಿ ಜುಲೈ 27, 2025ರ ರವಿವಾರ ಬೆಳಿಗ್ಗೆ 9:00ರಿಂದ 5:30ರವರೆಗೆ ಒಂದು ದಿನದ ಶರಣ ತತ್ವ ಶಿಬಿರ ನಡೆಯಲಿದೆ.
ಶರಣ ಚಳುವಳಿ ಮತ್ತು ಲಿಂಗಾಯತ ಧರ್ಮದ ಉದಯ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತಾದ ಚಿಂತನೆ ನಡೆಯಲಿದೆ. ಶರಣ ಸಂಸ್ಕೃತಿ ವಿಚಾರ ವೇದಿಕೆ ಕಾರ್ಯಕ್ರಮ ಆಯೋಜಿಸಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯಪುರದ ಶರಣತತ್ವ ಚಿಂತಕರಾದ ಡಾ. ಜೆ. ಎಸ್. ಪಾಟೀಲ ಪಾಠ ಮಾಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶಿಬಿರ ಸಂಯೋಜಕರಾದ ಶಿವಕುಮಾರ ಶೆಟಗಾರ, ರವೀಂದ್ರ ಕೋಳಕೂರ, ಆಕಾಶ ಖಂಡಾಳೆ ವಿನಂತಿಸಿದ್ದಾರೆ.
